ಕ್ರೀಡೆ

ಅರ್ಷದ್​ ಎಮ್ಮೆ ಪಡೆದಂತೆ ನಾನು ಈ ಗಿಫ್ಟ್​ ಪಡೆದಿದ್ದೇನೆ; ನೀರಜ್​ ಚೋಪ್ರಾ

ನವದೆಹಲಿ: ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಜಾವೆಲಿನ್ ಸ್ಪರ್ಧೆಯಲ್ಲಿ ಅರ್ಷದ್ ನದೀಮ್ ಚಿನ್ನದ ಪದಕ ಗೆದ್ದ ಬಳಿಕ ಅವರ ಸಾಧನೆಯನ್ನು ಪಾಕಿಸ್ತಾನದಲ್ಲಿ ಕೊಂಡಾಡುತ್ತಿದ್ದಾರೆ. ಅಲ್ಲದೆ ನದೀಮ್​ ಅವರಿಗೆ ಉಡುಗೊರೆಗಳ ಮಹಾಪೂರವೆ ಹರಿದು ಬರುತ್ತಿದೆ. ಇತ್ತೀಚೆಗೆ ಅವರ ಮಾನ ನದೀಮ್​ ಅವರಿಗೆ ಎಮ್ಮೆಯನ್ನು ಗಿಫ್ಟ್​ ಆಗಿ ನೀಡಿದ್ದು ಎಲ್ಲರಿಗೂ ಗೊತ್ತೆ ಇದೆ. ಈ ರೀತಿಯ ತಮಾಷೆಯ ಉಡುಗೊರೆ ಪಡೆದುಕೊಂಡು ಹಾಸ್ಯಾಸ್ಪದವಾಗಿ ಅದಕ್ಕೆ ನದೀಮ್ ಪ್ರತಿಕ್ರಿಯಸಿದ್ದರು.

ಇದೇ ರೀತಿಯ ತಮಾಷೆಯ ಉಡುಗೊರೆಯನ್ನು ನೀವು ಪಡೆದಿದ್ದೀರಾ ಎಂದು ಭಾರತದ ಚಿನ್ನದ ಹುಡುಗ ನೀರಜ್​ ಚೋಪ್ರಾ ಅವರನ್ನು ಇತ್ತೀಚೆಗೆ ಸಂದರ್ಶವೊಂದರಲ್ಲಿ ಕೇಳಲಾಯಿತು. ಅದಕ್ಕೆ ಉತ್ತರಿಸಿದ ಅವರು, ನಾನು ಹರಿಯಾಣದವನು. ಅಲ್ಲಿ ಕುಸ್ತಿ ಮತ್ತು ಕಬಡ್ಡಿಯಂತಹ ಆಟಗಳನ್ನು ಆಡಲಾಗುತ್ತದೆ, ಅದನ್ನು ಪವರ್​ ಗೇಮ್​ಗಳೆಂಳದು ಪರಿಗಣಿಸಲಾಗಿದೆ. ಅಲ್ಲಿ ಕೆಲವರು ತುಪ್ಪ ಮತ್ತು ಕೆಲವು ಎಮ್ಮೆಗಳನ್ನು ಉಡುಗೊರೆಯಾಗಿ ನೀಡುತ್ತಾರೆ. ಇದಲ್ಲದೇ ಬುಲೆಟ್ ಅಥವಾ ಟ್ರ್ಯಾಕ್ಟರ್​​ಗಳನ್ನೂ ಉಡುಗೊರೆಯಾಗಿ ನೀಡುತ್ತಾರೆ ಎಂದು ಹೇಳಿದ್ದಾರೆ.

ಅಂದ್ಹಾಗೆ ನಾನು ತುಪ್ಪವನ್ನು ಉಡುಗೊರೆಯಾಗಿ ಸ್ವೀಕರಿಸಿದ್ದೇನೆ. ಆದ್ದರಿಂದ ನಾನು ಅದನ್ನು ತಮಾಷೆಯಾಗಿ ಸ್ವೀಕರಿಸಿದ ಉಡುಗೊರೆ ಎಂದು ಪರಿಗಣಿಸಬಹುದು ಎಂದು ನೀರಜ್​ ಹೇಳಿದರು. ಹರಿಯಾಣದ ಸಂಸ್ಕೃತಿಯು ಹೀಗಿದೆ, ಏಕೆಂದರೆ ಅಲ್ಲಿ ತುಪ್ಪ ತಿನ್ನುವುದು ಶಕ್ತಿ ನೀಡುತ್ತದೆ ಮತ್ತು ಕ್ರೀಡಾಪಟುಗಳು ಅದನ್ನು ತಿನ್ನುವುದರಿಂದ ಉತ್ತಮವಾಗಿ ಆಟ ಆಡಬಹುದು ಎಂದು ನಂಬಲಾಗಿದೆ ಎಂದು ತಿಳಿಸಿದರು. ನೀರಜ್​ ಚೋಪ್ರಾ ತಮ್ಮ ಮುಂದಿನ ಸ್ಪರ್ಧೆಯ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಆಗಸ್ಟ್​​ 22ರಂದು ಪ್ರಾರಂಭವಾಗಲಿರುವ ಲೌಸನ್ನೆ ಡೈಮಂಡ್ ಲೀಗ್‌ನಲ್ಲಿ ಭಾಗವಹಿಸುವ ವಿಚಾರವನ್ನು ಬಹಿರಂಗಪಡಿಸಿದ್ದಾರೆ. (ಏಜೆನ್ಸೀಸ್​)