ಕ್ರೀಡೆ

ಸ್ಕಾಯ್​ ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಹೊಳೆನರಸೀಪುರ ತಂಡ

ಬೆಂಗಳೂರು: ಕರ್ನಾಟಕ ರಾಜ್ಯ ಸ್ಕಾಯ್​ ಸಂಸ್ಥೆ ಹಾಗೂ ಬೆಂಗಳೂರು ನಗರ ಜಿಲ್ಲಾ ಸ್ಕಾಯ್​ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ಬನಶಂಕರಿಯ ಮೂರನೇ ಹಂತದಲ್ಲಿರುವ ಅನೀಸ್​ ಸ್ಪೋರ್ಟ್ಸ್​ ಕ್ಲಬ್​ನಲ್ಲಿ ಇತ್ತೀಚೆಗೆ ನಡೆದ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಹಾಸನ ಜಿಲ್ಲೆಯ ಹೊಳೆನರಸೀಪುರ ತಂಡ ಪ್ರಥಮ ಸ್ಥಾನ ಅಲಂಕರಿಸಿದೆ. ದಾವಣಗೆರೆ ಜಿಲ್ಲೆಯೆ ಹರಿಹರ ತಂಡ ದ್ವೀತಿಯ ಮತ್ತು ಗದಗ ಜಿಲ್ಲೆಯ ಮುಂಡರಗಿ ತಂಡ ಮೂರನೇ ಸ್ಥಾನ ಪಡೆಯಿತು. ಈ ಮೂರೂ ತಂಡಗಳ ಕ್ರೀಡಾಪಟುಗಳು ರಾಜಸ್ಥಾನದ ಜೈಪುರದಲ್ಲಿ ನಡೆಯಲಿರುವ 24ನೇ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ಮಾರ್ಷಲ್​ ಆರ್ಟ್ಸ್​ ಕ್ರೀಡೆಯ ಈ ರಾಜ್ಯಮಟ್ಟದ ಆಯ್ಕೆ ಪ್ರಕ್ರಿಯೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ 210 ಕ್ರೀಡಾಪಟುಗಳು ಭಾಗವಹಿಸಿದ್ದರು. ರಾಜ್ಯ ವಿರೋಧ ಪಕ್ಷದ ನಾಯಕ ಆರ್​. ಅಶೋಕ್​ ಕ್ರೀಡಾಕೂಟವನ್ನು ಉದ್ಘಾಟಿಸಿದರು. ಕಾಪೋರ್ರೇಟರ್​ ವೆಂಕಟಸ್ವಾಮಿ ನಾಯ್ಡು, ಬೆಂಗಳೂರು ನಗರ ಜಿಲ್ಲಾ ಸ್ಕಾಯ್​ ಸಂಸ್ಥೆ ಪ್ರಧಾನ ಕಾರ್ಯದರ್ಶಿ, ಕೋಚ್​ ಹಾಗೂ ರೆಫ್ರಿ ದಿವ್ಯಾಬಾಯಿ ಪಿಎನ್​, ಜಂಟಿ ಕಾರ್ಯದರ್ಶಿ ಕಿರಣ್​, ಅಧ್ಯಕ್ಷ ರವಿಕುಮಾರ್​ ಉಪಸ್ಥಿತರಿದ್ದರು.