IND vs ENG: ಲಾರ್ಡ್ಸ್‌ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತ 22 ರನ್‌ಗಳ ಹೀನಾಯ ಸೋಲನ್ನು ಅನುಭವಿಸಿತು. ಆಂಗ್ಲರು ನೀಡಿದ 193 ರನ್‌ಗಳ ಗುರಿಯನ್ನು ಬೆನ್ನತ್ತುವಲ್ಲಿ ಶುಭಮನ್ ಗಿಲ್ ಪಡೆ ವಿಫಲವಾಯಿತು. ಅರ್ಧಶತಕ ಮೂಲಕ ಪಂದ್ಯದ ಕೊನೆಯವರೆಗೂ ಅಜೇಯರಾಗಿ ಉಳಿದಿದ್ದ ರವೀಂದ್ರ ಜಡೇಜಾ (61 ಎಸೆತ, 181 ಎಸೆತಗಳಲ್ಲಿ 4 ಬೌಂಡರಿ, 1 ಸಿಕ್ಸರ್) ಏಕಾಂಗಿ ಹೋರಾಟ ಕಡೆಗೂ ಫಲಿಸಲಿಲ್ಲ.
ಇಂಗ್ಲೆಂಡ್ ಬೌಲರ್‌ಗಳ ಪೈಕಿ ಕ್ಯಾಪ್ಟನ್ ಬೆನ್ ಸ್ಟೋಕ್ಸ್ ಮತ್ತು ಜೋಫ್ರಾ ಆರ್ಚರ್ ತಲಾ ಮೂರು ವಿಕೆಟ್ ಪಡೆದು ಮಿಂಚಿದರೆ, ಬ್ರೈಡನ್ ಕಾರ್ಸೆ ಎರಡು ವಿಕೆಟ್ ಪಡೆದರು. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಸೋಲುತ್ತಿದ್ದಂತೆ ಪ್ರತಿಕ್ರಿಯಿಸಿದ ಕ್ರಿಕೆಟ್ ದಿಗ್ಗಜ ಸುನಿಲ್ ಗವಾಸ್ಕರ್, ಕೊಟ್ಟ ಗುರಿಯನ್ನು ಬೆನ್ನತ್ತಲು ಟೀಮ್ ಇಂಡಿಯಾ ಬ್ಯಾಟರ್ಗಳ ಎಡವಟ್ಟೇ ಕಾರಣ ಎಂದಿದ್ದಾರೆ.
"ಭಾರತ ಎರಡನೇ ಇನ್ನಿಂಗ್ಸ್‌ನಲ್ಲಿ ಕನಿಷ್ಠ 60ರಿಂದ 70 ರನ್‌ಗಳ ಕೊಡುಗೆಯನ್ನು ನೀಡಿದ್ದರೆ, ಫಲಿತಾಂಶ ಬೇರೆಯೇ ಆಗ್ತಿತ್ತು. ಆದರೆ, ಟೀಮ್ ಇಂಡಿಯಾ ಬ್ಯಾಟರ್ಗಳು ಹಾಗೆ ಮಾಡಲಿಲ್ಲ. ಸ್ಪಿನ್ನರ್‌ಗಳಾದ ಜೋ ರೂಟ್ ಮತ್ತು ಶೋಯೆಬ್ ಬಶೀರ್ ಬೌಲಿಂಗ್ ಮಾಡುವಾಗ ಜಡೇಜಾ ಆಕ್ರಮಣಕಾರಿಯಾಗಿ ಆಡಬೇಕಿತ್ತು ಎಂದು ಹಲವರು ಟೀಕಿಸಿದ್ದಾರೆ. ಆದರೆ, ಆ ಸಮಯದಲ್ಲಿ ಜಡೇಜಾ ಆಡಿದ ರೀತಿ ಸರಿಯೇ ಇತ್ತು. ಕಾರಣ, ಅವರೊಂದಿಗೆ ಬ್ಯಾಟಿಂಗ್ ಸಾಥ್ ಕೊಡಲು ಇನ್ಯಾರು ಇರಲಿಲ್ಲ" ಎಂದಿದ್ದಾರೆ.
ಇದನ್ನೂ ಓದಿ: ಕಾಲೇಜು ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ: ಇಬ್ಬರು ಉಪನ್ಯಾಸಕ ಸೇರಿ ಮೂವರ ಬಂಧನ! College Student
"ಇಲ್ಲಿ ಜಡೇಜಾ ಏಕಾಂಗಿ ಹೋರಾಟಕ್ಕೆ ನಾನು ಫುಲ್ ಮಾರ್ಕ್ಸ್ಗಳನ್ನು ಕೊಡುತ್ತೇನೆ. ಆದರೆ, ಆತನ ಮಂದಗತಿಯ ಬ್ಯಾಟಿಂಗ್ ಪ್ರದರ್ಶನ ತಂಡದ ಸೋಲಿಗೆ ಕಾರಣವಾಯಿತು. ವೇಗವಾಗಿ ಇನ್ನಿಂಗ್ಸ್ ಆಡಿದಿದ್ದರೆ ಖಂಡಿತ ಟೀಮ್ ಇಂಡಿಯಾ ಗೆಲ್ಲುವ ಸಾಧ್ಯತೆಗಳು ಹೆಚ್ಚಿತ್ತು" ಎಂದು ಗವಾಸ್ಕರ್ ಹೇಳಿದ್ದಾರೆ,(ಏಜೆನ್ಸೀಸ್).