ಕೋಲ್ಕತ: ಭರ್ಜರಿ ಫಾರ್ಮ್‌ನಲ್ಲಿರುವ 2 ಬಾರಿಯ ಚಾಂಪಿಯನ್ ಕೋಲ್ಕತ ನೈಟ್‌ರೈಡರ್ಸ್ ತಂಡ ಐಪಿಎಲ್-17ರ ತನ್ನ 12ನೇ ಲೀಗ್ ಪಂದ್ಯದಲ್ಲಿ ಐದು ಬಾರಿಯ ಚಾಂಪಿಯುನ್ ಮುಂಬೈ ಇಂಡಿಯನ್ಸ್ ಸವಾಲು ಎದುರಿಸಲಿದೆ. 2019ರ ಬಳಿಕ ಮೊದಲ ಬಾರಿಗೆ ಈಡನ್ ಗಾರ್ಡನ್ಸ್‌ನಲ್ಲಿ ಶನಿವಾರ ಉಭಯ ತಂಡಗಳು ಮುಖಾಮುಖಿಯಾಗಲಿದ್ದು, ಶ್ರೇಯಸ್ ಅಯ್ಯರ್ ಪಡೆ ಗೆಲುವಿನೊಂದಿಗೆ ಪ್ಲೇಆ್ ಸ್ಥಾನ ಖಾತ್ರಿಪಡಿಸಿಕೊಳ್ಳುವ ಹಂಬಲದಲ್ಲಿದೆ. ಟೂರ್ನಿಯಿಂದ ಈಗಾಗಲೆ ಹೊರಬಿದ್ದಿರುವ ಹಾರ್ದಿಕ್ ಪಾಂಡ್ಯ ಪಡೆ ತವರಿನಲ್ಲಿ ಅನುಭವಿಸಿದ ಸೋಲಿಗೆ ಸೇಡು ತೀರಿಸಿ ಅಂಕಪಟ್ಟಿಯಲ್ಲಿ ಗೌರವಯುತ ಸ್ಥಾನ ಪಡೆಯಲು ಎದುರು ನೋಡುತ್ತಿದೆ.
ತವರಿನ ಅಂಗಣದಲ್ಲಿ ತನ್ನ ಕೊನೇ ಪಂದ್ಯ ಆಡಲಿರುವ ಕೆಕೆಆರ್ 3 ವರ್ಷಗಳ ಬಳಿಕ ಪ್ಲೇಆ್ಗೇರುವ ತವಕದಲ್ಲಿದ್ದು, ಇದುವರೆಗೆ ಆಡಿರುವ 11 ಪಂದ್ಯಗಳ ಪೈಕಿ 8 ಜಯ, 3 ಸೋಲಿನೊಂದಿಗೆ 16 ಅಂಕ ಹೊಂದಿದ್ದು ಅಗ್ರಸ್ಥಾನ ಕಾಯ್ದುಕೊಂಡಿದೆ. ಇನ್ನೊಂದು ಗೆಲುವು ಪ್ಲೇಆ್ ಸ್ಥಾನ ಭದ್ರಪಡಿಸಲಿದೆ. ಇತ್ತ ಪ್ಲೇಆ್ ರೇಸ್‌ನಿಂದ ಹೊರಗುಳಿದ ಮೊದಲ ತಂಡ ಎನಿಸಿರುವ ಮುಂಬೈ 12 ಪಂದ್ಯಗಳಲ್ಲಿ 4 ಗೆಲುವು, 8 ಸೋಲಿನೊಂದಿಗೆ 8 ಅಂಕ ಕಲೆಹಾಕಿದೆ. ಈಡನ್ ಗಾರ್ಡನ್ಸ್‌ನಲ್ಲಿ ಉತ್ತಮ ದಾಖಲೆ ಹೊಂದಿರುವ ಮುಂಬೈ ಮತ್ತೊಂದು ಜಯದ ನಿರೀಕ್ಷೆಯಲ್ಲಿದ್ದು, ಹಿಂದಿನ ಪಂದ್ಯದಲ್ಲಿ ಸನ್‌ರೈಸರ್ಸ್ ಎದುರು 7 ವಿಕೆಟ್‌ಗಳ ಗೆಲುವು ಸಾಧಿಸಿ ಆತ್ಮವಿಶ್ವಾಸ ವೃದ್ಧಿಸಿಕೊಂಡಿದೆ.
ಮುಂಬೈಗೆ ನಾರಾಯಣ್ ಭಯ: ವಾಂಖೆಡೆ ಅಂಗಣದಲ್ಲಿ 12 ವರ್ಷಗಳ ಬಳಿಕ ಮುಂಬೈ ತಂಡವನ್ನು ಮಣಿಸಿ ಹ್ಯಾಟ್ರಿಕ್ ಗೆಲುವಿನಿಂದ ಬೀಗುತ್ತಿರುವ ಕೆಕೆಆರ್ ತಂಡದ ಹಾಲಿ ಆವೃತ್ತಿಯಲ್ಲಿ ಸ್ಥಿರ ಪ್ರದರ್ಶನ ಕಾಯ್ದುಕೊಂಡಿದೆ. ಟೀಮ್ ಇಂಡಿಯಾ ಮಾಜಿ ಆಟಗಾಋ ಗೌತಮ್ ಗಂಭೀರ್ ಮೆಂಟರ್ ಆದ ಬಳಿಕ ಹನ್ನೊಂದರ ಬಳಗದ ಬದಲಾವಣೆಯ ಕಾರ್ಯತಂತ್ರಗಳು ಲಿಸಿವೆ. ಸುನೀಲ್ ನಾರಾಯನ್ (461) ಸ್ಥಿರ ಪ್ರದರ್ಶನ ಕೆಕೆಆರ್‌ಗೆ ಯಶಸ್ಸಿಗೆ ಪ್ಲಸ್ ಪಾಯಿಂಟ್. ಸುನೀಲ್-ಫಿಲ್ ಸಾಲ್ಟ್ ಆರಂಭಿಕ ಜೋಡಿ ಹಾಲಿ ಟೂರ್ನಿಯ ಪವರ್‌ಪ್ಲೇನಲ್ಲಿ 180.86ರ ಸ್ಟ್ರೈಕ್ ರೇಟ್‌ನಲ್ಲಿ 548 ರನ್‌ಗಳಿಸಿದೆ. ವಾಂಖೆಡೆಯಲ್ಲಿ ಮುಂಬೈ ಎದುರು ಬ್ಯಾಟಿಂಗ್ ವೈಲ್ಯ ಕಂಡರೂ, ಬೌಲರ್‌ಗಳನ್ನು ಅದನ್ನು ಸರಿದೂಗಿಸಿದರು. ಜತೆಗೆ ಮಿಚೆಲ್ ಸ್ಟಾರ್ಕ್ ಾರ್ಮ್‌ಗೆ ಮರಳಿದ್ದು ಹೆಚ್ಚಿನ ಬಲ ತುಂಬಿದೆ. ವರುಣ್ ಚಕ್ರವರ್ತಿ (16 ವಿಕೆಟ್), ಹರ್ಷಿತ್ ರಾಣಾ (14) ಬೌಲಿಂಗ್‌ನಲ್ಲಿ ಬಲ ತುಂಬಲಿದ್ದಾರೆ. ನಾಯಕ ಶ್ರೇಯಸ್ ಅಯ್ಯರ್, ರಿಂಕು ಸಿಂಗ್ ಜತೆಗೆ ಆಂಡ್ರೆ ರಸೆಲ್ ಅಬ್ಬರಿಸಿದರೆ ಮುಂಬೈಗೆ ಸಂಕಷ್ಟ ಎದುರಾಗಲಿದೆ.
ಔಪಚಾರಿಕ ಕಾದಾಟ: ಟೂರ್ನಿಯಿಂದ ಅಧಿಕೃತವಾಗಿ ಹೊರಬಿದ್ದಿರುವ ಮುಂಬೈಗೆ ಉಳಿದ 2 ಲೀಗ್ ಪಂದ್ಯಗಳು ಔಪಚಾರಿಕ ಎನಿಸಿವೆ. ಹಾಲಿ ಆವೃತ್ತಿಯ ಪವರ್ ಪ್ಲೇನಲ್ಲಿ ಗರಿಷ್ಠ ವಿಕೆಟ್ ಕೈಚೆಲ್ಲಿರುವುದು ಮುಂಬೈ ಆರಂಭಿಕರ ವೈಲ್ಯಎದ್ದುಕಾಣುತ್ತಿದೆ. ರೋಹಿತ್ ಶರ್ಮ ಹಿಂದಿನ 5 ಪಂದ್ಯಗಳ ಪೈಕಿ 4ರಲ್ಲಿ ಒಂದಂಕಿ ಮೊತ್ತಕ್ಕೆ ನಿರ್ಗಮಿಸಿದ್ದಾರೆ. ಟಿ20ವಿಶ್ವಕಪ್‌ಗೆ ಮುನ್ನ ಾರ್ಮ್‌ಗೆ ಮರಳುವುದು ಅನಿವಾರ‌್ಯ. ಸೂರ್ಯಕುಮಾರ್ ಯಾದವ್ ಮತ್ತು ತಿಲಕ್ ವರ್ಮ ಹೊರತುಪಡಿಸಿ ಮುಂಬೈ ಬ್ಯಾಟಿಂಗ್ ವಿಭಾಗ ಈ ಬಾರಿ ಸದ್ದು ಮಾಡಿಲ್ಲ. ಹಾರ್ದಿಕ್ ಪಾಂಡ್ಯ ಕಳೆದ 3 ಪಂದ್ಯಗಳಲ್ಲಿ ಬೌಲಿಂಗ್‌ನಲ್ಲಿ ಲಯ ಕಂಡುಕೊಂಡಿದ್ದಾರೆ. ಜಸ್‌ಪ್ರೀತ್ ಬುಮ್ರಾ (18 ವಿಕೆಟ್) ಮಾತ್ರ ಬೌಲಿಂಗ್‌ನಲ್ಲಿ ತೃಪ್ತಿದಾಯಕ ಪ್ರದರ್ಶನ ನೀಡಿದ್ದಾರೆ. ಇವರನ್ನು ಹೊರತುಪಡಿಸಿ ಗೆರಾಲ್ಡ್ ಕೋಟ್ ಜೀ, ನುವಾನ್ ತುಷಾರ ದುಬಾರಿಯಾಗಿದ್ದಾರೆ.
ಮುಖಾಮುಖಿ: 33
ಮುಂಬೈ: 23
ಕೆಕೆಆರ್: 10
ಆರಂಭ: ರಾತ್ರಿ 7.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಸಿನಿಮಾ