IND vs ENG: ಪ್ರಸಕ್ತ ಆಂಗ್ಲರ ನಾಡಿನಲ್ಲಿ ನಡೆಯುತ್ತಿರುವ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್ 2-1 ಅಂತರದಲ್ಲಿ ಮುನ್ನಡೆಯನ್ನು ಸಾಧಿಸಿದೆ. ಇಂದು ಐದನೇ ಟೆಸ್ಟ್ನ ಮೊದಲ ಇನ್ನಿಂಗ್ಸ್ನಲ್ಲಿ 224 ರನ್‌ಗಳಿಗೆ ಆಲ್ಔಟ್ ಆದ ಟೀಮ್ ಇಂಡಿಯಾ, ಈ ಪಂದ್ಯವನ್ನು ಗೆಲ್ಲಲು ಶತಾಯ ಗತಾಯ ಪ್ರಯತ್ನದಲ್ಲಿ ತೊಡಗಿದೆ.
ಲಂಡನ್‌ನ ಕೆನ್ನಿಂಗ್ಟನ್ ಓವಲ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಐದನೇ ಟೆಸ್ಟ್‌ನಲ್ಲಿ ಭಾರತ 224 ರನ್‌ಗಳಿಗೆ ಆಲೌಟ್ ಆಗಿದ್ದು, ತಂಡದ ಪರ ಕರುಣ್ ನಾಯರ್ (57) ಅರ್ಧಶತಕ ಗಳಿಸಿದರು. ಸಾಯಿ ಸುದರ್ಶನ್ (38) ಮತ್ತು ವಾಷಿಂಗ್ಟನ್ ಸುಂದರ್ (26) ಕೊನೆಯವರೆಗೂ ಆಡಿದರು. ಇನ್ನು ಇಂಗ್ಲೆಂಡ್ ಪರ ಐದು ವಿಕೆಟ್‌ಗಳನ್ನು ಕಬಳಿಸಿದ ಗಸ್ ಅಟ್ಕಿನ್ಸನ್, ಗಿಲ್ ಪಡೆಯ ಬ್ಯಾಟರ್ಗಳಿಗೆ ದುಃಸ್ವಪ್ನದಂತೆ ಕಾಡಿದರು.
ಶುಬ್‌ಮನ್ ಗಿಲ್ (21), ಧ್ರುವ್ ಜುರೆಲ್ (19), ರವೀಂದ್ರ ಜಡೇಜಾ (9), ಕೆ.ಎಲ್. ರಾಹುಲ್ (14) ಮತ್ತು ಯಶಸ್ವಿ ಜೈಸ್ವಾಲ್ (2) ರನ್ ಗಳಿಸುವ ಮೂಲಕ ಭರ್ಜರಿ ಪ್ರದರ್ಶನ ನೀಡಲು ವಿಫಲರಾದರು. ಇಂಗ್ಲೆಂಡ್ ಪರ ಗಸ್ ಅಟ್ಕಿನ್ಸನ್ ಐದು ವಿಕೆಟ್‌ಗಳೊಂದಿಗೆ ಬೌಲರ್‌ಗಳಲ್ಲಿ ಉತ್ತಮವಾಗಿ ಕಂಡರು. ಅವರ ಬಳಿಕ ಜೋಶ್ ಟಾಂಗ್ ಮೂರು ವಿಕೆಟ್‌ಗಳನ್ನು ಪಡೆದರೆ, ಕ್ರಿಸ್ ವೋಕ್ಸ್ ಒಂದು ವಿಕೆಟ್ ಕಬಳಿಸಿದ್ದಾರೆ.
ಇದನ್ನೂ ಓದಿ: ಏಕತಾ ಪ್ರತಿಮೆಗೆ ಭೇಟಿ ನೀಡಿದ ಸಿಎಂ ಒಮರ್ ಅಬ್ದುಲ್ಲಾ; ಇದು ಏಕತೆಯ ಸಂದೇಶ ಎಂದ ಮೋದಿ! | Omar Abdullah
ಎರಡನೇ ದಿನದಂದು 6 ವಿಕೆಟ್‌ಗೆ 204 ರನ್‌ಗಳೊಂದಿಗೆ ಆಟ ಪುನರಾರಂಭಿಸಿದ ಭಾರತ, ಇನ್ನೂ 20 ರನ್‌ಗಳನ್ನು ಸೇರಿಸಿತು ಮತ್ತು ಉಳಿದಿದ್ದ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡಿತು. ಎಂಟು ವರ್ಷಗಳ ಬಳಿಕ ಮತ್ತೇ ತಂಡಕ್ಕೆ ಮರಳಿದ್ದ ಕರುಣ್ ನಾಯರ್ ಅರ್ಧಶತಕ ಬಾರಿಸಿ ಗಮನ ಸೆಳೆದರು,(ಏಜೆನ್ಸೀಸ್).