ಏಷ್ಯಾಡ್ಗೆ ಭಾರತದ 504 ಕ್ರೀಡಾಪಟುಗಳು?: ಕ್ರೀಡಾ ಸಚಿವಾಲಯದಿಂದ ಅನುಮೋದನೆ ಕೇಳಿದ ಐಒಎ
ನವದೆಹಲಿ: ಮುಂಬರುವ ಏಷ್ಯನ್ ಗೇಮ್ಸ್ನಲ್ಲಿ (
) ಭಾರತದ 275 ಪುರುಷರು ಮತ್ತು 229 ಮಹಿಳೆಯರ ಸಹಿತ 36 ಕ್ರೀಡೆಗಳಲ್ಲಿ ಒಟ್ಟು 504 ಕ್ರೀಡಾಪಟುಗಳ ಭಾಗವಹಿಸುವಿಕೆಗೆ ಕೇಂದ್ರ ಕ್ರೀಡಾ ಸಚಿವಾಲಯದ ಅನುಮೋದನೆಯನ್ನು ಭಾರತೀಯ ಒಲಿಂಪಿಕ್ ಸಂಸ್ಥೆ (ಐಒಎ) ಕೇಳಿದೆ. ಇದು ಕಳೆದ ಆವೃತ್ತಿಗಿಂತ ಸಣ್ಣ ತಂಡವಾಗಿರಲಿದೆ. 2022ರ ಹಾಂಗ್ರೆೌ ಏಷ್ಯಾಡ್ನಲ್ಲಿ ಭಾರತದಿಂದ 333 ಪುರುಷರು, 328 ಮಹಿಳೆಯರ ಸಹಿತ 40 ಕ್ರೀಡೆಗಳಲ್ಲಿ ಒಟ್ಟು 661 ಕ್ರೀಡಾಪಟುಗಳು ಭಾಗವಹಿಸಿದ್ದರು.
20ನೇ ಆವೃತ್ತಿಯ ಏಷ್ಯನ್ ಗೇಮ್ಸ್ ಸೆಪ್ಟೆಂಬರ್ 19ರಿಂದ ಅಕ್ಟೋಬರ್ 4ರವರೆಗೆ ಜಪಾನ್ನ ಐಚಿ ಪ್ರಿೆಕ್ಚರ್ ಮತ್ತು ನಗೋಯಾ ನಗರಗಳಲ್ಲಿ ನಡೆಯಲಿದೆ. 504 ಕ್ರೀಡಾಪಟುಗಳ ಜತೆಗೆ 167 ತರಬೇತಿ, ಸಹಾಯಕ ಸಿಬ್ಬಂದಿ ಮತ್ತು 69 ಅಧಿಕಾರಿಗಳ ಸಹಿತ ಒಟ್ಟು 740 ಸದಸ್ಯರ ತಂಡವನ್ನು ಏಷ್ಯಾಡ್ಗೆ ಕಳುಹಿಸಲು ಐಒಎ ಅನುಮತಿ ಕೇಳಿದೆ.
ಅಥ್ಲೆಟಿಕ್ಸ್ನಲ್ಲಿ ಸರ್ವಾಧಿಕ 72 ಕ್ರೀಡಾಪಟುಗಳು ಭಾಗವಹಿಸಲಿದ್ದರೆ, ಕ್ರಿಕೆಟ್ ಮತ್ತು ಶೂಟಿಂಗ್ ತಂಡಗಳು ಗರಿಷ್ಠ ಸಂಖ್ಯೆಯ ಸಹಾಯಕ ಸಿಬ್ಬಂದಿಯನ್ನು ಒಳಗೊಂಡಿದೆ. ಭಾರತದ ಪುರುಷರ ಮತ್ತು ಮಹಿಳಾ ಕ್ರಿಕೆಟ್ ತಂಡಗಳೊಂದಿಗೆ ಬಿಸಿಸಿಐ ತಲಾ 10ರಂತೆ ಒಟ್ಟು 20 ಸಹಾಯಕ ಸಿಬ್ಬಂದಿಯನ್ನು ಕಳುಹಿಸಲಿದೆ. ಕಳೆದ ಏಷ್ಯಾಡ್ನಲ್ಲಿ ಅತ್ಯಧಿಕ ಪದಕ ಗೆದ್ದಿದ್ದ ಶೂಟಿಂಗ್ ತಂಡ ಈ ಬಾರಿ 30 ಶೂಟರ್ಗಳನ್ನು ಒಳಗೊಂಡಿದ್ದು, ಜತೆಗೆ 15 ಸಹಾಯಕ ಸಿಬ್ಬಂದಿ ತೆರಳಲಿದ್ದಾರೆ. ಅಥ್ಲೆಟಿಕ್ಸ್ ತಂಡ 28 ಸಹಾಯಕ ಸಿಬ್ಬಂದಿಯನ್ನು ಒಳಗೊಂಡಿದೆ.
2022ರ ಏಷ್ಯಾಡ್ನಲ್ಲಿ ಭಾರತ 28 ಚಿನ್ನ, 38 ಬೆಳ್ಳಿ, 40 ಕಂಚಿನ ಸಹಿತ ಒಟ್ಟು 106 ಪದಕಗಳನ್ನು ಗೆದ್ದು ಹೊಸ ಇತಿಹಾಸ ಬರೆದಿತ್ತು. ಈ ಬಾರಿ ಆ ದಾಖಲೆಯನ್ನು ಮುರಿಯುವ ಹಂಬಲ ಭಾರತ ತಂಡದ್ದಾಗಿದೆ.
ಏಷ್ಯಾಡ್ಗೆ ಭಾರತ ತಂಡವನ್ನು ಕಳುಹಿಸಲು ಸರ್ಕಾರಕ್ಕೆ ಒಟ್ಟು 22.6 ಕೋಟಿ ರೂ. ವೆಚ್ಚವಾಗಲಿದೆ. ಇದರಲ್ಲಿ ಉದ್ಘಾಟನಾ&ಸಮಾರೋಪ ಸಮಾರಂಭಗಳಲ್ಲಿ ಭಾಗವಹಿಸುವ ಕ್ರೀಡಾಪಟುಗಳ ಸಮವಸ್ತ್ರ, ಕ್ರೀಡಾ ಸ್ಪರ್ಧೆಯ ಕಿಟ್, ನಿತ್ಯಭತ್ಯೆ, ವಿಮಾನದ ಟಿಕೆಟ್, ವಿಮೆ ವೆಚ್ಚದ ಮೊತ್ತ ಸೇರಿದೆ.
ಏಷ್ಯನ್ ಗೇಮ್ಸ್ನಲ್ಲಿ ಭಾಗವಹಿಸಲು ಭಾರತೀಯ ಅಥ್ಲೆಟಿಕ್ಸ್ ಸಂಸ್ಥೆ ಒಟ್ಟು 72 ಅಥ್ಲೀಟ್ಗಳ ಪಟ್ಟಿಯನ್ನು ಸಿದ್ಧಪಡಿಸಿದೆ. ಇದರಲ್ಲಿ ರಾಜ್ಯದ 6 ಅಥ್ಲೀಟ್ಗಳು ಸ್ಥಾನ ಪಡೆದಿದ್ದಾರೆ. ಅವರೆಂದರೆ ಯಶಸ್ ಪಿ. (400 ಮೀ. ಹರ್ಡಲ್ಸ್), ಸಿಂಧುಶ್ರೀ (ಪೋಲ್ವಾಲ್ಟ್), ಸುಪ್ರಿಯಾ (ಹೈಜಂಪ್), ಸ್ನೇಹಾ ಎಸ್.ಎಸ್. (4/100 ಮೀ. ರಿಲೇ, 4/100 ಮೀ. ಮಿಶ್ರ ರಿಲೇ), ಪೂವಮ್ಮ (4/400 ಮೀ. ರಿಲೇ), ಉನ್ನತಿ ಬೊಲ್ಲಾಂಡ (200 ಮೀ, 4/100 ಮೀ. ಮಿಶ್ರ ರಿಲೇ). ಈ ಪಟ್ಟಿಯನ್ನು ಭಾರತೀಯ ಅಥ್ಲೆಟಿಕ್ಸ್ ಸಂಸ್ಥೆ ಇನ್ನೂ ಅಧಿಕೃತವಾಗಿ ಪ್ರಕಟಿಸಿಲ್ಲ. ಯಾಕೆಂದರೆ ಕೂಟಕ್ಕೆ ಕೆಲ ಸಮಯ ಬಾಕಿ ಇದ್ದು, ಇನ್ನೂ ಕೆಲ ಅಥ್ಲೀಟ್ಗಳು ಕೂಟಕ್ಕೆ ಅರ್ಹತೆ ಸಂಪಾದಿಸುವ ನಿರೀೆ ಇದೆ. ಈಗ ಪಟ್ಟಿ ಮಾಡಿರುವ ತಂಡದಲ್ಲಿ ನೀರಜ್ ಚೋಪ್ರಾ, ತಜಿಂದರ್ಪಾಲ್ ಸಿಂಗ್ ಟೂರ್, ಅನ್ನುರಾಣಿ, ಅವಿನಾಶ್ ಸಾಬ್ಲೆ, ಜ್ಯೋತಿ ಯರಾಜಿ, ಪಾರುಲ್ ಚೌಧರಿ ಅವರಂಥ ಪ್ರಮುಖ ಅಥ್ಲೀಟ್ಗಳು ಸೇರಿದ್ದಾರೆ. ಈ ಬಾರಿ ಅಥ್ಲೆಟಿಕ್ಸ್ನಲ್ಲಿ ಭಾರತದಿಂದ ಸರ್ವಾಧಿಕ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. 2010ರ ಆವೃತ್ತಿಯಲ್ಲಿ 69 ಅಥ್ಲೀಟ್ಗಳು ಸ್ಪರ್ಧಿಸಿದ್ದು ಹಿಂದಿನ ಗರಿಷ್ಠ. ಕಳೆದ ಆವೃತ್ತಿಯಲ್ಲಿ 68 ಅಥ್ಲೀಟ್ಗಳು ಸ್ಪರ್ಧಿಸಿದ್ದರು ಮತ್ತು 6 ಚಿನ್ನ, 14 ಬೆಳ್ಳಿ, 9 ಕಂಚಿನ ಸಹಿತ 29 ಪದಕ ಗೆದ್ದಿದ್ದರು.