ಸುಲ್ತಾನ್ ಅಜ್ಲಾನ್ ಷಾ ಕಪ್ ಹಾಕಿ ಟೂರ್ನಿಗೆ ವೇದಿಕೆ ಸಜ್ಜು
ಇಪೋಹ್ (ಮಲೇಷ್ಯಾ): ಐದು ಬಾರಿಯ ಚಾಂಪಿಯನ್ ಹಾಗೂ ಟೂರ್ನಿ ಇತಿಹಾಸದ 2ನೇ ಅತ್ಯಂತ ಯಶಸ್ವಿ ತಂಡವೆನಿಸಿರುವ ಭಾರತ, ಭಾನುವಾರ ಆರಂಭವಾಗಲಿರುವ 31ನೇ ಆವೃತ್ತಿಯ ಸುಲ್ತಾನ್ ಅಜ್ಲಾನ್ ಷಾ ಕಪ್ ಹಾಕಿ (Sultan Azlan Shah Cup hockey) ಟೂರ್ನಿಯ ತನ್ನ ಮೊದಲ ಪಂದ್ಯದಲ್ಲಿ ದ. ಕೊರಿಯಾ ತಂಡವನ್ನು ಎದುರಿಸಲಿದ್ದು, ಶುಭಾರಂಭ ಕಾಣುವ ತವಕದಲ್ಲಿದೆ.
ಆಹ್ವಾನಿತ ಟೂರ್ನಿಯಲ್ಲಿ ಈ ಬಾರಿ ಭಾರತ, ದಣ ಕೊರಿಯಾದೊಂದಿಗೆ ಬೆಲ್ಜಿಯಂ, ಕೆನಡಾ, ನ್ಯೂಜಿಲೆಂಡ್ ಮತ್ತು ಆತಿಥೇಯ ಮಲೇಷ್ಯಾ ಕೂಡ ಭಾಗವಹಿಸಲಿವೆ. ರೌಂಡ್ ರಾಬಿನ್ ಮಾದರಿ ಲೀಗ್ ಹಂತದ ಬಳಿಕ ಅಗ್ರ 2 ತಂಡಗಳು ಫೈನಲ್ಗೇರಲಿವೆ. ನವೆಂಬರ್ 30ರಂದು ಪ್ರಶಸ್ತಿ ಕಾದಾಟ ನಡೆಯಲಿದೆ.
ಡಿೆಂಡರ್ ಸಂಜಯ್ ಸಾರಥ್ಯದಲ್ಲಿ ಕಣಕ್ಕಿಳಿಯಲಿರುವ ಭಾರತ ತಂಡ ಕನ್ನಡಿಗರಾದ ಮಿಡ್ಫೀಲ್ಡರ್ ಮೊಹಮದ್ ರಾಹೀಲ್ ಮೌಸೀನ್ ಮತ್ತು ಗೋಲು ಕೀಪರ್ ಮೋಹಿತ್ ಎಚ್.ಎಸ್. ಅವರನ್ನು ಒಳಗೊಂಡಿದೆ. ಮುಂದಿನ ವರ್ಷದ ವಿಶ್ವಕಪ್ ಮತ್ತು ಏಷ್ಯನ್ ಗೇಮ್ಸ್ ಸಿದ್ಧತೆಯ ದೃಷ್ಟಿಯಿಂದ ಇದು ಭಾರತಕ್ಕೆ ಮಹತ್ವದ ಟೂರ್ನಿ ಎನಿಸಿದೆ. ನಾಯಕ ಹರ್ಮಾನ್ಪ್ರೀತ್ ಸಿಂಗ್, ಮನ್ಪ್ರೀತ್ ಸಿಂಗ್ ಅವರಂಥ ಅನುಭವಿ ಆಟಗಾರರಿಗೆ ವಿಶ್ರಾಂತಿ ನೀಡಿರುವ ನಡುವೆ ಭಾರತಕ್ಕೆ ಕೆಲ ಹೊಸ ತಂಡ ಸಂಯೋಜನೆಯ ಪ್ರಯೋಗ ನಡೆಸಲು ಇದು ವೇದಿಕೆಯಾಗಿದೆ.