kanpur stadium 
ಕ್ರೀಡೆ

ind-vs-ban | ಕಾನ್ಪುರದಲ್ಲಿ ನಡೆಯುತ್ತಿದ್ದ ಭಾರತ-ಬಾಂಗ್ಲಾಟೆಸ್ಟ್ ಪಂದ್ಯ ಮಳೆಗೆ ಆಹುತಿ?!

ನವದೆಹಲಿ: ಕಾನ್ಪುರದಲ್ಲಿ ಭಾರತ ಮತ್ತು ಬಾಂಗ್ಲಾದೇಶ(ind-vs-ban) ನಡುವೆ ನಡೆಯುತ್ತಿರುವ ಎರಡನೇ ಟೆಸ್ಟ್ ನ 2ನೇ ದಿನ್ ಪಂದ್ಯ ಮಳೆಯಿಂದಾಗಿ ಪ್ರಾರಂಭವಾಗುವುದು ಡೌಟ್​ ಎನ್ನಲಾಗುತ್ತಿದೆ.

ಶುಕ್ರವಾರ(ಸೆ.27)ದ ಮೊದಲ ದಿನ, ಆಟವು ಒಂದೂವರೆ ಗಂಟೆ ಮುಂಚಿತವಾಗಿ ಕೊನೆಗೊಂಡಿತು. ಎರಡನೇ ದಿನವಾದ ಶನಿವಾರ(ಸೆ.28) ಮಳೆಯಿಂದಾಗಿ ನಿಗದಿತ ಸಮಯಕ್ಕೆ ಆಟ ಆರಂಭವಾಗಲಿಲ್ಲ. ಮಳೆ ಮುಂದುವರಿದಿರುವುದರಿಂದ ಶನಿವಾರ ಆಟ ಪ್ರಾರಂಭವಾಗುವ ಲಕ್ಷಣ ಕಾಣುತ್ತಿಲ್ಲ.

ಎಡಬಿಡದೆ ಸುರಿಯುತ್ತಿರುವ ಮಳೆ: ind-vs-ban

ಪಂದ್ಯ ಬೆಳಗ್ಗೆ 9.30ಕ್ಕೆ ಆರಂಭವಾಗಬೇಕಿತ್ತು ಆದರೆ ನಿನ್ನೆಯಿಂದ ಎಡಬಿಡದೆ ಮಳೆ ಸುರಿಯುತ್ತಿರುವುದರಿಂದ ಆಟವಾಡಲು ಸಾಧ್ಯವಾಗುತ್ತಿಲ್ಲ. ಮುಂಜಾನೆಯಿಂದ ನೆಲಕ್ಕೆ ಪ್ಲಾಸ್ಟಿಕ್​ ಟಾರ್ಪಲಿನ್​ ಬಳಸಿ ಮುಚ್ಚಿದ್ದರೂ ಮಧ್ಯಾಹ್ನ 12ರ ತನಕ ತೆಗೆದಿಲ್ಲ. ಇದರೊಂದಿಗೆ ದಿನವಿಡೀ ಇದೇ ಪರಿಸ್ಥಿತಿ ಉಳಿಯಲಿದೆಯೇ ಎಂಬುದು ಅಭಿಮಾನಿಗಳ ಆತಂಕ.

ಪಂದ್ಯವನ್ನು ನೋಡಲು ಅಭಿಮಾನಿಗಳು ಕಾಯುತ್ತಿದ್ದರು. ಆದರೆ ಮಳೆಯ ಕಾರಣ ಮೊದಲ ದಿನದಾಟ ಪೂರ್ಣಗೊಳ್ಳದೆ ಎರಡನೇ ದಿನ ನಿಗದಿತ ಸಮಯಕ್ಕೆ ಆಟ ಆರಂಭವಾಗಲಿಲ್ಲ. ಕಾನ್ಪುರದ ಹವಾಮಾನವು ಈ ಸಮಯದಲ್ಲಿ ಪಂದ್ಯಕ್ಕೆ ಸೂಕ್ತವಾಗಿಲ್ಲ ಎನ್ನಲಾಗುತ್ತಿದೆ.