ಕ್ರೀಡೆ

ವಿಲನ್‌ನಿಂದ ಹೀರೋ ಆದ ತೆವಾಟಿಯಾ, ಟ್ವಿಟರ್‌ನಲ್ಲಿ ನಗುವಿನ ಸಿಕ್ಸರ್​ ಸಿಡಿಸಿದ ಮೀಮ್ಸ್​!

ಬೆಂಗಳೂರು: ಶಾರ್ಜಾದಲ್ಲಿ ಭಾನುವಾರ ನಡೆದ ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ರಾಜಸ್ಥಾನ ರಾಯಲ್ಸ್ ನಡುವಿನ ಐಪಿಎಲ್ ಪಂದ್ಯ ಅಭಿಮಾನಿಗಳಿಗೆ ಭರ್ಜರಿ ಮನರಂಜನೆ ಒದಗಿಸಿತು. ಪಂದ್ಯದಲ್ಲಿ ಹೀರೋ ಆಗಿ ಮೂಡಿ ಬಂದವರು ಹರಿಯಾಣದ ದೇಶೀಯ ಕ್ರಿಕೆಟಿಗ ರಾಹುಲ್ ತೆವಾಟಿಯಾ.

ಮೈದಾನಕ್ಕಿಳಿದ ಆರಂಭದಲ್ಲಿ ರಾಹುಲ್ ತೆವಾಟಿಯಾ ಹೆಚ್ಚಿನ ಕ್ರಿಕೆಟ್ ಪ್ರೇಮಿಗಳ ಪಾಲಿಗೆ ವಿಲನ್‌ನಂತೆ ಕಂಡಿದ್ದರು. ಯಾಕೆಂದರೆ ಒಂದೆಡೆ ಸಂಜು ಸ್ಯಾಮ್ಸನ್ ಸ್ಫೋಟಕ ಆಟವಾಡುತ್ತಿದ್ದರೆ, ಮತ್ತೊಂದೆಡೆ ತೆವಾಟಿಯಾ ಆಮೆಗತಿಯ ಆಟವಾಡುತ್ತಿದ್ದರು. ರನ್‌ಗತಿ ಏರುತ್ತಿದ್ದರೂ ತೆವಾಟಿಯಾ ರನ್ ಗಳಿಸಲು ಪರದಾಡುತ್ತಿದ್ದರು. ಆದರೆ ಇನಿಂಗ್ಸ್‌ನ 18ನೇ ಓವರ್‌ನಲ್ಲಿ ಸತತ 4 ಸಿಕ್ಸರ್ ಸಹಿತ ಒಟ್ಟು 5 ಸಿಕ್ಸರ್ ಒಳಗೊಂಡ 30 ರನ್ ಬಾರಿಸುವುದರೊಂದಿಗೆ ಪಂದ್ಯದ ಚಿತ್ರಣವನ್ನೇ ಬದಲಾಯಿಸಿದ ತೆವಾಟಿಯಾ ಹೀರೋ ಆಗಿ ಕಂಗೊಳಿಸಿದರು.

ಮೊದಲಿಗೆ ತೆವಾಟಿಯಾರನ್ನು ದೂರುತ್ತಿದ್ದವರೇ ನಂತರ ಅವರ ಗುಣಗಾನ ಮಾಡಲಾರಂಭಿಸಿದರು. ಸಾಮಾಜಿಕ ಜಾಲತಾಣಗಳಲ್ಲೂ ಮೊದಲಿಗೆ ತೆವಾಟಿಯಾರನ್ನು ತೆಗಳಿ ಟ್ರೋಲ್ ಮಾಡುತ್ತಿದ್ದವರೇ ನಂತರ ಅವರ ಸಾಮರ್ಥ್ಯವನ್ನು ಅರಿತು ಅವರ ಪರವಾದ ಮೀಮ್ಸ್‌ಗಳ ಮೂಲಕವೇ ಜನರನ್ನು ನಗಿಸಿದರು. ತೆವಾಟಿಯಾ ಭರ್ಜರಿ ಆಟದ ಬಳಿಕ ಹರಿದುಬಂದ ಅಂಥ ಕೆಲ ಮೀಮ್ಸ್‌ಗಳು ಇಲ್ಲಿವೆ.