Navjot Singh Sidhu: ಪ್ರಸಕ್ತ ದುಬೈ ಮತ್ತು ಪಾಕಿಸ್ತಾನ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 2025ರ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಸತತ ನಾಲ್ಕು ಗೆಲುವನ್ನು ದಾಖಲಿಸಿರುವ ಟೀಮ್ ಇಂಡಿಯಾ, ಆಸ್ಟ್ರೇಲಿಯಾ ವಿರುದ್ಧದ ಪಂದ್ಯವನ್ನೂ ಗೆದ್ದು ಇದೀಗ ನೇರವಾಗಿ ಫೈನಲ್ಗೆ ಲಗ್ಗೆಯಿಟ್ಟಿದೆ.
ಬಾಂಗ್ಲಾದೇಶ, ಪಾಕಿಸ್ತಾನ, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧದ ಪಂದ್ಯಗಳನ್ನು ಗೆದ್ದು ಫೈನಲ್ಗೆ ಎಂಟ್ರಿಕೊಟ್ಟಿರುವ ರೋಹಿತ್ ಶರ್ಮ ಪಡೆ, ಚಾಂಪಿಯನ್ಸ್ ಟ್ರೋಫಿ ಫೈನಲ್ ಹಣಾಹಣಿಯಲ್ಲಿ ಕಿವೀಸ್ ಪಡೆ ವಿರುದ್ಧ ಗೆಲುವಿಗಾಗಿ ಸೆಣಸಲಿದೆ. ಈ ಪಂದ್ಯ ಖಂಡಿತ ರೋಚಕವಾಗಿರಲಿದೆ ಎಂಬುದು ಕ್ರಿಕೆಟ್ ಅಭಿಮಾನಿಗಳ ಆಶಯ. ಇದೆಲ್ಲದರ ಮಧ್ಯೆ ಟೀಮ್ ಇಂಡಿಯಾ ಪರವಾಗಿ ಕಳೆದೆರೆಡು ಪಂದ್ಯಗಳಲ್ಲಿ ಮಿಂಚಿದ ದಾಖಲೆಗಳ ಸರದಾರ, ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ, ಪಾಕಿಸ್ತಾನ ವಿರುದ್ಧ ಶತಕ ಮತ್ತು ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಆಕರ್ಷಕ ಅರ್ಧ ಶತಕ ಸಿಡಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.
ಚಾಂಪಿಯನ್ಸ್ ಟ್ರೋಫಿ ಟೂರ್ನಿಗೂ ಮುನ್ನ ಅತ್ಯಂತ ಕಳಪೆ ಪ್ರದರ್ಶನ ತೋರಿದ್ದ ವಿರಾಟ್, ಫ್ಲಾಪ್ ಪಟ್ಟಿ ಸೇರಿದ್ದರು. ಕೊಹ್ಲಿಯ ಸರಣಿಯ ಫ್ಲಾಪ್ ಪ್ರದರ್ಶನ ಮಾಜಿ ಕ್ರಿಕೆಟಿಗರು ಮತ್ತು ಅಭಿಮಾನಿಗಳಲ್ಲಿ ತೀವ್ರ ಬೇಸರ ಮೂಡಿಸತ್ತು. ಆದ್ರೆ, ವಿರಾಟ್ ಕೊಹ್ಲಿ ಅವರ ಅದ್ಭುತ ಇನ್ನಿಂಗ್ಸ್ ಮತ್ತು ಬ್ಯಾಟಿಂಗ್ ವೈಖರಿಯನ್ನು ಕೊಂಡಾಡಿರುವ ಟೀಮ್ ಇಂಡಿಯಾ ಮಾಜಿ ಹಿರಿಯ ಆಟಗಾರ ನವಜೋತ್ ಸಿಂಗು ಸಿಧು, "ವಿರಾಟ್ರನ್ನು ಅನುಮಾನಿಸಿದವರ ಮುಖಕ್ಕೆ ಕಪಾಳಮೋಕ್ಷ ಮಾಡಿ. ನಾನು ಯಾವಾಗಲೂ ಅವರನ್ನು ಮತ್ತು ಬಾಬರ್ ಅಜಮ್ ಅವರಂತಹ ಆಟಗಾರರನ್ನು ಬೆಂಬಲಿಸಿದ್ದೇನೆ. ಭಾರತ ತಂಡಕ್ಕೆ ಹಲವಾರು ಪಂದ್ಯ ಗೆಲ್ಲಿಸಿಕೊಟ್ಟವರ ಸಾಲಿಗೆ ವಿರಾಟ್ ಮತ್ತು ಕೆ.ಎಲ್. ರಾಹುಲ್ ಸೇರುತ್ತಾರೆ. ಈ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ" ಎಂದರು.
ಇದನ್ನೂ ಓದಿ: Max Manju Interview | ಬಿಗ್ಬಾಸ್ ಆದ್ಮೇಲೆ XUV 700 ಕಾರ್ ತಗೊಂಡೆ ಲೋನ್ ಇದೆ ಗೊತ್ತಾ ಎಂದ ಮಂಜಣ್ಣ?!
"ಏಕದಿನ ಪಂದ್ಯಗಳಲ್ಲಿ ಅನೇಕರು ಅತ್ಯಧಿಕ ರನ್ ಗಳಿಸಿದ್ದಾರೆ. ಆದರೆ, ಅವರಲ್ಲಿ ಎಷ್ಟು ಮಂದಿ ಪಂದ್ಯಗಳನ್ನು ಗೆದ್ದಿದ್ದಾರೆ? ಮೈಲಿಗಲ್ಲುಗಳಿಗಿಂತ ಗೆಲುವು ಮುಖ್ಯ. ಈ ವಿಷಯದಲ್ಲಿ ವಿರಾಟ್ ಎಲ್ಲರಿಗಿಂತ ಮುಂದಿದ್ದಾರೆ. ಕ್ರಿಕೆಟ್ಗಾಗಿ ಅವರ ಬದ್ಧತೆ ಪ್ರಶಂಸನೀಯ. ಕೊಹ್ಲಿ ಸಂತೋಷವನ್ನು ಹರಡಿಸಲೆಂದೇ ಜನಿಸಿದ್ದಾರೆ. ಅವರ ಬ್ಯಾಟಿಂಗ್ ಕಣ್ತುಂಬಿಕೊಳ್ಳಲು ನಾನು 100 ಕಿಮೀ ಬರಿಗಾಲಿನಲ್ಲಿ ನಡೆದುಕೊಂಡು ಹೋಗಬಲ್ಲೆ" ಎಂದು ಹೇಳಿದ್ದಾರೆ,(ಏಜೆನ್ಸೀಸ್).