Virat Kohli : ಐಪಿಎಲ್ 2025ರ 18ನೇ ಆವೃತ್ತಿಯಲ್ಲಿ ವಿರಾಟ್ ಕೊಹ್ಲಿ ಬ್ಯೂಸಿಯಾಗಿದ್ದಾರೆ. ಕೊಹ್ಲಿ ಮೈದಾನದ ಹೊರಗೆ ಮಾತ್ರವಿಲ್ಲದೆ ಸಾಮಾಜಿಕ ಮಾಧ್ಯಮಗಳಲ್ಲಿ ಕೂಡ ಸಕ್ರಿಯರಾಗಿದ್ದಾರೆ. ಇತ್ತೀಚಿಗೆ ನಟಿ ಅವನೀತ್ ಕೌರ್ ಅವರ ಹಾಟ್ ಫೋಟೋವೊಂದಕ್ಕೆ ಲೈಕ್ ಒತ್ತುವ ಮೂಲಕ ಕೊಹ್ಲಿ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡಿದ್ದರು.
ಮುಂದುವರೆದು ಇನ್ಸ್ಟಾಗ್ರಾಮ್ ಅಲ್ಗಾರಿದಮ್ ತಪ್ಪಿನಿಂದಾಗಿ ನನ್ನ ಖಾತೆಯಿಂದ ಲೈಕ್ ಹೋಗಿದೆ ಎಂದು ಕೊಹ್ಲಿ ಸ್ಪಷ್ಟನೆ ಕೊಟ್ಟಿದ್ದರು. ಇದರ ನಡುವೆ ಗಾಯಕ ರಾಹುಲ್ ವೈದ್ಯ ಮಧ್ಯಪ್ರವೇಶಿ ವಿರಾಟ್ ಅವರ ಸ್ಪಷ್ಟಿಕರಣವನ್ನು ಅಪಹಾಸ್ಯ ಮಾಡುವಂತ ಕೆಲ ಪೋಸ್ಟ್ಗಳು ತನ್ನ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.
ಮುಂದಕ್ಕೆ ಹೊದಂತೆ ಅಲ್ಗಾರಿದಮ್ ಅನೇಕ ಪೋಟೋಗಳನ್ನು ಇಷ್ಟಪಡಬಹುದು ಹುಡಿಗಿಯರೇ ಹುಷಾರಾಗಿರಿ ಇದು ಇನ್ಸ್ಟಾಗ್ರಾಮ್ ತಪ್ಪೆ? ಎಂದು ರಾಹುಲ್ ವೈದ್ಯ ಹಂಚಿಕೊಂಡಿದ್ದಾರೆ. ಮುಂದುವರೆದು ಕೊಹ್ಲಿ ಸೂಚಿಸಿದಂತೆ ನನ್ನ ಇನ್ಸ್ಟಾಗ್ರಾಮ್ ಖಾತೆಯನ್ನು ಅಲ್ಗಾರಿದಮ್ ಬ್ಲಾಕ್ ಮಾಡಿದೆಯೇ? ಎಂದು ಪ್ರಶ್ನಿಸಿದ್ದಾರೆ. ಇದು ನಾನು ಇನ್ಸ್ಟಾಗ್ರಾಮ್ ದೋಷ ಎಂದು ಭಾವಿಸುತ್ತೇನೆ. ವಿರಾಟ್ ನನ್ನ ಬ್ಲಾಕ್ ಮಾಡಿರಲಿಲ್ಲ. ಇನ್‌ಸ್ಟಾಗ್ರಾಮ್‌ನ ಅಲ್ಗಾರಿದಮ್ ವಿರಾಟ್ ಕೊಹ್ಲಿಗೆ, ''ನಿಮ್ಮ ಪರವಾಗಿ ನಾನು ರಾಹುಲ್ ವೈದ್ಯ ಅವರನ್ನು ಬ್ಲಾಕ್ ಮಾಡುತ್ತೇನೆ' ಎಂದು ಹೇಳಿದೆ ಇದು ಸರಿಯೇ?" ಎಂದಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ವಿರಾಟ್ ಬಗ್ಗೆ ಪೋಸ್ಟ್ ಮಾಡಿದ ನಂತರ, ರಾಹುಲ್ ವೈದ್ಯ ಕಿಂಗ್ ಕೊಹ್ಲಿ ಅಭಿಮಾನಿಗಳ ಗುರಿಯಾಗಿದ್ದಾರೆ. ಇತ್ತೀಚಿನ ಇಂಟರ್ನೆಟ್ ಚಟುವಟಿಕೆಗಳ ಬಗ್ಗೆ ಕೊಹ್ಲಿ ಅಭಿಮಾನಿಗಳು ಸಾಮಾಜಿಕ ಮಾಧ್ಯಮದಲ್ಲಿ ತಮ್ಮನ್ನು ನಿಂದಿಸುತ್ತಿದ್ದಾರೆ ಎಂದು ವೈದ್ಯ ಹೇಳಿದ್ದಾರೆ.
"ವಿರಾಟ್ ಕೊಹ್ಲಿ ಅಭಿಮಾನಿಗಳು ವಿರಾಟ್ ಗಿಂತಲೂ ದೊಡ್ಡ ಜೋಕರ್ಗಳು!" ತಮ್ಮ ಕುಟುಂಬವನ್ನು ಗುರಿಯಾಗಿಸಿಕೊಂಡು ನಡೆಸಲಾದ ದೌರ್ಜನ್ಯದ ಬಗ್ಗೆ ಅವರು ತಮ್ಮ ಕೋಪವನ್ನು ವ್ಯಕ್ತಪಡಿಸುತ್ತಾ, "ಈಗ ನೀವು ನನ್ನನ್ನು ನಿಂದಿಸುತ್ತಿದ್ದೀರಿ ಅದು ಸರಿ ಆದರೆ ನೀವು ನನ್ನ ಹೆಂಡತಿಯನ್ನು ನನ್ನ ಸಹೋದರಿಯನ್ನು ನಿಂದಿಸುತ್ತಿದ್ದೀರಿ.. ಅವರಿಗೆ ಇದಕ್ಕೂ ಯಾವುದೇ ಸಂಬಂಧವಿಲ್ಲ! ಹಾಗಾಗಿ ನಾನು ಹೇಳಿದ್ದು ಸರಿ. ಅದಕ್ಕಾಗಿಯೇ ನೀವೆಲ್ಲರೂ ವಿರಾಟ್ ಕೊಹ್ಲಿ ಅಭಿಮಾನಿಗಳು ಜೋಕರ್ಗಳು!''ಎಂದು ಎಂದು ಪೋಸ್ಟ್ ಮಾಡಿದ್ದಾರೆ.(ಏಜೆನ್ಸೀಸ್)