Hockey: ಜೂನಿಯರ್​ ಮಹಿಳಾ ಹಾಕಿ ವಿಶ್ವಕಪ್: ಭಾರತ ಗೆಲುವಿನ ಆರಂಭ 
ಹಾಕಿ

Hockey: ಜೂನಿಯರ್​ ಮಹಿಳಾ ಹಾಕಿ ವಿಶ್ವಕಪ್: ಭಾರತ ಗೆಲುವಿನ ಆರಂಭ

ಸ್ಯಾನ್​ಟಿಯಾಗೊ: ಭಾರತ ತಂಡ ಜೂನಿಯರ್​ ಮಹಿಳಾ ಹಾಕಿ ವಿಶ್ವಕಪ್​ (Junior Women''s World Cup) ಟೂರ್ನಿಯ ತನ್ನ ಮೊದಲ ಪಂದ್ಯದಲ್ಲಿ ನಮೀಬಿಯಾ ಎದುರು ಗೋಲಿನ ಸುರಿಮಳೆ ಹರಿಸುವ ಮೂಲಕ 13-0 ಅಂತರದಿಂದ ಭರ್ಜರಿ ಗೆಲುವು ಸಾಧಿಸಿದೆ.

ಕನಿಕಾ ಸಿವಾಚ್​ (12, 30, 45ನೇ ನಿಮಿಷ) ಮತ್ತು ಹೀನಾ ಬಾನೊ (35, 35, 45) ಹ್ಯಾಟ್ರಿಕ್​ ಗೋಲು ಸಿಡಿಸಿದರೆ, ಸಾ ರಾಣಾ (10, 23) ಎರಡು ಗೋಲು ಬಾರಿಸಿದರು. ಸೋನಮ್​ (14), ಬಿನಿಮಾ ಧಾನ್​ (14), ಸಾ ಶುಕ್ಲಾ (27), ಇಶಿಕಾ (36), ಮನೀಷಾ (60) ತಲಾ 1 ಗೋಲು ಗಳಿಸಿದರು.

ಭಾರತ ತಂಡ ಬುಧವಾರ ತನ್ನ 2ನೇ ಪಂದ್ಯದಲ್ಲಿ ಜರ್ಮನಿ ವಿರುದ್ಧ ಆಡಲಿದೆ.