ಕ್ರೀಡೆ

ಆತ ಏನಾದ್ರು... Champions Trophy ಫೈನಲ್ ಪಂದ್ಯಕ್ಕೂ ಮುನ್ನ ಭಾರತ ತಂಡಕ್ಕೆ ಮಾಜಿ ಕೋಚ್ ಖಡಕ್​​ ವಾರ್ನಿಂಗ್​

ದುಬೈ: ಇಲ್ಲಿನ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಚಾಂಪಿಯನ್ಸ್ ಟ್ರೋಫಿ (Champions Trophy) ಫೈನಲ್ ಪಂದ್ಯದಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗಲಿದ್ದು, ಉಭಯ ತಂಡಗಳು ಈಗಾಗಲೇ ಭರ್ಜರಿ ತಾಲೀಮು ನಡೆಸುತ್ತಿವೆ. ಲೀಗ್ ಹಂತದಲ್ಲಿ ಈಗಾಗಲೇ ಉಭಯ ತಂಡಗಳು ಮುಖಾಮುಖಿಯಾಗಿದ್ದು, ಭಾರತ ತಂಡ ಮೇಲುಗೈ ಸಾಧಿಸಿದೆ. ಲೀಗ್​ ಹಂತದ ಸೋಲಿನ ಸೇಡನ್ನು ತೀರಿಸಿಕೊಳ್ಳಲು ನ್ಯೂಜಿಲೆಂಡ್​ ತಯಾರಿ ನಡೆಸಿದ್ದು, ಭಾನುವಾರದ (ಮಾರ್ಚ್ 09) ಪಂದ್ಯ ರೋಚಕತೆಯಿಂದ ಕೂಡಿರುವುದು ಪಕ್ಕಾ ಆಗಿದೆ.

ಹಾಲಿ ಟೂರ್ನಿಯಲ್ಲಿ (Champions Trophy) ಆಲ್ರೌಂಡ್ ಪ್ರದರ್ಶನದ ಮೂಲಕ ಗಮನ ಸೆಳೆದಿರುವ ಭಾರತ ತಂಡವು ಅಜೇಯವಾಗಿ ಫೈನಲ್ ಪ್ರವೇಶಿಸಿದ್ದು, ಫೈನಲ್ ಪಂದ್ಯದಲ್ಲಿ ಗೆದ್ದು ಐತಿಹಾಸಿಕ ದಾಖಲೆ ಬರೆಯಲು ಸಜ್ಜಾಗಿದೆ. ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರಾಹುಲ್​, ಶುಭಮನ್ ಗಿಲ್ ಉತ್ತಮ ಫಾರ್ಮ್​ನಲ್ಲಿದ್ದು, ಇವರುಗಳೇ ಕಿವೀಸ್​ ಮೇನ್ ಟಾರ್ಗೆಟ್ ಎಂದು ಹೇಳಲಾಗಿದೆ. ಇದೀಗ ಟೀಮ್ ಇಂಡಿಯಾದ ಮಾಜಿ ಕೋಚ್ ಅನಿಲ್ ಕುಂಬ್ಳೆ ಈ ಬಗ್ಗೆ ಮಾತನಾಡಿದ್ದು, ಯಾರನ್ನು ಬೇಗನ ಔಟ್ ಮಾಡಿದರೆ ಕಿವೀಸ್​ಗೆ ಲಾಭವಾಗಲಿದೆ ಎಂಬುದರ ಬಗ್ಗೆ ವಿವರಿಸಿದ್ದಾರೆ.

ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಅಕ್ಷರ್​ ಪಟೇಲ್ ಉತ್ತಮ ಪಾರ್ಟ್​​ನರ್​ಶಿಪ್ ಮಾಡಿದರೆಂದು ನಾನು ಭಾವಿಸುತ್ತೇನೆ. ಆದರೆ, ನನ್ನ ಪ್ರಕಾರ ರಾಹುಲ್ ಅಕ್ಷರ್​ಗೂ ಮೊದಲೇ ಬರಬೇಕಿತ್ತು. ಆತನನ್ನು ಯಾವ ಕ್ರಮಾಂಕದಲ್ಲಿ ಇಳಿಸಲಾಗುತ್ತಿದೆ ಎಂದರೆ 30+ ರನ್​ ಗಳಿಸುತ್ತಿದ್ದಂತೆ ತಂಡದ ಗೆಲುವು ಖಾತ್ರಿಯಾಗಲಿದೆ.

ರಾಹುಲ್ ಮೇಲೆ ಸಾಕಷ್ಟು ಒತ್ತಡ ಇದೆ. ಆತ ಉತ್ತಮವಾಗಿ ಆಡಿದೆರ ತಂಡಕ್ಕೆ ಭದ್ರ ಬುನಾದಿಯನ್ನು ಹಾಕಿಕೊಟ್ಟಂತೆ ಆಗುತ್ತದೆ. ಒಂದು ವೇಳೆ ಆತ ಏನಾದರೂ ಬೇಗನೆ ಔಟಾದರೆ ಇಡೀ ಜಗತ್ತು ಅವನ ವಿರುದ್ಧ ತಿರುಗಿ ಬೀಳುತ್ತದೆ. ಆತ ಅನೇಕ ಬಾರಿ ಒತ್ತಡದಲ್ಲಿದ್ದರೂ ತನ್ನ ಸಾಮರ್ಥ್ಯವನ್ನು ತೋರಿದ್ದಾನೆ ಎಂದು ಟೀಮ್ ಇಂಡಿಯಾ ಮಾಜಿ ಕೋಚ್ ಅನಿಲ್ ಕುಂಬ್ಳೆ ಕೆ.ಎಲ್. ರಾಹುಲ್ ಪಾತ್ರದ ಬಗ್ಗೆ ವಿವರಿಸಿದ್ದಾರೆ.