2036ರ ಒಲಿಂಪಿಕ್ಸ್ನಲ್ಲಿ 30-40 ಪದಕ, ಭಾರತದ ಗುರಿ!
ನವದೆಹಲಿ: ಭಾರತ 2036ರ ಒಲಿಂಪಿಕ್ಸ್ನಲ್ಲಿ (
) 30-40 ಪದಕಗಳನ್ನು ಗೆಲ್ಲುವ ಮಹತ್ವಾಕಾಂಕ್ಷೆಯನ್ನು ಹೊಂದಿದೆ. ಈ ನಿಟ್ಟಿನಲ್ಲಿ ದೇಶದೆಲ್ಲೆಡೆ ಪ್ರತಿಭಾನ್ವಿತರನ್ನು ಶೋಧಿಸಿ, ಚಿಕ್ಕ ವಯಸ್ಸಿನಿಂದಲೇ ಪೋಷಿಸುವ ಕಾರ್ಯ ಶೀಘ್ರದಲ್ಲೇ ಆರಂಭವಾಗಲಿದೆ ಎಂದು ಭಾರತೀಯ ಒಲಿಂಪಿಕ್ ಸಂಸ್ಥೆಯ (ಐಒಎ) ಸಿಇಒ ರುರಾಮ್ ಅಯ್ಯರ್ ಬುಧವಾರ ತಿಳಿಸಿದ್ದಾರೆ.
"ಭಾರತದ ಎಲ್ಲ ಜಿಲ್ಲೆಗಳನ್ನು ಅಪಾರವಾದ ಕ್ರೀಡಾ ಪ್ರತಿಭೆಗಳಿದ್ದಾರೆ. ನಾವು 5ರಿಂದ 15 ವಯಸ್ಸಿನ ಪ್ರತಿಭೆಗಳನ್ನು ಗುರುತಿಸುವ ಕೆಲಸ ಮಾಡಲಿದ್ದೇವೆ. ಯಾಕೆಂದರೆ 2036ರ ಒಲಿಂಪಿಕ್ಸ್ನಲ್ಲಿ ಸ್ಪರ್ಧಿಸಬೇಕಾಗಿರುವವರು ಅವರೇ ಆಗಿದ್ದಾರೆ. ಪ್ರತಿಭಾನ್ವೇಷಣೆಗೆ ಭಾರತೀಯ ಕ್ರೀಡಾ ಪ್ರಾಧಿಕಾರ ಈಗಾಗಲೆ ಯೋಜನೆ ರೂಪಿಸುತ್ತಿದೆ. ರಾಷ್ಟ್ರೀಯ ಕ್ರೀಡಾ ಒಕ್ಕೂಟಗಳಿಂದಲೂ ಇದಕ್ಕೆ ಸಮರ್ಥ ಬೆಂಬಲ ಸಿಗಬೇಕಾಗಿದೆ' ಎಂದು ಅವರು ಹೇಳಿದ್ದಾರೆ.
ಕೇಂದ್ರ ಸರ್ಕಾರ ಈಗಾಗಲೆ ಮುಂದಿನ 5 ವರ್ಷಗಳಿಗೆ (2026-31) ಖೇಲೋ ಇಂಡಿಯಾ ಯೋಜನೆಗೆ 36,441 ಕೋಟಿ ರೂ. ಅನುದಾನ ಮೀಸಲಿಟ್ಟಿದೆ. ಒಲಿಂಪಿಕ್ಸ್ನ ಪದಕ ಪಟ್ಟಿಯಲ್ಲಿ 2036ರಲ್ಲಿ ಅಗ್ರ 10 ಮತ್ತು 2048ರಲ್ಲಿ ಅಗ್ರ 5ರೊಳಗೆ ಸ್ಥಾನ ಪಡೆಯುವುದು ಸರ್ಕಾರದ ಗುರಿಯಾಗಿದೆ.