ಕ್ರೀಡೆ

IND vs AFG, CWC 2023: ನವೀನ್ ಉಲ್-ಹಕ್ ಅಖಾಡಕ್ಕೆ ಬರುತ್ತಿದ್ದಂತೆ 'ಕೊಹ್ಲಿ…ಕೊಹ್ಲಿ' ಎಂದ ಕ್ರಿಕೆಟ್​ ಫ್ಯಾನ್ಸ್​

ನವದೆಹಲಿ: ಐಪಿಎಲ್​ 2022ರ ಪಂದ್ಯವೊಂದರಲ್ಲಿ ರಾಯಲ್​ ಚಾಲೆಂಜೆರ್ಸ್​ ಬೆಂಗಳೂರು ತಂಡದ ಸ್ಟಾರ್​ ಆಟಗಾರ ವಿರಾಟ್​ ಕೊಹ್ಲಿ ಮತ್ತು ಲಕ್ನೋ ಸೂಪರ್‌ಜೈಂಟ್ಸ್ ತಂಡದ ವೇಗಿ ನವೀನ್​ ಉಲ್-ಹಕ್ ನಡುವೆ ನಡೆದಿದ್ದ ಮಾತಿನ ಜಟಾಪಟಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಇಬ್ಬರು ಆಟಗಾರರ ನಡುವೆ ಇಂದಿಗೂ ಈ ವೈರತ್ವ ಇರದೇ ಹೋದರೂ, ಕ್ರಿಕೆಟ್​ ಅಭಿಮಾನಿಗಳಲ್ಲಿ ಇದೇ ಎಂಬುದಕ್ಕೆ ಇಂದು ನಡೆದ ಭಾರತ ಮತ್ತು ಆಫ್ಘಾನಿಸ್ತಾನ ಪಂದ್ಯ ಸಾಕ್ಷಿಯಾಗಿದೆ.

ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡ ಆಫ್ಘಾನಿಸ್ತಾನ ತನ್ನ ಆಟವನ್ನು ಮುಂದುವರಿಸಿತ್ತು. ಈ ವೇಳೆ ಶೀಘ್ರವೇ ವಿಕೆಟ್​ಗಳು ಪತನಗೊಂಡ ಬೆನ್ನಲ್ಲೇ ವೇಗಿ ನವೀನ್-ಉಲ್-ಹಕ್ ಬ್ಯಾಟಿಂಗ್‌ಗೆ ಸ್ಟೇಡಿಯಂ ಪ್ರವೇಶಿಸಿದರು. ಪಂದ್ಯ ಪ್ರಾರಂಭವಾದಗಿನಿಂದಲೂ ನವೀನ್​ ಆಗಮನಕ್ಕೆ ಕಾದು ಕುಳಿತ್ತಿದ್ದ ವಿರಾಟ್​ ಫ್ಯಾನ್ಸ್​, ಬ್ಯಾಟಿಂಗ್​ ಮಾಡಲು ಕ್ರೀಸ್​ಗೆ​ ನವೀನ್​ ಬರುತ್ತಿದ್ದಂತೆ 'ಕೊಹ್ಲಿ, ಕೊಹ್ಲಿ ಎಂದು ಘೋಷಣೆ ಕೂಗಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.

ಐಸಿಸಿ ವಿಶ್ವಕಪ್ 2023 ರಲ್ಲಿ ಭಾರತ ತನ್ನ ಎರಡನೇ ಪಂದ್ಯದಲ್ಲಿ ಅಫ್ಘಾನಿಸ್ತಾನವನ್ನು ಎದುರಿಸಿದ್ದು, ಮೊದಲು ಬ್ಯಾಟಿಂಗ್ ಆಯ್ದುಕೊಂಡು ಅಫ್ಘಾನಿಸ್ತಾನ 272-8 ರನ್ ಗಳಿಸಲಷ್ಟೇ ಶಕ್ತವಾಯಿತು.

ಇದೀಗ 50 ಓವರ್​ನಲ್ಲಿ ರನ್​ ಚೇಸ್​ ಮಾಡಲು ಅಖಾಡಕ್ಕೆ ಭಾರತ ಇಳಿಯಲಿದ್ದು, ಈ ವೇಳೆ ವಿರಾಟ್​ ಬ್ಯಾಟಿಂಗ್​ ಬಂದಾಗ ನವೀನ್​ ಬೌಲಿಂಗ್ ಮಾಡುವ​ ಮೂಲಕ ಮುಖಾಮುಖಿಯಾಗಲಿದ್ದಾರೆ. ಈ ಕ್ಷಣಕ್ಕಾಗಿ ವಿರಾಟ್​ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ ಎಂದೇ ಹೇಳಬಹುದು,(ಏಜೆನ್ಸೀಸ್).