ಕ್ರೀಡೆ

ವಿಶ್ವಕಪ್​ ಲಾಂಛನಪ್ರಾಣಿಗೆ ಹೆಸರು ಸೂಚಿಸಲು ಕ್ರಿಕೆಟ್​ ಪ್ರೇಮಿಗಳಿಗೆ ಅವಕಾಶ ಕಲ್ಪಿಸಿದ ಐಸಿಸಿ

ಗುರುಗ್ರಾಮ: ಭಾರತದ ಆತಿಥ್ಯದಲ್ಲಿ ಅಕ್ಟೋಬರ್​ 5ರಿಂದ ನವೆಂಬರ್​ 19ರವರೆಗೆ ನಡೆಯಲಿರುವ ಏಕದಿನ ಕ್ರಿಕೆಟ್​ ಟೂರ್ನಿಯ ಲಾಂಛನಪ್ರಾಣಿಗಳಲ್ಲಿ (ಮ್ಯಾಸ್ಕಾಟ್ಸ್​) ಐಸಿಸಿ ಶನಿವಾರ ಅನಾವರಣಗೊಳಿಸಿದೆ. ಜತೆಗೆ ಇದಕ್ಕೆ ಸೂಕ್ತವಾದ ಹೆಸರುಗಳನ್ನು ಸೂಚಿಸಲು ಕ್ರಿಕೆಟ್​ ಪ್ರೇಮಿಗಳಿಗೆ ಸ್ಪರ್ಧೆಯೊಂದನ್ನು ಆಯೋಜಿಸಿದೆ.

ಲಾಂಛನಪ್ರಾಣಿ ಅನಾವರಣ ಸಮಾರಂಭದಲ್ಲಿ ಭಾರತ ಮಹಿಳಾ ತಂಡದ ಆಟಗಾರ್ತಿ ಶೆಾಲಿ ವರ್ಮ ಮತ್ತು ಯುವ ಕ್ರಿಕೆಟಿಗ ಯಶ್​ ಧುಲ್​ ಭಾಗವಹಿಸಿದರು. ಭಾರತದ ಏಕತೆ ಮತ್ತು ಚೈತತ್ಯವನ್ನು ಜಾಗತಿಕ ಮಟ್ಟದಲ್ಲಿ ಪ್ರತಿಬಿಂಬಿಸುವಂತೆ ಈ ಲಾಂಛನಪ್ರಾಣಿಗಳನ್ನು ರೂಪಿಸಲಾಗಿದೆ.

ಲಿಂಗ ಸಮಾನತೆ ಸೂಚಕವಾಗಿ ಗಂಡು ಮತ್ತು ಹೆಣ್ಣು ಲಾಂಛನಪ್ರಾಣಿಗಳನ್ನು ಸಿದ್ಧಪಡಿಸಲಾಗಿದೆ. ಹೆಣ್ಣು ಲಾಂಛನವು ಬೌಲಿಂಗ್​ ಪರಾಕ್ರಮದ ಪ್ರತಿಕವಾಗಿದ್ದರೆ, ಗಂಡು ಲಾಂಛನವು ಬ್ಯಾಟಿಂಗ್​ ಕೌಶಲದ ಪ್ರತಿಕವೆನಿಸಿದೆ. ಆಗಸ್ಟ್​ 27ರ ಮಧ್ಯರಾತ್ರಿಯೊಳಗೆ ಇದಕ್ಕೆ ಹೆಸರು ಸೂಚಿಸಲು ಕ್ರಿಕೆಟ್​ ಪ್ರೇಮಿಗಳಿಗೆ ಅವಕಾಶ ಕಲ್ಪಿಸಲಾಗಿದೆ.