England vs India: ಆಂಡರ್ಸನ್-ತೆಂಡೂಲ್ಕರ್ ಟ್ರೋಫಿಯಲ್ಲಿ ಲೀಡ್ಸ್‌ನ ಹೆಡಿಂಗ್ಲೆ ಮೈದಾನ ಹೊರತುಪಡಿಸಿ, ಉಳಿದ ಪಿಚ್‌ಗಳು ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿಯಿಂದ ಉತ್ತಮ ರೇಟಿಂಗ್ಸ್ ಗಳಿಸುವಲ್ಲಿ ವಿಫಲವಾಗಿವೆ ಎಂದು ತಿಳಿದುಬಂದಿದೆ.
ಇಂಗ್ಲೆಂಡ್ ಮತ್ತು ಭಾರತ ನಡುವಿನ ಐದು ಟೆಸ್ಟ್ ಪಂದ್ಯಗಳು ತೀವ್ರ ಪೈಪೋಟಿಯಿಂದ ಕೂಡಿದ್ದವು, ಸರಣಿ ಆರಂಭಕ್ಕೂ ಮುನ್ನ ಇಂಗ್ಲೆಂಡ್ ಪಿಚ್‌ಗಳು ಬ್ಯಾಟಿಂಗ್ ಸ್ನೇಹಿ ಸ್ವರೂಪದ್ದಾಗಿವೆ ಎನ್ನುವುದು ಬಹು ಚರ್ಚೆಯ ವಿಷಯವಾಗಿತ್ತು.
ಇದನ್ನೂ ಓದಿ:ಮೂವರನ್ನು ಗಾಯಗೊಳಿಸಿದ್ದ ಚಿರತೆ ಸೆರೆ
1 ನೇ ಟೆಸ್ಟ್ – ಹೆಡಿಂಗ್ಲೆ, ಲೀಡ್ಸ್
ಪಿಚ್: ತುಂಬಾ ಚೆನ್ನಾಗಿದೆ | ಔಟ್‌ಫೀಲ್ಡ್: ತುಂಬಾ ಚೆನ್ನಾಗಿದೆ
2ನೇ ಟೆಸ್ಟ್ - ಎಡ್ಜ್‌ಬಾಸ್ಟನ್, ಬರ್ಮಿಂಗ್ಹ್ಯಾಮ್
ಪಿಚ್: ತೃಪ್ತಿದಾಯಕ | ಔಟ್‌ಫೀಲ್ಡ್: ತುಂಬಾ ಒಳ್ಳೆಯದು
3ನೇ ಟೆಸ್ಟ್ - ಲಾರ್ಡ್ಸ್, ಲಂಡನ್
ಪಿಚ್: ತೃಪ್ತಿದಾಯಕ | ಔಟ್‌ಫೀಲ್ಡ್: ತುಂಬಾ ಒಳ್ಳೆಯದು
4ನೇ ಟೆಸ್ಟ್ - ಓಲ್ಡ್ ಟ್ರಾಫರ್ಡ್, ಮ್ಯಾಂಚೆಸ್ಟರ್
ಪಿಚ್: ತೃಪ್ತಿದಾಯಕ | ಔಟ್‌ಫೀಲ್ಡ್: ತುಂಬಾ ಒಳ್ಳೆಯದು
ಈ ಸರಣಿಯ ಪಿಚ್‌ಗಳು 2023 ರ ಆಶಸ್‌ನಲ್ಲಿ ಬಳಸಲಾದ ಪಿಚ್‌ಗಳಿಗಿಂತ ಉತ್ತಮವಾಗಿ ಕಾರ್ಯನಿರ್ವಹಿಸಿದವು, ಅಲ್ಲಿ ಐದು ಪಿಚ್‌ಗಳಲ್ಲಿ ಯಾವುದೂ ಕೂಡ ಉತ್ತಮ ರೇಟಿಂಗ್ಸ್ಗಳನ್ನು ಪಡೆದಿರಲಿಲ್ಲ. ಅದರಲ್ಲೂ- ಎಡ್ಜ್‌ಬಾಸ್ಟನ್ ಮತ್ತು ಲಾರ್ಡ್ಸ್ ಪಿಚ್ ಕೇವಲ 'ಸರಾಸರಿ' ರೇಟಿಂಗ್ ಪಡೆದಿದ್ದವು. ಇದಕ್ಕೆ ವ್ಯತಿರಿಕ್ತವೆಂಬಂತೆ ಬಾರ್ಡರ್-ಗವಾಸ್ಕರ್ ಟ್ರೋಫಿಗಾಗಿ ಬಳಸಲಾದ ಐದು ಪಿಚ್‌ಗಳಲ್ಲಿ ನಾಲ್ಕು ಅತ್ಯುನ್ನತ ರೇಟಿಂಗ್ ಪಡೆದಿದ್ದವು.
ಐಸಿಸಿ, 2023 ಕ್ಕಿಂತ ಮುಂಚೆ ವೆರಿ ಗುಡ್, ಗುಡ್, ಆವರೇಜ್, ಬಿಲೋ ಆವರೇಜ್, ಪೂರ್ ಮತ್ತು ಅನ್‌ಫಿಟ್ ಎಂಬ ಆರು ಹಂತಗಳಲ್ಲಿ ಪಿಚ್ ರೇಟಿಂಗ್ ವ್ಯವಸ್ಥೆಯನ್ನು ಬಳಸುತ್ತಿತ್ತು. 2023ರ ಬಳಿಕ ವೆರಿ ಗುಡ್, ತೃಪ್ತಿಕರ, ಅತೃಪ್ತಿಕರ ಮತ್ತು ಅನ್‌ಫಿಟ್ ಎಂಬ ನಾಲ್ಕು ವರ್ಗಗಳಾಗಿ ಮಾರ್ಪಾಡಿಸಲಾಯಿತು.(ಏಜೆನ್ಸೀಸ್)