ಕರ್ನಾಟಕದ ರಘುಪ್ರಸಾದ್ಗೆ ವರ್ಷದ ಹಾಕಿ ಅಂಪೈರ್ ಪ್ರಶಸ್ತಿ
ಲೌಸನ್ನೆ: ಕರ್ನಾಟಕದ ಅನುಭವಿ ಹಾಕಿ ತೀರ್ಪುಗಾರ ರಘುಪ್ರಸಾದ್ (Raghu Prasad), 2025ರ ಸಾಲಿನ ಎಫ್ಐಎಚ್ (Hockey) ವರ್ಷದ ಪುರುಷ ಅಂಪೈರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಪಂದ್ಯಗಳಲ್ಲಿ ಅಂಪೈರ್ ಆಗಿ ಕಾರ್ಯನಿರ್ವಹಿಸುವಾಗ ಪ್ರದರ್ಶಿಸಿರುವ ಅಮೋಘ ವೃತ್ತಿಪರತೆ ಮತ್ತು ಬದ್ಧತೆಗಾಗಿ ಅವರು ಅಂತಾರಾಷ್ಟ್ರೀಯ ಹಾಕಿ ಒಕ್ಕೂಟದಿಂದ ಈ ಪ್ರಶಸ್ತಿ ಪಡೆದಿದ್ದಾರೆ.
ಒಟ್ಟಾರೆ 198 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅಂಪೈರ್ ಮತ್ತು 33 ಪಂದ್ಯಗಳಲ್ಲಿ ವಿಡಿಯೋ ಅಂಪೈರ್ ಆಗಿರುವ ಅವರು, ಹಾಕಿ ಪ್ರೊ ಲೀಗ್, ಕಾಮನ್ವೆಲ್ತ್ ಗೇಮ್ಸ್, ಜೂನಿಯರ್ ವಿಶ್ವಕಪ್, ಒಲಿಂಪಿಕ್ಸ್ ಮತ್ತು ಏಷ್ಯನ್ ಟೂರ್ನಿಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ.