ಮಾಸ್ಕೋ: ವಿಶ್ವ ರ‍್ಯಾಪಿಡ್ ಚೆಸ್ ಟೂರ್ನಿಯ ಚಾಂಪಿಯನ್ ಆಗಿದ್ದ ಭಾರತದ ಕೊನೆರು ಹಂಪಿ, ವಿಶ್ವ ಬ್ಲಿಟ್ಜ್ ಚೆಸ್ ಟೂರ್ನಿಯ ಕೊನೇ ಮೂರು ಸುತ್ತಿನಲ್ಲಿ ಹ್ಯಾಟ್ರಿಕ್ ಸೋಲು ಕಾಣುವ ಮೂಲಕ 12ನೇ ಸ್ಥಾನಕ್ಕೆ ತೃಪ್ತಿಪಟ್ಟರು. ಅದರೊಂದಿಗೆ ಏಕಕಾಲದಲ್ಲಿ ವಿಶ್ವ ರ್ಯಾಪಿಡ್ ಹಾಗೂ ಬ್ಲಿಟ್ಜ್ ಚೆಸ್ ಚಾಂಪಿಯನ್ ಆಗುವ ಅವಕಾಶವನ್ನು ಅವರು ಕಳೆದುಕೊಂಡರು.
ಎರಡು ದಿನಗಳ ಕಾಲ ನಡೆದ ಮಿಂಚಿನ ಚೆಸ್ ಸ್ಪರ್ಧೆಯ ಮಹಿಳಾ ವಿಭಾಗದಲ್ಲಿ ರಷ್ಯಾದ ಕ್ಯಾಟರೇನಾ ಲಾಗನೊ ಹಾಗೂ ಪುರುಷರ ವಿಭಾಗದಲ್ಲಿ ನಾರ್ವೆಯ ಮ್ಯಾಗ್ನಸ್ ಕಾರ್ಲ್ಸೆನ್ ವಿಶ್ವ ಬ್ಲಿಟ್ಜ್ ಚಾಂಪಿಯನ್ ಆಗುವ ಮೂಲಕ ಪ್ರಶಸ್ತಿಯನ್ನು ಉಳಿಸಿಕೊಳ್ಳುವಲ್ಲಿ ಯಶ ಕಂಡರು.
ಕಳೆದ ಶನಿವಾರ ಚೀನಾದ ಆಟಗಾರ್ತಿಯನ್ನು ಆರ್ಮಗೆಡನ್ ಟೈ ಬ್ರೇಕರ್ನಲ್ಲಿ ಮಣಿಸುವ ಮೂಲಕ ರ್ಯಾಪಿಡ್ ಚೆಸ್ನ ಚಾಂಪಿಯನ್ ಆಗಿದ್ದ ಹಂಪಿ, ಮೊದಲ ದಿನ ನಡೆದ 9 ಸುತ್ತಿನ ಪಂದ್ಯದಿಂದ 7 ಅಂಕ ಸಂಪಾದಿಸಿ 2ನೇ ಸ್ಥಾನದಲ್ಲಿದ್ದರು. ಆದರೆ, 32 ವರ್ಷದ ಆಟಗಾರ್ತಿ ಅದೇ ಫಾಮರ್್ಅನ್ನು 2ನೇ ದಿನವೂ ಮುಂದುವರಿಸಲು ವಿಫಲರಾದರು. 17 ಗೇಮ್ಳ ಅಂತ್ಯಕ್ಕೆ 10.5 ಅಂಕ ಸಂಪಾದಿಸಿ ಕೊನೇ ಸ್ಥಾನ ಪಡೆದರು. 2ನೇ ದಿನದ ಸ್ಪರ್ಧೆಯಲ್ಲಿ ಮೊದಲ ಎರಡು ಗೇಮ್ಳನ್ನೂ ಜಯಿಸಿದ್ದ ಹಂಪಿ, ನಂತರದ ಎರಡು ಪಂದ್ಯವನ್ನು ಡ್ರಾ ಮಾಡಿಕೊಳ್ಳುವ ಮೂಲಕ 13 ಸುತ್ತುಗಳ ಅಂತ್ಯಕ್ಕೆ ಲಾಗನೊ ಜತೆ ಅಗ್ರಸ್ಥಾನ ಹಂಚಿಕೊಂಡಿದ್ದರು. ಆದರೆ, 14ನೇ ಸುತ್ತಿನಲ್ಲಿ ಹಂಪಿ ಡ್ರಾ ಸಾಧಿಸಿದರೆ, ನಂತರದ ಮೂರೂ ಪಂದ್ಯಗಳಲ್ಲಿ ಸೋಲು ಕಂಡರು. ಇದೇ ವಿಭಾಗದಲ್ಲಿ ಸ್ಪರ್ಧೆಯಲ್ಲಿ ಭಾರತದ ದ್ರೋಣವಲ್ಲಿ ಹರಿಕಾ 25ನೇ ಸ್ಥಾನ ಪಡೆದರು.