ಕ್ರೀಡೆ

19 ವಯೋಮಿತಿಯ ಏಕದಿನ ವಿಶ್ವಕಪ್ ವೇಳಾಪಟ್ಟಿ ಪ್ರಕಟ: ಐದು ಬಾರಿಯ ಚಾಂಪಿಯನ್ ಭಾರತಕ್ಕೆ ಬಾಂಗ್ಲಾ ಮೊದಲ ಎದುರಾಳಿ

ದುಬೈ: ಐದು ಬಾರಿಯ ಚಾಂಪಿಯನ್ ಭಾರತ ತಂಡ ಮುಂದಿನ ವರ್ಷ ಜನವರಿ 13ರಿಂದ ೆಬ್ರವರಿ 4ರವರೆಗೆ ಶ್ರೀಲಂಕಾದಲ್ಲಿ ನಡೆಯಲಿರುವ ಪುರುಷರ 19 ವಯೋಮಿತಿಯ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಬಾಂಗ್ಲಾದೇಶ ತಂಡವನ್ನು ಎದುರಿಸುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ. ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ಶ್ರೀಲಂಕಾ ಹಾಗೂ ಜಿಂಬಾಬ್ವೆ ಮುಖಾಮುಖಿಯಾಗಲಿವೆ. ಒಟ್ಟು ಐದು ತಾಣಗಳಲ್ಲಿ ಪಂದ್ಯಗಳು ನಡೆಯಲಿವೆ.

ಹಾಲಿ ಚಾಂಪಿಯನ್ ಭಾರತ, ಬಾಂಗ್ಲಾದೇಶ, ಐರ್ಲೆಂಡ್ ಹಾಗೂ ಅಮೆರಿಕ ತಂಡದೊಂದಿಗೆ ಎ ಗುಂಪಿನಲ್ಲಿದೆ. ಭಾರತ ಜ.14ರಂದು ಬಾಂಗ್ಲಾದೇಶ, ಜ.18ರಂದು ಅಮೆರಿಕ, ಜ.20ರಂದು ಐರ್ಲೆಂಡ್ ತಂಡವನ್ನು ಎದುರಿಸಲಿದೆ. ಟೂರ್ನಿಯಲ್ಲಿ ಭಾಗವಹಿಸುವ 16 ತಂಡಗಳನ್ನು ತಲಾ 4ರಂತೆ 4 ಗುಂಪುಗಳಲ್ಲಿ ಮಾಡಲಾಗಿದೆ.

ಶ್ರೀಲಂಕಾ, ಅ್ಘಾನಿಸ್ತಾನ, ಆಸ್ಟ್ರೇಲಿಯಾ, ಬಾಂಗ್ಲಾದೇಶ, ಇಂಗ್ಲೆಂಡ್, ಭಾರತ, ಐರ್ಲೆಂಡ್, ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್, ಜಿಂಬಾಬ್ವೆ ನೇರ ಅರ್ಹತೆ ಪಡೆದುಕೊಂಡಿದ್ದು, ನಮೀಬಿಯಾ, ನೇಪಾಳ, ನ್ಯೂಜಿಲೆಂಡ್, ಸ್ಕಾಟ್ಲೆಂಡ್ ಹಾಗೂ ಅಮೆರಿಕ ತಂಡಗಳು ಪ್ರಾದೇಶಿಕ ಅರ್ಹತಾ ಸುತ್ತಿನಿಂದ ಟೂರ್ನಿಗೆ ಅರ್ಹತೆ ಗಿಟ್ಟಿಸಿಕೊಂಡಿವೆ.

ಟೂರ್ನಿಯ ಸ್ವರೂಪ: ಗುಂಪು ಹಂತದಲ್ಲಿ ಎಲ್ಲ ತಂಡಗಳು ತಲಾ 3 ಪಂದ್ಯ ಆಡಲಿದ್ದು, ಪ್ರತಿ ಗುಂಪಿನ ಅಗ್ರ ಮೂರು ತಂಡಗಳು ಸೂಪರ್-6ಗೆ ಅರ್ಹತೆ ಪಡೆಯಲಿವೆ. ಬಳಿಕ ಎ ಹಾಗೂ ಡಿ ಗುಂಪಿನ ತಂಡಗಳನ್ನು ಸೇರಿಸಿ ಒಂದು ಗುಂಪು ಹಾಗೂ ಬಿ ಮತ್ತು ಸಿ ವಿಭಾಗದ ಅಗ್ರ 3 ತಂಡಗಳು ಇನ್ನೊಂದು ಗುಂಪಿನ ಭಾಗವಾಗಿರಲಿವೆ. ಪ್ರತಿ ತಂಡಗಳು ಗುಂಪಿನಲ್ಲಿ ಪಡೆದ ಸ್ಥಾನದ ಆಧಾರದಲ್ಲಿ ಸೂಪರ್ -6ನಲ್ಲಿ ಎರಡು ಪಂದ್ಯಗಳನ್ನು ಆಡಲಿವೆ. (ಉದಾ: ಎ1- ಡಿ2, ಡಿ3) ಸೂಪರ್ ಸಿಕ್ಸ್‌ನ ಎರಡು ಗುಂಪಿನ ಅಗ್ರ ಎರಡು ತಂಡಗಳು ಸೆಮಿೈನಲ್‌ಗೆ ಅರ್ಹತೆ ಪಡೆಯಲಿವೆ. ೆಬ್ರವರಿ 4 ರಂದು ೈನಲ್ ನಡೆಯಲಿದೆ.

ಭಾರತದ ಪಂದ್ಯಗಳು

ಜನವರಿ 14- ಬಾಂಗ್ಲಾದೇಶ

ಜ.18- ಅಮೆರಿಕಾ

ಜ.20- ಐರ್ಲೆಂಡ್