ಕ್ರೀಡೆ

ಮಹಾರಾಜ ಟ್ರೋಫಿಯಲ್ಲಿ ಹುಬ್ಬಳ್ಳಿ ಟೈಗರ್ಸ್​​ಗೆ ಸತತ 2ನೇ ಗೆಲುವು

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ವಿಕೆಟ್​ ಕೀಪರ್​-ಬ್ಯಾಟರ್​ ಕೆಎಲ್​ ಶ್ರೀಜಿತ್​ (51 ರನ್​, 36 ಎಸೆತ, 5 ಬೌಂಡರಿ, 3 ಸಿಕ್ಸರ್​) ಅರ್ಧಶತಕದ ಬಲದಿಂದ ಹಾಲಿ ಚಾಂಪಿಯನ್​ ಹುಬ್ಬಳ್ಳಿ ಟೈಗರ್ಸ್​ ತಂಡ ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ಶನಿವಾರದ 2ನೇ ಪಂದ್ಯದಲ್ಲಿ ಗುಲ್ಬರ್ಗಾ ಮಿಸ್ಟಿಕ್ಸ್​ ವಿರುದ್ಧ 6 ವಿಕೆಟ್​ಗಳಿಂದ ಗೆಲುವು ಸಾಧಿಸಿತು.

ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್​ಗೆ ಇಳಿದ ಗುಲ್ಬರ್ಗಾ, ನಾಯಕ ದೇವದತ್​ ಪಡಿಕ್ಕಲ್​ (46 ರನ್​, 29 ಎಸೆತ, 4 ಬೌಂಡರಿ, 3 ಸಿಕ್ಸರ್​) ಜತೆ ಲವ್ನಿತ್​ ಸಿಸೋಡಿಯಾ (39) ಮೊದಲ ವಿಕೆಟ್​ಗೆ 81 ರನ್​ ಸೇರಿಸಿ ಉತ್ತಮ ಬುನಾದಿ ಹಾಕಿದ ನಡುವೆಯೂ ಎಲ್​ಆರ್​ ಕುಮಾರ್​ (34ಕ್ಕೆ 3), ಕೆಸಿ ಕಾರ್ಯಪ್ಪ (22ಕ್ಕೆ 2) ದಾಳಿಗೆ ಕುಸಿದು 9 ವಿಕೆಟ್​ಗೆ 158 ರನ್​ ಗಳಿಸಿತು. ಪ್ರತಿಯಾಗಿ ಹುಬ್ಬಳ್ಳಿ ತಂಡ 18.3 ಓವರ್​ಗಳಲ್ಲಿ 4 ವಿಕೆಟ್​ಗೆ 160 ರನ್​ ಗಳಿಸಿ ಜಯಿಸಿತು. ನಾಯಕ ಮನೀಷ್​ ಪಾಂಡೆ (31), ಅನೀಶ್ವರ್​ ಗೌತಮ್​ (35*), ಕೆಪಿ ಕಾರ್ತಿಕೇಯ (31*) ಗೆಲುವಿಗೆ ಉಪಯುಕ್ತ ಕೊಡುಗೆ ನೀಡಿದರು.

ಗುಲ್ಬರ್ಗಾ ಮಿಸ್ಟಿಕ್ಸ್​: 9 ವಿಕೆಟ್​ಗೆ 158 (ಲವ್ನಿತ್​ 39, ಪಡಿಕ್ಕಲ್​ 46, ಅನಿಶ್​ ಕೆವಿ 10, ಶರತ್​ 12, ರಿತೀಶ್​ 14, ಎಲ್​ಆರ್​ ಕುಮಾರ್​ 34ಕ್ಕೆ 3, ಕೆಸಿ ಕಾರ್ಯಪ್ಪ 22ಕ್ಕೆ 2, ರಿಷಿ 35ಕ್ಕೆ 1). ಹುಬ್ಬಳ್ಳಿ ಟೈಗರ್ಸ್​: 18.3 ಓವರ್​ಗಳಲ್ಲಿ 4 ವಿಕೆಟ್​ಗೆ 160 (ಕೆಎಲ್​ ಶ್ರೀಜಿತ್​ 51, ಮನೀಷ್​ ಪಾಂಡೆ 31, ಅನೀಶ್ವರ್​ 35*, ಕಾರ್ತಿಕೇಯ 31*, ವೈಶಾಕ್​ 30ಕ್ಕೆ 2, ಮೋನಿಷ್​ 27ಕ್ಕೆ 1).

ಭಾನುವಾರದ ಪಂದ್ಯಗಳು

ಗುಲ್ಬರ್ಗಾ ಮಿಸ್ಟಿಕ್ಸ್​-ಮೈಸೂರು ವಾರಿಯರ್ಸ್​

ಆರಂಭ: ಮಧ್ಯಾಹ್ನ 3.00

ಬೆಂಗಳೂರು ಬ್ಲಾಸ್ಟರ್ಸ್​-ಶಿವಮೊಗ್ಗ ಲಯನ್ಸ್​

ಆರಂಭ: ರಾತ್ರಿ 7.00

ನೇರಪ್ರಸಾರ: ಸ್ಟಾರ್​ ಸ್ಪೋರ್ಟ್ಸ್​