ಹಾಕಿ ವಿಶ್ವಕಪ್: ಭಾರತಕ್ಕೆ ಇಂದು ಪಾಕಿಸ್ತಾನ ಎದುರಾಳಿ; ಎರಡನೇ ಸುತ್ತಿಗೇರಲು ಅಂಕ ಅನಿವಾರ್ಯ
ರಕ್ಷಣಾ ವಿಭಾಗದ ವೈಫಲ್ಯದಿಂದಾಗಿ ಇಂಗ್ಲೆಂಡ್ ಎದುರು ಅನುಭವಿಸಿದ ಸೋಲಿನಿಂದ ಒತ್ತಡಕ್ಕೆ ಸಿಲುಕಿರುವ ಭಾರತದ ಪುರುಷರ ತಂಡ ಎಫ್ಐಎಚ್ ಹಾಕಿ ವಿಶ್ವಕಪ್ ಟೂರ್ನಿಯ (
FIH Men''s Hockey World Cup
) 2ನೇ ಹಂತಕ್ಕೇರಲು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ (
) ಕನಿಷ್ಠ ಡ್ರಾವನ್ನಾದರೂ ಸಾಧಿಸಿ ಅಂಕ ಗಳಿಸಲೇಬೇಕಾಗಿದೆ. ಬುಧವಾರ ನಡೆಯಲಿರುವ ಡಿ ಗುಂಪಿನ 3ನೇ ಹಾಗೂ ಅಂತಿಮ ಪಂದ್ಯದಲ್ಲಿ ಹರ್ಮಾನ್ಪ್ರೀತ್ ಕೌರ್ ಪಡೆ, ಪಾಕಿಸ್ತಾನ ವಿರುದ್ಧದ ಕಳೆದೊಂದು ದಶಕದ ಪ್ರಾಬಲ್ಯವನ್ನು ಮುಂದುವರಿಸುವ ವಿಶ್ವಾಸದಲ್ಲಿದೆ.
ಇದುವರೆಗೆ ಆಡಿರುವ 2 ಪಂದ್ಯಗಳಿಂದ 3 ಅಂಕ ಗಳಿಸಿರುವ ಭಾರತ, ಪಾಕ್ ಎದುರು ಕನಿಷ್ಠ ಡ್ರಾ ಸಾಧಿಸಿ 1 ಅಂಕ ಹಂಚಿಕೊಂಡರೂ, 2ನೇ ಹಂತಕ್ಕೇರಿ ಪ್ರಶಸ್ತಿ ಆಸೆ ಜೀವಂತ ಉಳಿಸಿಕೊಳ್ಳಲಿದೆ. ಡಿ ಗುಂಪಿನಿಂದ ಇಂಗ್ಲೆಂಡ್ ಈಗಾಗಲೆ 2ನೇ ಹಂತಕ್ಕೆ ಅರ್ಹತೆ ಗಳಿಸಿದೆ. ಭಾರತ ತಂಡ ಪಾಕ್ ವಿರುದ್ಧ ಸೋತರಷ್ಟೇ ಪ್ರಶಸ್ತಿ ರೇಸ್ನಿಂದ ಹೊರಬೀಳುವ ಅಪಾಯವಿದೆ.
ಪಾಕಿಸ್ತಾನ 4 ಬಾರಿಯ ವಿಶ್ವ ಚಾಂಪಿಯನ್ ಆಗಿದ್ದರೂ, 8 ವರ್ಷಗಳ ಬಳಿಕ ವಿಶ್ವಕಪ್ ಆಡುತ್ತಿದ್ದು, ಈ ಬಾರಿ ಆಡಿರುವ 2 ಪಂದ್ಯಗಳಲ್ಲಿ 1 ಅಂಕವನ್ನಷ್ಟೇ ಗಳಿಸಿದೆ. 2010ರ ವಿಶ್ವಕಪ್ನಲ್ಲಿ ಕೊನೇ ಬಾರಿ ಮುಖಾಮುಖಿ ಆದಾಗ ಭಾರತ 4&1ರಿಂದ ಗೆದ್ದಿತ್ತು. ಇತ್ತೀಚೆಗೆ ವಿಶ್ವಕಪ್ಗೆ ಮುನ್ನ ಪ್ರೊ ಲೀಗ್ನಲ್ಲಿ ನಡೆದ 2 ಮುಖಾಮುಖಿಗಳಲ್ಲೂ ಭಾರತ 7-1, 4-3ರಿಂದ ಗೆದ್ದ ಮೇಲುಗೈ ಹೊಂದಿದೆ. ಪಾಕಿಸ್ತಾನ 2016ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಕೊನೆಯದಾಗಿ ಭಾರತದ ವಿರುದ್ಧ ಗೆದ್ದಿದೆ.
ಭಾರತ-ಪಾಕ್ ಮುಖಾಮುಖಿ ಭಾರಿ ಕುತೂಹಲ ಸೃಷ್ಟಿಸಿದ್ದು, ಪಂದ್ಯ ನಡೆಯಲಿರುವ ವ್ಯಾಗನರ್ ಸ್ಟೇಡಿಯಂನ ಎಲ್ಲ 10 ಸಾವಿರ ಟಿಕೆಟ್ಗಳು ಮಾರಾಟವಾಗಿವೆ.
*ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಹಾಟ್ಸ್ಟಾರ್.