ವಿಜಯವಾಣಿ ಸುದ್ದಿಜಾಲ ಬೆಂಗಳೂರು
ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಥವಾ ಚುಟುಕಾಗಿ ಆರ್ಸಿಬಿ ಎಂದರೆ ಇದು ಬರೀ ಒಂದು ಹೆಸರಲ್ಲ, ಪ್ರೀತಿಯ ಸಾಗರ. ಸೋಲು-ಗೆಲುವಿನ ನಡುವೆ ಯಾವತ್ತೂ ಕಡಿಮೆಯಾಗದ ಪ್ರೀತಿ ಇದು. ಕಳೆದ 17 ವರ್ಷಗಳಿಂದ ಒಂದೇ ಒಂದು ಪ್ರಶಸ್ತಿ ಗೆಲ್ಲದಿದ್ದರೂ, ಅಭಿಮಾನಿಗಳ ಹೃದಯವನ್ನು ಮಾತ್ರ ಪ್ರತಿ ಬಾರಿಯೂ ಗೆಲ್ಲುತ್ತ ಬಂದಿದೆ. ಹೀಗಾಗಿ ಆರ್ಸಿಬಿ ಮೇಲಿನ ಅಭಿಮಾನಿಗಳ ಪ್ರೀತಿ ಯಾವತ್ತಿಗೂ ಕಡಿಮೆಯಾಗಿಲ್ಲ. ಇದೀಗ 18ನೇ ಆವೃತ್ತಿಯಲ್ಲಿ ಚೊಚ್ಚಲ ಕಪ್ ಗೆಲ್ಲುವ ಮೂಲಕ ಅಭಿಮಾನಿಗಳ ಪ್ರೀತಿಯ ಋಣ ಸಂದಾಯ ಮಾಡುವ ಅವಕಾಶ ಆರ್ಸಿಬಿ ತಂಡದ ಮುಂದಿದೆ ಮತ್ತು ಅದಕ್ಕೆ ವೇದಿಕೆಯೂ ಸಜ್ಜಾಗಿ ನಿಂತಿದೆ.
"ಇದು ಆರ್ಸಿಬಿಯ ಹೊಸ ಅಧ್ಯಾಯ' ಎಂದು ವಿರಾಟ್ ಕೊಹ್ಲಿ ಕಳೆದ ವರ್ಷವೇ ಘೋಷಿಸಿದ್ದರು. ಇಂಗ್ಲಿಷ್ನಲ್ಲಿ ತಂಡದ ಹೆಸರು ಕೂಡ "ಬ್ಯಾಂಗಲೋರ್'ನಿಂದ "ಬೆಂಗಳೂರು' ಆಗಿತ್ತು. ಅಲ್ಲದೆ ಆರಂಭಿಕ 8 ಪಂದ್ಯಗಳಲ್ಲಿ 7ರಲ್ಲಿ ಸೋತ ನಂತರ ಸತತ 6 ಗೆಲುವಿನೊಂದಿಗೆ ಅಮೋವಾಗಿ ಪ್ಲೇಆ್ಗೇರಿತ್ತು. ಆದರೆ ಎಲಿಮಿನೇಟರ್ನಲ್ಲಿ ರಾಜಸ್ಥಾನ ರಾಯಲ್ಸ್ ಎದುರು ಸೋತು ನಿರಾಸೆ ಅನುಭವಿಸಿತ್ತು. ಈ ಬಾರಿ ಮಾರ್ಚ್ 22ರಂದು ಕೋಲ್ಕತದಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೆಕೆಆರ್ ವಿರುದ್ಧ ಆಡುವ ಮೂಲಕ ಆರ್ಸಿಬಿ ಅಭಿಯಾನ ಆರಂಭಿಸಲಿದೆ.
ಈ ಸಲದ ಆವೃತ್ತಿ ಆರ್ಸಿಬಿ ಪಾಲಿಗೆ ಅಕ್ಷರಶಃ "ಹೊಸ ಅಧ್ಯಾಯ' ಆಗುವ ನಿರೀೆ ಹೆಚ್ಚಿದೆ. ಯಾಕೆಂದರೆ ಕಳೆದ ಮೆಗಾ ಹರಾಜಿನ ನಂತರ ತಂಡ ಸಾಕಷ್ಟು ಬದಲಾವಣೆ ಕಂಡಿದೆ. ಜತೆಗೆ ಮಧ್ಯಪ್ರದೇಶದ ಬ್ಯಾಟರ್ ರಜತ್ ಪಾಟೀದಾರ್ ಹೊಸ ನಾಯಕರಾಗಿ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಬರೀ ವಿದೇಶಿಯರೇ ತುಂಬಿದ್ದ ತರಬೇತಿ ಬಳಗದಲ್ಲಿ ಮಾಜಿ ಕ್ರಿಕೆಟಿಗ ದಿನೇಶ್ ಕಾರ್ತಿಕ್ ಬ್ಯಾಟಿಂಗ್ ಕೋಚ್ ಆಗಿ ಹೊಸ ಶಕ್ತಿ ತುಂಬಲಿದ್ದಾರೆ.
ಲಕ್ ತರುವುದೇ 18?
ಈ ಸಲದ ಐಪಿಎಲ್ ಟೂರ್ನಿ, 18ನೇ ಆವೃತ್ತಿ ಆಗಿರುವುದು ಕಪ್ ಗೆಲುವಿನ ಕನಸು ನನಸಾಗಿಸುವ ನಿರೀೆ ಹೆಚ್ಚಿಸಿದೆ. ಯಾಕೆಂದರೆ 18 ಆರ್ಸಿಬಿಯ ಶಕ್ತಿ. ಅಂದರೆ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರ ಜೆರ್ಸಿ ನಂಬರ್ 18. ಇದು ಕೊಹ್ಲಿ ಅವರ ಸತತ 18 ವರ್ಷಗಳ ಐಪಿಎಲ್ ಟ್ರೋಫಿಯ ಕಾಯುವಿಕೆಯನ್ನೂ ಕೊನೆಗೊಳಿಸುವ ನಿರೀೆ ಹರಡಿದೆ. ಟಿ20 ವಿಶ್ವಕಪ್, ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆಲುವಿನ ಬಳಿಕ ಐಪಿಎಲ್ ಕಿರೀಟ "ಕಿಂಗ್ ಕೊಹ್ಲಿ' ವೃತ್ತೀಜಿವನವನ್ನು ಮತ್ತಷ್ಟು ವರ್ಣರಂಜಿತಗೊಳಿಸುವುದು ಖಚಿತ.
ಪಾಟೀದಾರ್ ಹೆಗಲೇರಿದ ನಿರೀಕ್ಷೆ....
ಆರ್ಸಿಬಿ ತಂಡದ 8ನೇ ನಾಯಕ ಮತ್ತು 4ನೇ ಭಾರತೀಯ ನಾಯಕರೆನಿಸಿರುವ 31 ವರ್ಷದ ರಜತ್ ಪಾಟೀದಾರ್ಗೆ ಇದು ಐಪಿಎಲ್ನಲ್ಲಿ ಮೊದಲ ನಾಯಕತ್ವ ಸವಾಲಾಗಿದೆ. ಕಳೆದ ದೇಶೀಯ ಕ್ರಿಕೆಟ್ ಋತುವಿನ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯಲ್ಲಿ ಮಧ್ಯಪ್ರದೇಶ ತಂಡವನ್ನು ಫೈನಲ್ಗೇರಿಸಿದ್ದ ಸಾಧನೆ ರಜತ್ ಪಾಟೀದಾರ್ಗೆ ಆರ್ಸಿಬಿ ನಾಯಕತ್ವ ಒಲಿಯಲು ನೆರವಾಗಿದೆ. ೈನಲ್ನಲ್ಲಿ ಮುಂಬೈ ವಿರುದ್ಧ ಸೋಲು ಕಂಡಿದ್ದ ನಡುವೆ ಬ್ಯಾಟಿಂಗ್ನಲ್ಲೂ ಮಿಂಚಿದ್ದ ರಜತ್, ಒಟ್ಟು 428 ರನ್ ಕಲೆಹಾಕುವ ಮೂಲಕ ಟೂರ್ನಿಯ 2ನೇ ಗರಿಷ್ಠ ರನ್ಸ್ಕೋರರ್ ಎನಿಸಿದ್ದರು. ಐಪಿಎಲ್ನಲ್ಲೂ ಅಂಥದ್ದೇ ಯಶಸ್ಸು ಮುಂದುವರಿಸುವ ಮೂಲಕ ಹೊಸ ಇತಿಹಾಸ ಬರೆಯುವ ಅವಕಾಶ ರಜತ್ ಮುಂದಿದೆ.
ಹೊಸ ತಾರೆಯರ ಸೇರ್ಪಡೆ...
ಹಿಂದಿನ ಆವೃತ್ತಿಯಲ್ಲಿದ್ದ ಫಾಫ್ ಡು ಪ್ಲೆಸಿಸ್, ಗ್ಲೆನ್ ಮ್ಯಾಕ್ಸ್ವೆಲ್, ಮೊಹಮದ್ ಸಿರಾಜ್ರಂಥ ಪ್ರಮುಖ ಆಟಗಾರರನ್ನು ಕೈಬಿಟ್ಟು ಆರ್ಸಿಬಿ ಈ ಬಾರಿ ಬಹುತೇಕ ಹೊಸ ತಂಡವನ್ನು ಕಟ್ಟಲಿದೆ. ಕಳೆದ ಸಾಲಿನಲ್ಲಿ ಆರ್ಸಿಬಿ 11ರ ಬಳಗದಲ್ಲಿದ್ದ ಕೊಹ್ಲಿ, ಪಾಟೀದಾರ್ ಜತೆಗೆ ಯಶ್ ದಯಾಳ್ ಮಾತ್ರ ಈ ಸಲವೂ ಮುಂದುವರಿಯಲಿದ್ದಾರೆ. ಮೆಗಾ ಹರಾಜಿನಲ್ಲಿ ಇಂಗ್ಲೆಂಡ್ನ ಕೀಪರ್-ಬ್ಯಾಟರ್ ಫಿಲ್ ಸಾಲ್ಟ್, ಆಲ್ರೌಂಡರ್ಗಳಾದ ಲಿಯಾಮ್ ಲಿವಿಂಗ್ಸ್ಟೋನ್, ಜೇಕಬ್ ಬೆಥೆಲ್, ಆಸೀಸ್ನ ಸ್ಫೋಟಕ ಬ್ಯಾಟರ್ ಟಿಮ್ ಡೇವಿಡ್, ಭಾರತೀಯ ವಿಕೆಟ್ ಕೀಪರ್-ಬ್ಯಾಟರ್ ಜಿತೇಶ್ ಶರ್ಮ, ಅನುಭವಿ ಆಲ್ರೌಂಡರ್ ಕೃನಾಲ್ ಪಾಂಡ್ಯ, ವೇಗಿ ಭುವನೇಶ್ವರ್ ಕುಮಾರ್ ಈ ಸಲದ ಪ್ರಮುಖ ಹೊಸ ಸೇರ್ಪಡೆಯಾಗಿದ್ದಾರೆ.
ಇಬ್ಬರೇ ಕನ್ನಡಿಗರು...
ಅಭಿಮಾನಿಗಳ ಆಕ್ರೋಶದ ನಡುವೆಯೂ ಆರ್ಸಿಬಿ ತಂಡದಲ್ಲಿ ಇತ್ತೀಚೆಗಿನ ವರ್ಷಗಳಲ್ಲಿ ಕರ್ನಾಟಕದ ಕ್ರಿಕೆಟಿಗರಿಗೆ ಹೆಚ್ಚಿನ ಆದ್ಯತೆ ಲಭಿಸಿಲ್ಲ. ಕಳೆದ ಮೆಗಾ ಹರಾಜಿನಲ್ಲಿ ಕೆಎಲ್ ರಾಹುಲ್ ಸಹಿತ ಕರ್ನಾಟಕದ ಕೆಲ ಪ್ರಮುಖ ಕ್ರಿಕೆಟಿಗರನ್ನು ಸೇರಿಸಿಕೊಳ್ಳುವ ಅವಕಾಶವನ್ನು ಆರ್ಸಿಬಿ ಕೈಚೆಲ್ಲಿತ್ತು. ಈ ಸಲ ಆರ್ಸಿಬಿ ತಂಡದಲ್ಲಿ ಇಬ್ಬರಷ್ಟೇ ಕನ್ನಡಿಗರಿದ್ದಾರೆ. ಅವರೆಂದರೆ ಎಡಗೈ ಬ್ಯಾಟರ್ ದೇವದತ್ ಪಡಿಕ್ಕಲ್ ಮತ್ತು ಆಲ್ರೌಂಡರ್ ಮನೋಜ್ ಭಾಂಡಗೆ. ಈ ಪೈಕಿ, ಆರ್ಸಿಬಿ ಮೂಲಕವೇ ಐಪಿಎಲ್ಗೆ ಪದಾರ್ಪಣೆ ಮಾಡಿ, 4 ವರ್ಷಗಳ ಬಳಿಕ ಮತ್ತೆ ಮರಳಿರುವ ಪಡಿಕ್ಕಲ್ಗೆ 11ರ ಬಳಗದಲ್ಲೂ ಸ್ಥಾನ ಲಭಿಸುವ ನಿರೀೆ ಹೆಚ್ಚಿದೆ.
ಬಲಿಷ್ಠ ಆಡುವ 11ರ ಬಳಗ
ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ರಜತ್ ಪಾಟೀದಾರ್ (ನಾಯಕ), ಲಿಯಾಮ್ ಲಿವಿಂಗ್ಸ್ಟೋನ್, ಜಿತೇಶ್ ಶರ್ಮ (ವಿ.ಕೀ), ಟಿಮ್ ಡೇವಿಡ್/ಜೇಕಬ್ ಬೆಥೆಲ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಸುಯಶ್ ಶರ್ಮ, ಜೋಶ್ ಹ್ಯಾಸಲ್ವುಡ್/ನುವಾನ್ ತುಷಾರ/ಲುಂಗಿ ಎನ್ಗಿಡಿ, ಯಶ್ ದಯಾಳ್.
ಇಂಪ್ಯಾಕ್ಟ್ ಪ್ಲೇಯರ್ಸ್: ದೇವದತ್ ಪಡಿಕ್ಕಲ್, ಸ್ವಪ್ನಿಲ್ ಸಿಂಗ್, ರಸಿಕ್ ದಾರ್, ಮನೋಜ್ ಭಾಂಡಗೆ.
ಮೀಸಲು ಬಳಗ: ಸ್ವಸ್ತಿಕ್ ಚಿಕಾರ, ರೊಮಾರಿಯೊ ಶೆರ್ಡ್, ಅಭಿನಂದನ್ ಸಿಂಗ್, ಮೋಹಿತ್ ರಾಥಿ.
ಆರ್ಸಿಬಿ ವೇಳಾಪಟ್ಟಿ
ತವರಿನ ಪಂದ್ಯಗಳು
ದಿನಾಂಕ ಎದುರಾಳಿ ಆರಂಭ
ಏ. 2 ಗುಜರಾತ್ ರಾ.7.30
ಏ.10 ಡೆಲ್ಲಿ ರಾ.7.30
ಏ.18 ಪಂಜಾಬ್ ರಾ. 7.30
ಏ.24 ರಾಜಸ್ಥಾನ ರಾ. 7.30
ಮೇ 3 ಸಿಎಸ್ಕೆರಾ. 7.30
ಮೇ 13 ಸನ್ರೈಸರ್ಸ್ ರಾ. 7.30
ಮೇ 17 ಕೆಕೆಆರ್ ರಾ. 7.30
ಎದುರಾಳಿ ನೆಲದಲ್ಲಿ
ದಿನಾಂಕ ಎದುರಾಳಿ ಸ್ಥಳ ಆರಂಭ
ಮಾ.22 ಕೆಕೆಆರ್ ಕೋಲ್ಕತ ರಾ.7.30
ಮಾ.28 ಸಿಎಸ್ಕೆ ಚೆನ್ನೆ$ ರಾ.7.30
ಏ. 7 ಮುಂಬೈ ಮುಂಬೈ ರಾ.7.30
ಏ.13 ರಾಜಸ್ಥಾನ ಜೈಪುರ ಮ.3.30
ಏ.20 ಪಂಜಾಬ್ ಚಂಡೀಗಢ ಮ.3.30
ಏ.27 ಡೆಲ್ಲಿ ನವದೆಹಲಿ ರಾ.7.30
ಮೇ 9 ಲಖನೌ ಲಖನೌ ರಾ.7.30
ವೇಳಾಪಟ್ಟಿಯ ಸವಾಲು...
ಆರ್ಸಿಬಿ ತನ್ನ ಮೊದಲ 4ರಲ್ಲಿ 3 ಪಂದ್ಯಗಳನ್ನು ಎದುರಾಳಿ ನೆಲದಲ್ಲಿ ಆಡಲಿದೆ. ಅಲ್ಲದೆ, ಕೊನೇ 2 ಪಂದ್ಯಗಳವರೆಗೆ ಒಮ್ಮೆಯೂ ತವರಿನಲ್ಲಿ ಸತತ 2 ಪಂದ್ಯಗಳನ್ನು ಆಡುವುದಿಲ್ಲ. ಇದರಿಂದಾಗಿ ತಂಡ ನಿರಂತರ ಪ್ರಯಾಣದಲ್ಲಿರಬೇಕಾಗುತ್ತದೆ. ಇನ್ನು ಕೆಕೆಆರ್, ಡೆಲ್ಲಿ, ಸಿಎಸ್ಕೆ, ರಾಜಸ್ಥಾನ ಮತ್ತು ಪಂಜಾಬ್ ಎದುರು ಈ ಬಾರಿ ತವರು&ಎದುರಾಳಿ ನೆಲ ಎರಡರಲ್ಲೂ ಆಡಲಿದ್ದರೆ, ಗುಜರಾತ್, ಸನ್ರೈಸರ್ಸ್ ಎದುರು ತವರಿನಲ್ಲಿ ಮಾತ್ರ ಆಡಲಿದೆ. ಮುಂಬೈ, ಲಖನೌ ತಂಡಗಳನ್ನು ಎದುರಾಳಿ ನೆಲದಲ್ಲಿ ಮಾತ್ರ ಎದುರಿಸಲಿದೆ.
ಇಂದು ಅನ್ಬಾಕ್ಸ್ ಕಾರ್ಯಕ್ರಮ
ಆರ್ಸಿಬಿ ತಂಡ ಮತ್ತು ಅಭಿಮಾನಿಗಳ ಸಮಾಗಮಕ್ಕೆ ವೇದಿಕೆಯಾಗುವ ಅನ್ಬಾಕ್ಸ್ ಕಾರ್ಯಕ್ರಮ ಸೋಮವಾರ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿದೆ. ಇದರಲ್ಲಿ ಆರ್ಸಿಬಿ ಅಭಿಮಾನಿಗಳು, ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಸಹಿತ ಎಲ್ಲ ಆಟಗಾರರ ಅಭ್ಯಾಸವನ್ನು ವೀಸುವ ಅವಕಾಶ ಪಡೆಯಲಿದ್ದಾರೆ. ಜತೆಗೆ ತಂಡದ ಹೊಸ ಜೆರ್ಸಿ ಅಧಿಕೃತವಾಗಿ ಅನಾವರಣಗೊಳ್ಳುವ ನಿರೀೆ ಇದೆ. ಆರ್ಸಿಬಿ ತವರು ಮೈದಾನದಲ್ಲಿ ಸಂಜೆ 4 ಗಂಟೆಯಿಂದ ನಡೆಯಲಿರುವ ಕಾರ್ಯಕ್ರಮದಲ್ಲಿ ಸಂಗೀತ ಸುಧೆಯೂ ಹರಿಯಲಿದೆ. ರಾಜ್ಯದ ಜನಪ್ರಿಯ ಗಾಯಕ ಸಂಜಿತ್ ಹೆಗ್ಡೆ, ಗಾಯಕಿ ಐಶ್ವರ್ಯ ರಂಗರಾಜನ್ ಜತೆಗೆ ಕೇರಳದ ಪ್ರಸಿದ್ಧ ರ್ಯಾಪರ್ ಹನುಮಕಿಂಡ (ಸೂರಜ್ ಚೆರುಕಟ್) ಮತ್ತು ಆಸ್ಟ್ರೆಲಿಯಾದ ಡಿಜೆ, ಸಂಗೀತಕಾರ ಟಿಮ್ಮಿ ಟ್ರಂಪೆಟ್ (ಟಿಮೋಥಿ ಜುಡ್ ಸ್ಮಿತ್) ಸಂಗೀತದೊಂದಿಗೆ ಮನರಂಜನೆ ಒದಗಿಸಲಿದ್ದಾರೆ. 800ರಿಂದ 5 ಸಾವಿರ ರೂ. ಬೆಲೆ ಹೊಂದಿರುವ ಕಾರ್ಯಕ್ರಮದ ಎಲ್ಲ ಟಿಕೆಟ್ಗಳು ಈಗಾಗಲೆ ಸೋಲ್ಡ್ ಔಟ್ ಆಗಿವೆ.
*ಐಪಿಎಲ್ ಸಾಧನೆ
ರನ್ನರ್ಅಪ್: 2009, 2011, 2016
3ನೇ ಸ್ಥಾನ: 2010, 2015, 2022
4ನೇ ಸ್ಥಾನ: 2020, 2021, 2024
5ನೇ ಸ್ಥಾನ: 2012, 2013
6ನೇ ಸ್ಥಾನ: 2018, 2023
7ನೇ ಸ್ಥಾನ: 2008, 2014
8ನೇ ಸ್ಥಾನ: 2017, 2019
*ಐಪಿಎಲ್ ನಿರ್ವಹಣೆ
ಪಂದ್ಯ: 256
ಜಯ: 123
ಸೋಲು: 129
ರದ್ದು: 4