IND vs PAK: ಪ್ರಸಕ್ತ ದುಬೈನಲ್ಲಿ ನಡೆಯುತ್ತಿರುವ ಭಾರತ ಮತ್ತು ಪಾಕಿಸ್ತಾನ ಪಂದ್ಯವು ರೋಚಕ ಹಾದಿಯತ್ತ ಮಂದಗತಿಯಲ್ಲಿ ಸಾಗುತ್ತಿದ್ದು, ಮೊದಲ ಇನ್ನಿಂಗ್ಸ್ ಇದೀಗ ಮುಕ್ತಾಯಗೊಂಡಿದೆ. 49.4 ಓವರ್ ಅಂತ್ಯಕ್ಕೆ ಆಲ್ಔಟ್ ಆದ ಪಾಕ್, 241 ರನ್ ಕಲೆಹಾಕಲು ಮಾತ್ರ ಶಕ್ತವಾಯಿತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಪಾಕಿಸ್ತಾನ, ಭಾರತಕ್ಕೆ ಫೀಲ್ಡಿಂಗ್ ಮಾಡುವಂತೆ ಆಹ್ವಾನಿಸಿತು. ಅಂತೆಯೇ ಬ್ಯಾಟ್ ಮಾಡಲು ಕಣಕ್ಕಿಳಿದ ಆರಂಭಿಕರಾದ ಬಾಬರ್ ಆಜಮ್ ( 26 ಎಸೆತ, 23 ರನ್) ಮತ್ತು ಇಮಾಮ್ (26 ಎಸೆತ, 10 ರನ್) ಗಳಿಸಿ, ಆರಂಭಿಕ ಹಂತದಲ್ಲೇ ತಂಡವನ್ನು ಸಂಕಷ್ಟಕ್ಕೆ ಸಿಲುಕಿಸಿದರು. ಇವರ ನಂತರದಲ್ಲಿ ಅಖಾಡಕ್ಕಿಳಿದ ಕ್ಯಾಪ್ಟನ್ ಮೊಹಮ್ಮದ್ ರಿಜ್ವಾನ್ (77 ಎಸೆತ, 46 ) ಮತ್ತು ಸೌದ್ ಶಕೀಲ್ (76 ಎಸೆತ. 62) ರನ್ ಬಾರಿಸುವ ಮೂಲಕ ತಂಡದ ಮೊತ್ತವನ್ನು 200ರ ಗಡಿದಾಟಿಸಲು ಸಹಾಯ ಮಾಡಿದರು.
ಪಾಕ್ ಬ್ಯಾಟರ್ಗಳನ್ನು ದುಃಸ್ವಪ್ನದಂತೆ ಕಾಡಿದ ಟೀಮ್ ಇಂಡಿಯಾ ಬೌಲರ್ಗಳ ಪೈಕಿ ಸ್ಪಿನ್ ಮಾಂತ್ರಿಕ ಕುಲ್ದೀಪ್ ಯಾದವ್ ಮೂರು ವಿಕೆಟ್ ಕಬಳಿಸಿದರೆ, ವೇಗಿ ಹಾರ್ದಿಕ್ ಪಾಂಡ್ಯ ಎರಡು ವಿಕೆಟ್ ಪಡೆದರು. ಇನ್ನು ರವೀಂದ್ರ ಜಡೇಜಾ ಮತ್ತು ಅಕ್ಸರ್ ಪಟೇಲ್, ಹರ್ಷಿತ್ ರಾಣಾ ತಲಾ ಒಂದು ವಿಕೆಟ್ ಪಡೆದು ತಂಡದ ಪರ ಮಿಂಚಿದರು. 242 ರನ್ಗಳ ಗುರಿಯನ್ನು ಬೆನ್ನಟ್ಟಲಿರುವ ಟೀಮ್ ಇಂಡಿಯಾ, ಹೇಗೆ ಕಮಾಲ್ ಮಾಡಲಿದೆ? ಎಂಬುದು ಸದ್ಯ ಕ್ರಿಕೆಟ್ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಕೆರಳಿಸಿದೆ.