ಕ್ರೀಡೆ

ದಿನಕ್ಕೆ 5 ಲೀಟರ್ ಹಾಲು ಕುಡಿಯುತ್ತಾರೆ ಧೋನಿ! ವದಂತಿ ಬಗ್ಗೆ MS Dhoni ಹೇಳಿದ್ದೇನು ಗೊತ್ತಾ?

MS Dhoni : ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ನಾಯಕ ಮಹೇಂದ್ರ ಸಿಂಗ್ ಧೋನಿ ದಿನಕ್ಕೆ ಐದು ಲೀಟರ್ ಹಾಲು ಕುಡಿಯುವುದರಿಂದ ಅವರ ಶಕ್ತಿ ಮತ್ತು ಫಿಟ್ನೆಸ್ ಹೆಚ್ಚಾಗುತ್ತದೆ ಎಂಬ ವದಂತಿಗಳು ವೈರಲ್ ಆಗಿದ್ದವು. ಧೋನಿ ಬಲಿಷ್ಠರಾಗಿರುವುದರಿಂದ ಅಭಿಮಾನಿಗಳು ಇಂತಹ ಊಹಾಪೋಹಗಳನ್ನು ನಿಜವೆಂದು ನಂಬಿದ್ದರು. ಆದರೆ ಈಗ ಈ ವಿಷಯಕ್ಕೆ ಸ್ವತಃ ಧೋನಿ ಪ್ರತಿಕ್ರಿಯಿಸಿದ್ದಾರೆ.

ಧೋನಿ ಇತ್ತೀಚೆಗೆ ಒಂದು ಸಂದರ್ಶನದಲ್ಲಿ, "ನಾನು ಬಹುಶಃ ಒಂದು ಲೀಟರ್ ಹಾಲು ಕುಡಿಯುವುದು. ಅದಕ್ಕಿಂತ ಹೆಚ್ಚು ಕುಡಿಯುವುದು ಕಷ್ಟ. ನಾಲ್ಕು ಲೀಟರ್ ಹಾಲು ಅದು ಯಾರಿಗಾದರೂ ಸ್ವಲ್ಪ ಹೆಚ್ಚು ಎಂದು ಧೋನಿ ಹೇಳಿದರು.

ಧೋನಿ ತಮಗೆ ಸಾಮಾನ್ಯ ಆಹಾರ ಪದ್ಧತಿ ಇದೆ ಎಂದು ಬಹಿರಂಗಪಡಿಸಿದರು, ಮತ್ತು ಅದನ್ನು ಯಾರಿಗಾದರೂ ಹೇಳುವುದು ಸ್ವಲ್ಪ ಉತ್ಪ್ರೇಕ್ಷೆಯಾಗುತ್ತದೆ ಎಂದಿದ್ದಾರೆ.

ಧೋನಿ ವಾಷಿಂಗ್ ಮೆಷಿನ್‌ನಲ್ಲಿ ಲಸ್ಸಿ ತಯಾರಿಸುತ್ತಾರೆ ಎಂಬ ಮತ್ತೊಂದು ಜನಪ್ರಿಯ ವದಂತಿಗೂ ಪ್ರತಿಕ್ರಿಯಿಸಿದರು. "ಲಸ್ಸಿಯನ್ನು ವಾಷಿಂಗ್ ಮೆಷಿನ್‌ನಲ್ಲಿ ತಯಾರಿಸಬಹುದು ಎಂಬುದು ಸಂಪೂರ್ಣ ಸುಳ್ಳು. ನಿಜ ಹೇಳಬೇಕೆಂದರೆ, ನನಗೆ ಲಸ್ಸಿ ಕುಡಿಯುವ ಅಭ್ಯಾಸವಿಲ್ಲ" ಎಂದು ಧೋನಿ ಹೇಳಿದರು.

ತಮ್ಮ ಬಗ್ಗೆ ಬಂದಿರುವ ಹಲವು ವದಂತಿಗಳನ್ನು ಧೋನಿ ಹಗುರವಾಗಿ ಮತ್ತು ಹಾಸ್ಯಮಯವಾಗಿ ನಿರಾಕರಿಸುವ ಶೈಲಿಗೆ ಅಭಿಮಾನಿಗಳು ಮತ್ತೊಮ್ಮೆ ಮಾರುಹೋಗಿದ್ದರು.