World Cup: 2027ರ ಅಕ್ಟೋಬರ್ನಲ್ಲಿ ದಕ್ಷಿಣ ಆಫ್ರಿಕಾದ ಜೋಹಾನ್ಸ್ಬರ್ಗ್ನ ದಿ ವಾಂಡರರ್ಸ್ ಕ್ರೀಡಾಂಗಣದಲ್ಲಿ ನಡೆಯುವ ಭಾರತ ಮತ್ತು ಪಾಕಿಸ್ತಾನದದ ಮೊದಲ ವಿಶ್ವಕಪ್ ಪಂದ್ಯಕ್ಕೆ ಭಾರಿ ಡಿಮ್ಯಾಂಡ್ ಸೃಷ್ಟಿಯಾಗಿದ್ದು, ಕೇವಲ 34 ಸಾವಿರದ ಆಸನಕ್ಕೆ ಸುಮಾರು 8.4 ಮಿಲಿಯನ್ ಟಿಕೆಟ್ ರಿಕ್ವೆಸ್ಟ್ ಬಂದಿವೆ ಎಂದು ವರದಿಯಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಐಸಿಸಿ, 2027 ಅಕ್ಟೋಬರ್ 10ರಂದು ಭಾರತ ಮತ್ತು ಪಾಕ್ ನಡುವೆ ಪಂದ್ಯ ನಡೆಯಲಿದೆ. ಕೇವಲ 34 ಸಾವಿರ ಆಸನ ವ್ಯವಸ್ಥೆಯಿರುವ ಕ್ರೀಡಾಂಗಣಕ್ಕೆ 83,97,294 ರಿಕ್ವೆಸ್ಟ್ಗಳು ಬಂದಿವೆ. ಇದೇ ಕ್ರೀಡಾಂಗಣದಲ್ಲಿ ನಡೆಯುವ ಫೈನಲ್ ಪಂದ್ಯಕ್ಕೆ 79,00,944 ಟಿಕೆಟ್ ರಿಕ್ವೆಸ್ಟ್ಗಳು ಬಂದಿವೆ ಎಂದು ತಿಳಿಸಿದೆ.
ಈ ಬಾರಿಯ ವಿಶ್ವಕಪ್ ಟೂರ್ನಿಯನ್ನು ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಮತ್ತು ನಮೀಬಿಯಾ ಜಂಟಿಯಾಗಿ ಆಯೋಜಿಸಿವೆ. ಅಕ್ಟೋಬರ್ 2ರಿಂದ ನವೆಂಬರ್ 21ರವರೆಗೆ ನಡೆಯುವ 14 ತಂಡಗಳ ಆಟಕ್ಕೆ ಒಟ್ಟು 120 ಮಿಲಿಯನ್‌ಗಿಂತಲೂ ಹೆಚ್ಚು ಟಿಕೆಟ್ ರಿಕ್ವೆಸ್ಟ್ಗಳು ಬಂದಿವೆ ಎನ್ನಲಾಗಿದೆ.
ಇನ್ನೂ ವಿಶ್ವಕಪ್ ಪಂದ್ಯಾವಳಿಯ ವೇಳಾಪಟ್ಟಿಯಲ್ಲಿ ಗ್ರೂಪ್ ಎ ನಲ್ಲಿ ಭಾರತ, ಪಾಕಿಸ್ತಾನ, ಆಸ್ಟ್ರೇಲಿಯಾ, ಅಫ್ಘಾನಿಸ್ತಾನ, ಸಹ-ಆತಿಥೇಯ ಜಿಂಬಾಬ್ವೆ ಮತ್ತು ಕ್ವಾಲಿಫೈಯರ್ ಎ ತಂಡಗಳು ಸೇರಿವೆ. ಗ್ರೂಪ್ ಬಿ ನಲ್ಲಿ ಸಹ-ಆತಿಥೇಯ ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲೆಂಡ್, ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಕ್ವಾಲಿಫೈಯರ್ ಬಿ ತಂಡಗಳು ಸೇರಿವೆ.
ಇನ್ನೂ ಭಾರತವು ಅಕ್ಟೋಬರ್ 7ರಂದು ಕೇಪ್ಟೌನ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ವಿಶ್ವಕಪ್ ಪ್ರಯಾಣವನ್ನು ಪ್ರಾರಂಭಿಸಲಿದೆ. ಅ. 10ರಂದು ಜೋಹಾನ್ಸ್ ಬರ್ಗ್ನಲ್ಲಿ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗಲಿದ್ದು, ಆಕರ್ಷಣೆಯಾಗಲಿದೆ. ಭಾರತ ಪ್ರಸ್ತುತ ಏಕದಿನ ತಂಡಗಳಲ್ಲಿ ಅಗ್ರಸ್ಥಾನದಲ್ಲಿದೆ, ಶುಭಮನ್ ಗಿಲ್ ನಾಯಕನಾಗಿ ತಮ್ಮ ಮೊದಲ ಏಕದಿನ ವಿಶ್ವಕಪ್‌ನಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ. (ಏಜೆನ್ಸೀಸ್).