ಆಕ್ರಮ ಬೆಟ್ಟಿಂಗ್ ಆ್ಯಪ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾಜಿ ಕ್ರಿಕೆಟರ್ ಶಿಖರ್ ಧವನ್ಗೆ ತನಿಖೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ(ED) ಗುರುವಾರ ಸಮನ್ಸ್ ನೀಡಿದೆ.
ಅಲ್ಲದೆ,ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಅವರನ್ನು ಸುಮಾರು ಎಂಟು ಗಂಟೆಗಳ ಕಾಲ ವಿಚಾರಣೆ ನಡೆಸಿದ ಕೆಲವು ದಿನಗಳ ನಂತರ ಈ ಬೆಳವಣಿಗೆ ಸಂಭವಿಸಿದೆ.
1xBet ಹೆಸರಿನ ಆ್ಯಪ್‌ಗೆ ಸಂಬಂಧಿಸಿದ ಅಕ್ರಮ ಬೆಟ್ಟಿಂಗ್ ಪ್ರಕರಣದಲ್ಲಿ ಗುರುವಾರ ದೆಹಲಿಯ ಪ್ರಧಾನ ಕಚೇರಿಯಲ್ಲಿ ವಿಚಾರಣೆಗಾಗಿ ಧವನ್ ಅವರನ್ನು ಏಜೆನ್ಸಿಯ ಮುಂದೆ ಹಾಜರಾಗುವಂತೆ ಕೇಳಲಾಗಿದೆ ಎಂದು ವರದಿ ಉಲ್ಲೇಖಸಿದೆ.
ಆಕ್ರಮ ಬೆಟ್ಟಿಂಗ್ ಆಪ್ಲಿಕೇಶನ್ಗಳು ಕೋಟ್ಯಾಂತರ ರೂ. ಮೌಲ್ಯದ ಹಲವಾರು ಜನರನ್ನು ಮತ್ತು ಹೂಡಿಕೆದಾರರನ್ನು ವಂಚಿಸಿದೆ ಅಥವಾ ಭಾರೀ ಪ್ರಮಾಣದ ತೆರಿಗೆ ವಂಚಿಸಿದೆ ಎಂದು ಹೇಳಲಾದ ಇಂತಹ ಹಲವಾರು ಪ್ರಕರಣಗಳಲ್ಲಿ ಸಂಸ್ಥೆ ತನಿಖೆ ನಡೆಸುತ್ತಿದೆ.(ಏಜೆನ್ಸೀಸ್)