ಕ್ರೀಡೆ

ಮೂರನೇ ಸ್ಥಾನಕ್ಕೇರಿದ ಭಾರತ: ಏಷ್ಯನ್ ಚಾಂಪಿಯನ್ಸ್ ಟ್ರೋಫಿ ವಿಜೇತರಿಗೆ 1.10 ಕೋಟಿ ರೂ. ಬಹುಮಾನ ಮೊತ್ತ

ನವದೆಹಲಿ: ದಾಖಲೆಯ ನಾಲ್ಕನೇ ಬಾರಿಗೆ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟವೇರಿದ ಭಾರತ ತಂಡ ಎ್ಐಎಚ್ ಪುರುಷರ ಹಾಕಿ ವಿಶ್ವ ರ‌್ಯಾಂಕಿಂಗ್‌ನಲ್ಲಿ ಒಂದು ಸ್ಥಾನ ಬಡ್ತಿ ಪಡೆದು ಮೂರನೇ ಸ್ಥಾನಕ್ಕೇರಿದೆ. ಇದರೊಂದಿಗೆ ವಿಶ್ವ ರ‌್ಯಾಂಕಿಂಗ್‌ನಲ್ಲಿ ಎರಡನೇ ಬಾರಿಗೆ ಮೂರನೇ ಸ್ಥಾನಕ್ಕೇರಿದ ಸಾಧನೆ ಮಾಡಿದೆ.

ಭಾನುವಾರ ಬಿಡುಗಡೆಯಾದ ಪರಿಷ್ಕೃತ ರ‌್ಯಾಂಕಿಂಗ್‌ನಲ್ಲಿ ಭಾರತ (2,777.35) ಅಂಕದೊಂದಿಗೆ ಇಂಗ್ಲೆಂಡ್ (2,763.87) ತಂಡವನ್ನು ಹಿಂದಿಕ್ಕಿ ಈ ಸಾಧನೆ ಮಾಡಿದೆ. ಈ ಹಿಂದೆ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಬಳಿಕ ಭಾರತ ರ‌್ಯಾಂಕಿಂಗ್‌ನಲ್ಲಿ ಮೊದಲ ಬಾರಿಗೆ 3ನೇ ಸ್ಥಾನ ಪಡೆದುಕೊಂಡಿತ್ತು. ನೆದರ್ಲೆಂಡ್ (2,095.90) ಹಾಗೂ ಬೆಲ್ಜಿಯಂ (2,917.87) ಕ್ರಮವಾಗಿ ಅಗ್ರ ಎರಡು ಸ್ಥಾನ ಪಡೆದುಕೊಂಡಿವೆ. ಏಷ್ಯನ್ ಚಾಂಪಿಯನ್ಸ್ ಟ್ರೋಫಿ ರನ್ನರ್ ಅಪ್ ಮಲೇಷ್ಯಾ11ನೇ ಸ್ಥಾನದಲ್ಲಿದೆ. ಲೀಗ್ ಹಂತದಲ್ಲಿ ಟೂರ್ನಿಯಿಂದ ಹೊರಬಿದ್ದ ಪಾಕಿಸ್ತಾನ 16ನೇ ಸ್ಥಾನದಲ್ಲಿದೆ.

₹ 1.10 ಕೋಟಿ ಬಹುಮಾನ ಪ್ರಕಟ
ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಆತಿಥ್ಯ ವಹಿಸಿದ್ದ ತಮಿಳುನಾಡು ಸರ್ಕಾರ, ಪ್ರಶಸ್ತಿ ವಿಜೇತ ಭಾರತ ಹಾಕಿ ತಂಡಕ್ಕೆ 1.10 ಕೋಟಿ ರೂ. ಬಹುಮಾನ ಮೊತ್ತ ನೀಡುವುದಾಗಿ ೋಷಿಸಿದೆ. ಈ ಮುನ್ನ ಹಾಕಿ ಇಂಡಿಯಾ ತಂಡದ ಪ್ರತಿ ಆಟಗಾರರಿಗೆ ತಲಾ 3 ಲಕ್ಷ ರೂ. ಮತ್ತು ತರಬೇತಿ ಸಿಬ್ಬಂದಿಗೆ ತಲಾ 1.5 ಲಕ್ಷ ರೂ. ಬಹುಮಾನ ಪ್ರಕಟಿಸಿತ್ತು.

ರ‌್ಯಾಂಕಿಂಗ್‌ನಲ್ಲಿ ಬಡ್ತಿ ಪಡೆದ ಭಾರತ: ಏಷ್ಯನ್ ಚಾಂಪಿಯನ್ಸ್ ಟ್ರೋಫಿ ವಿಜೇತರಿಗೆ ಬಹುಮಾನ ಮೊತ್ತ ಪ್ರಕಟ