ಕ್ರೀಡೆ

ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್​ ಫೈನಲ್​ ತಾಣ ಬದಲಾವಣೆ; ಐಸಿಸಿಗೆ ಬಿಸಿಸಿಐ ಮನವಿ

ಮುಂಬೈ: ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್​ (ಡಬ್ಲ್ಯುಟಿಸಿ) ಫೈನಲ್​ ಪಂದ್ಯವನ್ನು 2027ರಿಂದ ಹೊಸ ತಾಣದಲ್ಲಿ ಆಯೋಜಿಸುವ ಬಗ್ಗೆ ಐಸಿಸಿಗೆ ಮನವಿ ಸಲ್ಲಿಸಿರುವುದಾಗಿ ಬಿಸಿಸಿಐ ಕಾರ್ಯದರ್ಶಿ ಜಯ್​ ಷಾ ತಿಳಿಸಿದ್ದಾರೆ.

2021 ಮತ್ತು 2023ರ ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್ ಫೈನಲ್​ ಪಂದ್ಯಗಳು ಇಂಗ್ಲೆಂಡ್​ನಲ್ಲೇ ನಡೆದಿದ್ದರೆ, 2025ರ ಫೈನಲ್​ ಕೂಡ ಅಲ್ಲೇ ನಿಗದಿಯಾಗಿದೆ. ಆದರೆ 3 ಪ್ರಮುಖ ಟೆಸ್ಟ್​ ರಾಷ್ಟ್ರಗಳಾದ ಭಾರತ, ಇಂಗ್ಲೆಂಡ್​, ಆಸ್ಟ್ರೆಲಿಯಾದ ಪೈಕಿ ಡಬ್ಲ್ಯುಟಿಸಿ ಫೈನಲ್​ ನಡೆಯುವ ಜೂನ್​ ಸಮಯದಲ್ಲಿ ಭಾರತ ಮತ್ತು ಆಸೀಸ್​ನಲ್ಲಿ ಮಳೆಗಾಲವಾಗಿರುವುದರಿಂದ ಪಂದ್ಯ ಆಯೋಜಿಸುವುದು ಕಷ್ಟ. ಬೆಂಗಳೂರಿನಲ್ಲೂ ಅದು ಮಳೆಗಾಲದ ಸಮಯವಾಗಿರುತ್ತದೆ ಎಂದು ಜಯ್​ ಷಾ ವಿವರಿಸಿದ್ದಾರೆ.

ಐಸಿಸಿ ಮೇಲೆ ಕಣ್ಣಿಲ್ಲ

ಐಸಿಸಿಯ ಹಾಲಿ ಚೇರ್ಮನ್​ ಗ್ರೇಗ್​ ಬಾರ್​ಕ್ಲೇ ಅವಧಿ ಹಾಲಿ ವರ್ಷ ಮುಕ್ತಾಯಗೊಳ್ಳಲಿದ್ದು, ಜಯ್​ ಷಾ ಈ ಹುದ್ದೆಗೆ ಉತ್ತರಾಧಿಕಾರಿ ಆಗುವ ರೇಸ್​ನಲ್ಲಿದ್ದಾರೆ ಎಂದು ವರದಿಗಳು ಹರಡಿವೆ. ಆದರೆ ಜಯ್​ ಷಾ ಇದನ್ನು ತಳ್ಳಿಹಾಕಿದ್ದಾರೆ. "ಊಹಾಪೋಹಗಳು ಇರುವುದು ನಿಜ. ಆದರೆ, ನಾನು ಬಿಸಿಸಿಐನಲ್ಲೇ ಇರಲು ಬಯಸುವೆ. ನಾನಿಲ್ಲಿ ಉತ್ತಮ ಕೆಲಸ ಮಾಡುತ್ತಿಲ್ಲವೇ?' ಎಂದವರು ಪ್ರಶ್ನಿಸಿದ್ದಾರೆ.