ಕ್ರೀಡೆ

ಐಪಿಎಲ್​ಗೆ ಯಶಸ್ವಿ ಪುನರಾಗಮ ಕಂಡ ಬಗ್ಗೆ ಕನ್ನಡಿಗ ಕರುಣ್​ ನಾಯರ್​ ಹೇಳಿದ್ದಿಷ್ಟು...

ನವದೆಹಲಿ: ಕಳೆದ ದೇಶೀಯ ಕ್ರಿಕೆಟ್​ ಋತುವಿನಲ್ಲಿ ರನ್​ಮಳೆ ಹರಿಸಿದ್ದರೂ, ಐಪಿಎಲ್​ 18ನೇ ಆವೃತ್ತಿಯ ಮೊದಲ 4 ಪಂದ್ಯಗಳಲ್ಲಿ ಬೆಂಚು ಕಾಯಿಸಿದ್ದ ಕರ್ನಾಟಕದ ಬ್ಯಾಟರ್​ ಕರುಣ್​ ನಾಯರ್​, ಇಂಪ್ಯಾಕ್ಟ್​ ಪ್ಲೇಯರ್​ ಆಗಿ 5ನೇ ಪಂದ್ಯದಲ್ಲಿ ಕೊನೆಗೂ ಸಿಕ್ಕ ಅವಕಾಶವನ್ನು ಭರ್ಜರಿಯಾಗಿ ಬಳಸಿಕೊಂಡರು. ಈ ಅವಕಾಶಕ್ಕಾಗಿ ನಾನು ಕಾದು ಕುಳಿತಿದ್ದೆ. ಮಾನಸಿಕವಾಗಿ ಪಂದ್ಯ ಆಡಲು ಸಿದ್ಧನಾಗಿದ್ದೆ ಎಂದು ಕರುಣ್​ 2022ರ ನಂತರ ಐಪಿಎಲ್​ನಲ್ಲಿ ಮೊದಲ ಪಂದ್ಯವಾಡಿದ ಕರುಣ್​ ಹೇಳಿದರು.

40 ಎಸೆತಗಳಲ್ಲಿ 12 ಬೌಂಡರಿ, 5 ಸಿಕ್ಸರ್​ ಸಹಿತ 89 ರನ್​ ಗಳಿಸಿದ ಕರುಣ್​, ಪಂದ್ಯವನ್ನು ಡೆಲ್ಲಿಗೆ ಬಹುತೇಕ ಗೆದ್ದುಕೊಟ್ಟಿದ್ದರು. ಆದರೆ ಇತರರ ವೈಲ್ಯದಿಂದಾಗಿ ಡೆಲ್ಲಿ ನಿರಾಸೆ ಅನುಭವಿಸುವಂತಾಯಿತು. "ಐಪಿಎಲ್​ನಲ್ಲಿ ಈ ಹಿಂದೆಯೂ ಆಡಿದ್ದರಿಂದ ಆತ್ಮವಿಶ್ವಾಸದಲ್ಲಿದ್ದೆ. ಆರಂಭಿಕ ಕೆಲ ಎಸೆತಗಳ ಬಳಿಕ ಲಯ ಕಂಡುಕೊಂಡೆ. ನನ್ನ ಬ್ಯಾಟಿಂಗ್​ ಖುಷಿ ನೀಡಿತು. ಆದರೆ ತಂಡ ಗೆದ್ದಿದ್ದರೆ ಈ ಆಟ ಇನ್ನಷ್ಟು ಸಂತಸ ತರುತಿತ್ತು' ಎಂದು ಕರುಣ್​ ಹೇಳಿದರು.