ಹಾಕಿ ವಿಶ್ವಕಪ್​: ಭಾರತದ ಮಹಿಳೆಯರಿಗೆ ದಾಖಲೆಯ 6-1 ಜಯ 
ಹಾಕಿ

ಹಾಕಿ ವಿಶ್ವಕಪ್​: ಭಾರತದ ಮಹಿಳೆಯರಿಗೆ ದಾಖಲೆಯ 6-1 ಜಯ

ಪ್ರಮುಖ ಮುಖ್ಯಾಂಶಗಳು

  • ಎರಡನೇ ಹಂತಕ್ಕೇರುವ ಅವಕಾಶ ಹೆಚ್ಚಿಸಿಕೊಂಡ ಸಲೀಮಾ ಟೆಟೆ ಬಳಗ

ಆಮ್​ಸ್ಟೆಲ್ವೀನ್​ (ನೆದರ್ಲ್ಯಾಂಡ್ಸ್​): ಭಾರತದ ಮಹಿಳೆಯರ ತಂಡ ಎ್​ಐಎಚ್​ ಹಾಕಿ ವಿಶ್ವಕಪ್​ನಲ್ಲಿ (

FIH Women''s Hockey World Cup

) ದಕ್ಷಿಣ ಆಫ್ರಿಕಾ ವಿರುದ್ಧ 6-1 ಗೋಲುಗಳಿಂದ ಪ್ರಾಬಲ್ಯ ಸಾಧಿಸಿ ದಾಖಲೆಯ ಗೆಲುವು ದಾಖಲಿಸಿದೆ. ಇದು ಸಲೀಮಾ ಟೆಟೆ ಬಳಗಕ್ಕೆ ಹಾಲಿ ಆವೃತ್ತಿಯ ಮೊದಲ ಗೆಲುವಾಗಿದೆ. ಜತೆಗೆ ಟೂರ್ನಿ ಇತಿಹಾಸದ ಅತಿದೊಡ್ಡ ಗೆಲುವು ದಾಖಲಿಸಿದ ಭಾರತ ತಂಡ, ಎರಡನೇ ಹಂತಕ್ಕೇರುವ ಅವಕಾಶ ವೃದ್ಧಿಸಿಕೊಂಡಿದೆ.

ವ್ಯಾಗನರ್​ ಸ್ಟೇಡಿಯಂನಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಭಾರತದ ಪರ ಸುನೆಲಿತ ಟೊಪ್ಪೊ (11ನೇ ನಿಮಿಷ), ನವನೀತ್​ ಕೌರ್​ (17), ಸುಶೀಲಾ ಚಾನು (25), ದೀಪಿಕಾ (38), ಲಾಲ್ರೆಮ್​ಸಿಯಾಮಿ (44), ಸಾ ರಾಣಾ (45) ತಲಾ ಒಂದು ಗೋಲು ಬಾರಿಸಿದರು. ದಣ ಆಫ್ರಿಕಾಕ್ಕೆ ದೆ ವಾಲ್​ ಕೈಲಾ (55) ಏಕೈಕ ಗೋಲಿನ ಸಮಾಧಾನ ತಂದರು.

ಮೊದಲ ಪಂದ್ಯದಲ್ಲಿ ಪ್ಯಾರಿಸ್​ ಒಲಿಂಪಿಕ್ಸ್​ ರಜತ ವಿಜೇತ ಚೀನಾ ಎದುರು ಡ್ರಾ ಸಾಧಿಸಿ ಅಂಕ ಹಂಚಿಕೊಂಡಿದ್ದ ಸೋಯೆರ್ಡ್​ ಮರಿನೆ ತರಬೇತಿಯ ಭಾರತ ತಂಡ ಈ ಗೆಲುವಿನೊಂದಿಗೆ ಡಿ ಗುಂಪಿನ ಅಂಕಪಟ್ಟಿಯಲ್ಲಿ 4 ಅಂಕಗಳೊಂದಿಗೆ ಅಗ್ರಸ್ಥಾನಕ್ಕೇರಿದೆ.
2ನೇ ಸುತ್ತಿಗೆ ಡ್ರಾ ಹಾದಿ
ದ. ಆಫ್ರಿಕಾ ವಿರುದ್ಧದ ಭರ್ಜರಿ ಗೆಲುವಿನೊಂದಿಗೆ ಸಲೀಮಾ ಟೆಟೆ ಪಡೆ 2ನೇ ಹಂತಕ್ಕೇರುವ ಹಾದಿ ಸುಗಮವಾಗಿಸಿಕೊಂಡಿದೆ. ಭಾರತ ಇನ್ನು ಇಂಗ್ಲೆಂಡ್​ ವಿರುದ್ಧದ ಕೊನೇ ಲೀಗ್​ ಪಂದ್ಯದಲ್ಲಿ ಕನಿಷ್ಠ ಡ್ರಾ ಸಾಧಿಸಿದರೂ 2ನೇ ಹಂತಕ್ಕೇರಬಹುದು. ಭಾರತ ತಂಡ ಆಂಗ್ಲರೆದುರು ಗೆದ್ದರೆ ಗುಂಪಿನ ಅಗ್ರಸ್ಥಾನಿಯಾಗಿ 2ನೇ ಸುತ್ತಿಗೇರುವ ಅವಕಾಶವೂ ಇದೆ.

ಅತಿದೊಡ್ಡ ಗೆಲುವು

ಹಾಕಿ ವಿಶ್ವಕಪ್​ನಲ್ಲಿ ಭಾರತದ ಮಹಿಳೆಯರಿಗೆ ಇದು ಅತಿದೊಡ್ಡ ಗೆಲುವಾಗಿದೆ. 1974ರ ಚೊಚ್ಚಲ ಆವೃತ್ತಿಯಲ್ಲಿ ಸ್ಪೇನ್​ ಎದುರು 4-1ರಿಂದ ಗೆದ್ದಿದ್ದು ಟೂರ್ನಿಯಲ್ಲಿ ಭಾರತದ ಈ ಹಿಂದಿನ ಅತಿದೊಡ್ಡ ಗೆಲುವಾಗಿತ್ತು.
ಭಾರತಕ್ಕೆ ಮುಂದಿನ ಪಂದ್ಯ
ಯಾವಾಗ: ಗುರುವಾರ
ಎದುರಾಳಿ: ಇಂಗ್ಲೆಂಡ್​
ಆರಂಭ: ಸಂಜೆ 6.30