ಕ್ರೀಡೆ

ಐಸಿಸಿ ಟೆಸ್ಟ್​ ರ್ಯಾಂಕಿಂಗ್​ ವಾರ್ಷಿಕ ಪರಿಷ್ಕರಣೆ ; ಅಗ್ರಸ್ಥಾನ ಕಾಯ್ದುಕೊಂಡ ಭಾರತ, ಕಿವೀಸ್​ ನಂ. 2

ದುಬೈ: ವಿರಾಟ್​ ಕೊಹ್ಲಿ ಸಾರಥ್ಯದ ಭಾರತ ತಂಡ ಅಂತಾರಾಷ್ಟ್ರೀಯ ಕ್ರಿಕೆಟ್​ ಸಮಿತಿ (ಐಸಿಸಿ) ಗುರುವಾರ ವಾರ್ಷಿಕ ಪರಿಷ್ಕರಣೆಗೆ ಒಳಪಡಿಸಿರುವ ಟೆಸ್ಟ್​ ರ್ಯಾಂಕಿಂಗ್​ನಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ವಾರ್ಷಿಕ ಪರಿಷ್ಕರಣೆಯ ಬಳಿಕ ಭಾರತ 1 ಅಂಕ ಗಳಿಸಿದ್ದರೆ, ನ್ಯೂಜಿಲೆಂಡ್​ 2 ಅಂಕ ಗಳಿಸಿದೆ. ಇದರ ನಡುವೆಯೂ ಭಾರತ 121 ಅಂಕದೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ನ್ಯೂಜಿಲೆಂಡ್​ 120 ಅಂಕದೊಂದಿಗೆ 2ನೇ ಸ್ಥಾನದಲ್ಲಿ ಉಳಿದಿದೆ. ಅಗ್ರ 2 ಸ್ಥಾನದಲ್ಲಿರುವ ಭಾರತ-ನ್ಯೂಜಿಲೆಂಡ್​ ತಂಡಗಳೇ ಜೂನ್​ 18ರಿಂದ ಇಂಗ್ಲೆಂಡ್​ನ ಸೌಥಾಂಪ್ಟನ್​ನಲ್ಲಿ ಚೊಚ್ಚಲ ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್​ ಫೈನಲ್​ ಪಂದ್ಯದಲ್ಲಿ ಎದುರಾಗಲಿರುವುದು ವಿಶೇಷವಾಗಿದೆ.
2017-18ನೇ ಸಾಲಿನ ಫಲಿತಾಂಶವನ್ನು ಕೈಬಿಟ್ಟು ರ್ಯಾಂಕಿಂಗ್​ ಪಟ್ಟಿಯನ್ನು ಪರಿಷ್ಕರಿಸಲಾಗಿದೆ ಎಂದು ಐಸಿಸಿ ತಿಳಿಸಿದೆ. ಜತೆಗೆ ಮೇ 2020ರ ಬಳಿಕ ನಡೆದ ಪಂದ್ಯಗಳ ಫಲಿತಾಂಶವನ್ನು ಶೇಕಡ 100 ಮತ್ತು ಅದಕ್ಕೂ ಮೊದಲಿನ ಪಂದ್ಯಗಳ ಫಲಿತಾಂಶವನ್ನು ಶೇಕಡ 50 ಗಣನೆಗೆ ತೆಗೆದುಕೊಂಡು ರ್ಯಾಂಕಿಂಗ್​ ಪರಿಷ್ಕರಿಸಲಾಗಿದೆ. ಪರಿಷತ ರ್ಯಾಂಕಿಂಗ್​ ಅನ್ವಯ ಇಂಗ್ಲೆಂಡ್​ (109 ಅಂಕ) 3ನೇ ಸ್ಥಾನಕ್ಕೇರಿದರೆ, ಆಸ್ಟ್ರೆಲಿಯಾ (108) 4ನೇ ಸ್ಥಾನಕ್ಕೆ ಕುಸಿತ ಕಂಡಿದೆ. 2017-18ನೇ ಸಾಲಿನಲ್ಲಿ ಇಂಗ್ಲೆಂಡ್​ ತಂಡ 0&4 ರಿಂದ ಆಸ್ಟ್ರೆಲಿಯಾಗೆ ಶರಣಾಗಿತ್ತು. ಇದೀಗ ಆ ಫಲಿತಾಂಶ ರ್ಯಾಂಕಿಂಗ್​ನಲ್ಲಿ ಪರಿಗಣಿಸಲ್ಪಟ್ಟಿಲ್ಲ.
ಪಾಕಿಸ್ತಾನ (94) 5ನೇ ಸ್ಥಾನಕ್ಕೇರಿದ್ದು, ವೆಸ್ಟ್​ ಇಂಡೀಸ್​ ತಂಡ (84) 6ನೇ ಸ್ಥಾನ ಗಳಿಸಿದೆ. ದಕ್ಷಿಣ ಆಫ್ರಿಕಾ ತಂಡ ಟೆಸ್ಟ್​ ರ್ಯಾಂಕಿಂಗ್​ ಇತಿಹಾಸದಲ್ಲಿಯೇ 2ನೇ ಬಾರಿಗೆ ಕಡಿಮೆ ರ್ಯಾಂಕಿಂಗ್​ (7ನೇ ಸ್ಥಾನ) ಗಳಿಸಿದೆ.
ಐಸಿಸಿ ಟೆಸ್ಟ್​ ರ್ಯಾಂಕಿಂಗ್​: 1. ಭಾರತ &121 ಅಂಕ (+1), 2. ನ್ಯೂಜಿಲೆಂಡ್​& 120 ಅಂಕ (+2), 3. ಇಂಗ್ಲೆಂಡ್​ 109 ಅಂಕ (+3), 4. ಆಸ್ಟ್ರೆಲಿಯಾ -108 ಅಂಕ (&5), 5. ಪಾಕಿಸ್ತಾನ&94 ಅಂಕ (+3), 6. ವೆಸ್ಟ್​ ಇಂಡೀಸ್​ 84 (+3), 7. ದಣ ಆಫ್ರಿಕಾ(8 (&9), 8. ಶ್ರೀಲಂಕಾ-78 ಅಂಕ (+5), 9. ಬಾಂಗ್ಲಾದೇಶ-46 ಅಂಕ (+5), 10. ಜಿಂಬಾಬ್ವೆ -35 (+8).

ವಿಂಡೀಸ್​ ತಂಡ, ಬಾಂಗ್ಲಾದೇಶ ತಂಡವನ್ನು 2&0 ಯಿಂದ, ಶ್ರೀಲಂಕಾ ಎದುರು 0&0 ಯಿಂದ ಡ್ರಾ ಸಾಧಿಸಿತ್ತು. 2013ರ ಬಳಿಕ ವೆಸ್ಟ್​ ಇಂಡೀಸ್​ ತಂಡ ಐಸಿಸಿ ರ್ಯಾಂಕಿಂಗ್​ನಲ್ಲಿ ಉತ್ತಮ ಸಾಧನೆ ಮಾಡಿದೆ. ದಕ್ಷಿಣ ಆಫ್ರಿಕಾ ತಂಡ (80) ಹಾಗೂ ಶ್ರೀಲಂಕಾ ತಂಡ (78) ತಂಡಗಳು ತಲಾ ಒಂದು ಸ್ಥಾನ ಕುಸಿತ ಕಂಡಿದ್ದು, ಕ್ರಮವಾಗಿ 7ನೇ ಹಾಗೂ 8ನೇ ಸ್ಥಾನ ಅಲಂಕರಿಸಿವೆ. 5 ಪಾಯಿಂಟ್ಸ್​ ಕಳೆದುಕೊಂಡಿರುವ ಬಾಂಗ್ಲಾದೇಶ (46) ಹಾಗೂ 8 ಪಾಯಿಂಟ್ಸ್​ ಸಂಗ್ರಹಿಸಿರುವ ಜಿಂಬಾಬ್ವೆ (35) ನಂತರದ ಸ್ಥಾನದಲ್ಲಿವೆ.

*ಕಿವೀಸ್​ ನಂ.1 ಅವಕಾಶ
ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್​ಗೂ ಮುನ್ನ ನ್ಯೂಜಿಲೆಂಡ್​ ತಂಡ ರ್ಯಾಂಕಿಂಗ್​ನಲ್ಲಿ ಅಗ್ರಸ್ಥಾನಕ್ಕೇರುವ ಅವಕಾಶ ಹೊಂದಿದೆ. ಜೂನ್​ 2ರಿಂದ ಆತಿಥೇಯ ಇಂಗ್ಲೆಂಡ್​ ವಿರುದ್ಧ ನಡೆಯಲಿರುವ 2 ಪಂದ್ಯಗಳ ಸರಣಿಯಲ್ಲಿ ಕಿವೀಸ್​ ಗೆದ್ದರೆ ನಂ.1 ಸ್ಥಾನಕ್ಕೇರಲಿದ್ದು, ಭಾರತ ಎರಡನೇ ಸ್ಥಾನಕ್ಕೆ ಕುಸಿಯಲಿದೆ.