ಮೀರಾಬಾಯಿ, ಲವ್ಲಿನಾ ಕಾಮನ್ವೆಲ್ತ್ ಗೇಮ್ಸ್ ಧ್ವಜಧಾರಿಗಳು
ನವದೆಹಲಿ: ಒಲಿಂಪಿಕ್ಸ್ ಪದಕ ವಿಜೇತರಾದ ವೇಯ್ಟ್ಲ್ಟಿರ್ ಮೀರಾಬಾಯಿ ಚಾನು ಮತ್ತು ಬಾಕ್ಸರ್ ಲವ್ಲಿನಾ ಬೋಗೋರ್ಹೈನ್ ಜುಲೈ 23ರಂದು ಸ್ಕಾಟ್ಲೆಂಡ್ನ ಗ್ಲಾಸ್ಗೋದಲ್ಲಿ ನಡೆಯಲಿರುವ ಕಾಮನ್ವೆಲ್ತ್ ಗೇಮ್ಸ್ನ (Commonwealth Games) ಉದ್ಘಾಟನಾ ಸಮಾರಂಭದಲ್ಲಿ ತ್ರಿವರ್ಣ ಧ್ವಜ ಮತ್ತು ಬ್ಯಾಟನ್ನೊಂದಿಗೆ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ.
ಹಾಲಿ ವರ್ಷ ಇಬ್ಬರು ಮಹಿಳಾ ಕ್ರೀಡಾಪಟುಗಳಿಗೆ ಈ ಗೌರವ ನೀಡಲಾಗುತ್ತಿರುವುದನ್ನು ಭಾರತೀಯ ಒಲಿಂಪಿಕ್ ಸಂಸ್ಥೆ (ಐಒಎ) ಅಧ್ಯೆ ಪಿ.ಟಿ. ಉಷಾ ಶನಿವಾರ ಪ್ರಕಟಿಸಿದ್ದಾರೆ. "ನಾನು ಇಬ್ಬರು ಮಹಿಳೆಯರಿಗೆ ಮತ್ತು ಸಂಪೂರ್ಣ ಭಾರತ ತಂಡಕ್ಕೆ ಶುಭ ಹಾರೈಸುತ್ತೇನೆ. ಇಬ್ಬರು ಮಹಿಳೆಯರನ್ನೇ ಆರಿಸಿರುವುದು ದೇಶಕ್ಕೆ ಹೆಮ್ಮೆಯ ವಿಷಯ' ಎಂದು ಪಿ.ಟಿ. ಉಷಾ ಹೇಳಿದ್ದಾರೆ. 32 ವರ್ಷದ ಮೀರಾಬಾಯಿ 2021ರ ಟೋಕಿಯೊ ಒಲಿಂಪಿಕ್ಸ್ನಲ್ಲಿ ಬೆಳ್ಳಿ ಗೆದ್ದು ಇತಿಹಾಸ ನಿರ್ಮಿಸಿದ್ದರೆ, ಲವ್ಲಿನಾ ಅದೇ ಒಲಿಂಪಿಕ್ಸ್ನಲ್ಲಿ ಕಂಚು ಜಯಿಸಿದ್ದರು.
ಗೇಮ್ಸ್ನಲ್ಲಿ 78 ಪುರುಷರು, 48 ಮಹಿಳೆಯರ ಸಹಿತ 126 ಕ್ರೀಡಾಪಟುಗಳು ಮತ್ತು 51 ತಂಡ ಅಧಿಕಾರಿಗಳ ಸಹಿತ 191 ಸದಸ್ಯರ ಭಾರತ ತಂಡಕ್ಕೆ ಭಾಗವಹಿಸಲಿದೆ. ಗ್ಲಾಸ್ಗೋದಲ್ಲಿ ನಡೆಯಲಿರುವ 10 ಕ್ರೀಡಾ ಸ್ಪರ್ಧೆಗಳಲ್ಲಿ 9ರಲ್ಲಿ ಭಾರತ ಸ್ಪರ್ಧಿಸಲಿದೆ. 6 ಪ್ಯಾರಾ ಕ್ರೀಡೆಗಳಲ್ಲಿ 5ರಲ್ಲಿ ಭಾರತ ಸ್ಪರ್ಧಿಸಲಿದೆ.