IND vs NZ: ಇಂದು (ಮಾ.02) ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರನೇ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ಕಿವೀಸ್ ಪಡೆ, ಟೀಮ್ ಇಂಡಿಯಾಗೆ ಬ್ಯಾಟ್ ಮಾಡವಂತೆ ಆಹ್ವಾನಿಸಿದೆ. ಆದರೆ, ಆರಂಭಿಕ ಹಂತದಲ್ಲೇ ಭಾರತ ತಂಡಕ್ಕೆ ಭಾರೀ ಆಘಾತ ಎದುರಾಗಿದೆ.
ನ್ಯೂಜಿಲೆಂಡ್ ಬೌಲರ್ಗಳ ಎದುರು ಅಬ್ಬರಿಸಲು ಓಪನಿಂಗ್ ಬಂದ ಕ್ಯಾಪ್ಟನ್ ರೋಹಿತ್ ಶರ್ಮ ಮತ್ತು ಶುಭಮನ್ ಗಿಲ್, ಮೊದಲ ಮೂವರು ಓವರ್ ಅಂತ್ಯದೊಳಗೆ ತಮ್ಮ ವಿಕೆಟ್ ಒಪ್ಪಿಸಿ ಪೆವಿಲಿಯನ್ನತ್ತ ಮುಖಮಾಡಿದರು. ಅವರ ಬೆನ್ನಲ್ಲೇ ವಿರಾಟ್ ಕೊಹ್ಲಿ ಕೂಡ ಔಟ್ ಆದರು. ಇದು ಟೀಮ್ ಇಂಡಿಯಾ ಅಭಿಮಾನಿಗಳನ್ನು ಅಕ್ಷರಶಃ ಅಚ್ಚರಿಗೆ ದೂಡಿದ್ದು, ಉತ್ತಮ ಆರಂಭ ಪಡೆಯಲು ತಂಡ ವಿಫಲವಾಯಿತು ಎಂಬ ಬೇಸರವನ್ನು ಪಂದ್ಯದ ಕೊನೆಯವರೆಗೂ ಹೊರುವಂತೆ ಮಾಡಿದೆ.
ರೋಹಿತ್ ಶರ್ಮ ( 17 ಎಸೆತ, 15 ರನ್)
ಶುಭಮನ್ ಗಿಲ್ (7 ಎಸೆತ, 2 ರನ್)
ವಿರಾಟ್ ಕೊಹ್ಲಿ (14 ಎಸೆತ, 11 ರನ್)