Betting Platforms: ಅಕ್ರಮ ಬೆಟ್ಟಿಂಗ್ ವೇದಿಕೆಗಳಿಗೆ ಸಂಬಂಧಿತ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದಿಂದ ಸಮನ್ಸ್ ಜಾರಿಯಾದ ನಂತರ ಭಾರತೀಯ ಕ್ರಿಕೆಟ್ ಆಟಗಾರ ಸುರೇಶ್ ರೈನಾ ಬುಧವಾರ ಬೆಳಿಗ್ಗೆ ದೆಹಲಿಯ ಪ್ರಧಾನ ಕಚೇರಿಗೆ ಹಾಜರಾಗುವ ನಿರೀಕ್ಷೆ ಇದೆ.
ಇದನ್ನೂ ಓದಿ: ಇದು ವಿಶ್ವದ ಅತ್ಯಂತ ಕೊಳಕು ನಾಯಿ! ಸ್ಪರ್ಧೆ ಗೆದ್ದ ಶ್ವಾನಕ್ಕೆ 4.3 ಲಕ್ಷ ರೂ. ಬಹುಮಾನ..Worlds Ugliest Dog
ಸುದ್ದಿಮೂಲಗಳ ಪ್ರಕಾರ 1xBet ಹೆಸರಿನ ಅಪ್ಲಿಕೇಶನ್ ಬೆಟ್ಟಿಂಗ್ ಪ್ರಕರಣದಲ್ಲಿ ಆಗಸ್ಟ್ 13 ರಂದು ರೈನಾ ಅವರಿಗೆ ಏಜೆನ್ಸಿಗಳು ವಿಚಾರಣೆಗೆ ಹಾಜರಿರುವಂತೆ ತಿಳಿಸಿದ್ದರು. ಇನ್ನು ಇವರ ಹೇಳಿಕೆಯನ್ನು ED, ಪಿಎಂಎಲ್ಎ ಅಡಿಯಲ್ಲಿ ಸ್ವೀಕರಿಸಲಾಗುವುದು ಎಂದು ತಿಳಿಸಿದ್ದಾರೆ.
ವರದಿ ಪ್ರಕಾರ, ರೈನಾ ಕೆಲವು ಬೆಟ್ಟಿಂಗ್ ಆ್ಯಪ್ಗಳೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ED ಶಂಕಿಸಿದ್ದು, ವಿಚಾರಣೆ ಸಮಯದಲ್ಲಿ ED ಅರ್ಥಮಾಡಿಕೊಳ್ಳುವ ನಿರೀಕ್ಷೆಯಿದೆ. ಇನ್ನು ಅಕ್ರಮ ಬೆಟ್ಟಿಂಗ್ ಆ್ಯಪ್ಗಳು ವರ್ಷದಿಂದ ವರ್ಷಕ್ಕೆ ತಮ್ಮ ಹೆಸರುಗಳನ್ನು ಬದಲಾಯಿಸುತ್ತಲೇ ಇವೆ. ಈ ಆ್ಯಪ್ಗಳನ್ನು ಸೆಲೆಬ್ರೆಟಿಸ್ ಹಾಗೂ ಸಾಮಾಜಿಕ ಪ್ರಭಾವಿಗಳು ಪ್ರಚಾರ ಮಾಡುತ್ತಿದ್ದಾರೆ ಎಂದು ಸುದ್ದಿಮೂಲಗಳು ವರದಿ ಮಾಡಿವೆ. (ಏಜೆನ್ಸೀಸ್)