ನವದೆಹಲಿ: ಒಲಿಂಪಿಕ್ಸ್ ಮತ್ತು ವಿಶ್ವ ಚಾಂಪಿಯನ್ ಜಾವೆಲಿನ್ ಥ್ರೋ ತಾರೆ ನೀರಜ್ ಚೋಪ್ರಾ ಮೂರು ವರ್ಷಗಳ ಬಳಿಕ ತವರು ನೆಲದಲ್ಲಿ ಸ್ಪರ್ಧಿಸಲು ಸಜ್ಜಾಗಿದ್ದಾರೆ. ಮೇ 12ರಿಂದ 15ರವರೆಗೆ ಒಡಿಶಾದ ಭುವನೇಶ್ವರದಲ್ಲಿ ನಡೆಯಲಿರುವ 27ನೇ ರಾಷ್ಟ್ರೀಯ ಫೆಡರೇಷನ್ ಕಪ್ ಅಥ್ಲೆಟಿಕ್ಸ್ ಕೂಟದಲ್ಲಿ ನೀರಜ್ ಭಾಗವಹಿಸಲಿರುವುದನ್ನು ಬುಧವಾರ ಖಚಿತಪಡಿಸಿದ್ದಾರೆ.
26 ವರ್ಷದ ತಾರೆ ನೀರಜ್ ಮೇ 10ರಂದು ದೋಹಾದಲ್ಲಿ ನಡೆಯಲಿರುವ ಪ್ರತಿಷ್ಠಿತ ಡೈಮಂಡ್ ಲೀಗ್ನ ಮೊದಲ ಚರಣದಲ್ಲಿ ಸ್ಪರ್ಧಿಸುವ ಮೂಲಕ ಹಾಲಿ ವರ್ಷ ಮೊದಲ ಬಾರಿಗೆ ಕಣಕ್ಕಿಳಿಯಲಿದ್ದಾರೆ. ಬಳಿಕ ಭಾರತಕ್ಕೆ ಆಗಮಿಸಿ ಫೆಡರೇಷನ್ ಕಪ್ನಲ್ಲೂ ಸ್ಪರ್ಧಿಸಲಿದ್ದಾರೆ. ಒಲಿಂಪಿಕ್ಸ್ ಅರ್ಹತೆ ಸಂಪಾದಿಸಿರುವ ಮತ್ತೋರ್ವ ಜಾವೆಲಿನ್ ಎಸೆತದ ತಾರೆ ಕಿಶೋರ್ ಜೆನಾ ಕೂಡ ಭಾಗವಹಿಸಲಿದ್ದಾರೆ ಎಂದು ಭಾರತೀಯ ಅಥ್ಲೆಟಿಕ್ಸ್ ಒಕ್ಕೂಟ ತಿಳಿಸಿದೆ.
ಕಳೆದ ವರ್ಷ ಹಾಂಗ್ರೆೌ ಏಷ್ಯನ್ ಗೇಮ್ಸ್ನಲ್ಲಿ ನೀರಜ್ ಚಿನ್ನ ಗೆದ್ದಿದ್ದರೆ, ಕಿಶೋರ್ ರಜತ ಪದಕ ಗೆದ್ದುಕೊಂಡಿದ್ದರು. ನಂತರದಲ್ಲಿ ನೀರಜ್ ಯಾವುದೇ ಸ್ಪರ್ಧೆಯಲ್ಲಿ ಭಾಗವಹಿಸಿರಲಿಲ್ಲ.
2021ರ ಮಾರ್ಚ್ 17ರಂದು ನೀರಜ್ ಚೋಪ್ರಾ ೆಡರೇಷನ್ ಕಪ್ನಲ್ಲೇ ಕೊನೆಯದಾಗಿ ಭಾರತದಲ್ಲಿ ಸ್ಪರ್ಧಿಸಿದ್ದರು. ಆಗ 87.80 ಮೀಟರ್ ಎಸೆತದೊಂದಿಗೆ ಚಿನ್ನ ಜಯಿಸಿದ್ದರು.