ಚೆನ್ನೈ: ಪ್ಲೇಆಫ್ ಸ್ಥಾನ ಖಾತ್ರಿಪಡಿಸಿಕೊಳ್ಳುವ ಹಂಬಲದಲ್ಲಿರುವ ರಾಜಸ್ಥಾನ ರಾಯಲ್ಸ್ ತಂಡ ಐಪಿಎಲ್-17ರ ತನ್ನ 12ನೇ ಲೀಗ್ ಪಂದ್ಯದಲ್ಲಿ ಆತಿಥೇಯ ಚೆನ್ನೈ ಸೂಪರ್‌ಕಿಂಗ್ಸ್ ತಂಡವನ್ನು ಎದುರಿಸಲಿದೆ. ಚಿದಂಬರಂ ಕ್ರೀಡಾಂಗಣದಲ್ಲಿ ಭಾನುವಾರ ನಡೆಯಲಿರುವ ಪಂದ್ಯದಲ್ಲಿ ಸಿಎಸ್‌ಕೆ, ಅಗ್ರ-4ರಲ್ಲಿ ಸ್ಥಾನ ಪಡೆಯುವ ಅವಕಾಶ ವೃದ್ಧಿಸಿಕೊಳ್ಳುವ ಹಂಬಲದಲ್ಲಿದೆ. ತವರಿನ ಕೊನೇ ಲೀಗ್ ಪಂದ್ಯದಲ್ಲಿ ಅಸ್ಥಿರ ನಿರ್ವಹಣೆಯಿಂದ ಹೊರಬರುವ ನಿರೀಕ್ಷೆ ಇದೆ.
48 ಗಂಟೆಗಳ ಅಂತರದಲ್ಲಿ 2ನೇ ಪಂದ್ಯ ಆಡಲಿರುವ ಸಿಎಸ್‌ಕೆ, ಹಿಂದಿನ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಎದುರು ಸೋಲು ಅನುಭವಿಸಿದೆ. ಪ್ರಮುಖ ವೇಗಿಗಳ ಗೈರಿನಲ್ಲಿ ಟೂರ್ನಿಯುದ್ದಕ್ಕೂ ಅಸ್ಥಿರ ನಿರ್ವಹಣೆ ತೋರುತ್ತಿರುವ ಹಾಲಿ ಚಾಂಪಿಯನ್, ಲೀಗ್ ಹಂತದಲ್ಲಿ ಹೊರಬೀಳುವ ಇಕ್ಕಟ್ಟಿಗೆ ಸಿಲುಕಿದೆ. ಇದುವರೆಗೆ ಆಡಿರುವ 12 ಪಂದ್ಯಗಳಲ್ಲಿ 6 ಸೋಲು, 6 ಗೆಲುವಿನೊಂದಿಗೆ 12 ಅಂಕ ಕಲೆಹಾಕಿದ್ದು, ಇನ್ನೊಂದು ಪಂದ್ಯ ಗೆದ್ದರೂ ಪ್ಲೇಆ್ ರೇಸ್‌ನಲ್ಲಿ ಇರಲಿದೆ. ಆದರೆ ಇತರ ತಂಡಗಳ ಲಿತಾಂಶದ ಜತೆಗೆ ರನ್‌ರೇಟ್ ಮಹತ್ವ ಪಡೆದುಕೊಂಡಿದೆ. ಇತ್ತ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದು ಪ್ಲೇಆ್ ಸ್ಥಾನ ಬಹುತೇಕ ಖಾತ್ರಿಪಡಿಸಿಕೊಂಡಿರುವ ರಾಜಸ್ಥಾನ, 11 ಪಂದ್ಯಗಳಲ್ಲಿ 8 ಗೆಲುವು, 3 ಸೋಲಿನೊಂದಿಗೆ 16 ಅಂಕ ಹೊಂದಿದೆ. ಅಗ್ರ 2ರಲ್ಲಿ ಸ್ಥಾನ ಪಡೆಯಲು ಉಳಿದ ಪಂದ್ಯಗಳಲ್ಲಿ ಹೋರಾಡಲಿದೆ. ಅಗ್ರ ಎರಡು ತಂಡಗಳ ನಡುವಿನ ಕ್ವಾಲಿೈಯರ್-1ರಲ್ಲಿ ಸೋತ ತಂಡ ೈನಲ್‌ಗೇರಲು ಮತ್ತೊಂದು ಅವಕಾಶ ಹೊಂದಿರಲಿದೆ. ರಾಜಸ್ಥಾನ ಹಿಂದಿನ 2 ಪಂದ್ಯಗಳಲ್ಲಿ ಸೋತಿರುವುದು ಟೂರ್ನಿಯ ಮಹತ್ವದ ಘಟ್ಟದಲ್ಲಿ ಹಿನ್ನಡೆ ಎನಿಸಿದೆ.