ನವದೆಹಲಿ: ಇಂದು (ಅ.17) ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನ್ಯೂಜಿಲೆಂಡ್ ಮತ್ತು ಟೀಮ್ ಇಂಡಿಯಾ (Team India) ವಿರುದ್ಧದ ಮೊದಲ ಟೆಸ್ಟ್ ಪಂದ್ಯ ನಡೆಯುತ್ತಿದ್ದು, ಕಿವಿ ಪಡೆ ಎದುರು ಅಬ್ಬರಿಸುವಲ್ಲಿ ಭಾರತ ತೀರ ಪರದಾಡಿದೆ. ಮೊದಲು ಬ್ಯಾಟಿಂಗ್ಗೆ ಇಳಿದ ಟೀಮ್ ಇಂಡಿಯಾ, 31.2 ಓವರ್ ಅಂತ್ಯಕ್ಕೆ ತನ್ನೆಲ್ಲಾ ವಿಕೆಟ್ಗಳನ್ನು ಕಳೆದುಕೊಂಡಿರುವುದು ಇದೀಗ ಭಾರೀ ಬೇಸರಕ್ಕೆ ಕಾರಣವಾಗಿದೆ. ಕೇವಲ 46 ರನ್ಗೆ ಆಲ್ಔಟ್ ಆಗಿರುವ ಭಾರತ, ಅತ್ಯಂತ ಕಳಪೆ ಪ್ರದರ್ಶನ ನೀಡಿರುವುದು ಸದ್ಯ ಕ್ರಿಕೆಟ್ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ (Appreciate Virat Kohli ).
ಇದನ್ನೂ ಓದಿ: ಕಿವೀಸ್ ಬೌಲಿಂಗ್ ದಾಳಿಗೆ ತತ್ತರಿಸಿದ ಭಾರತ: ಕೊಹ್ಲಿ ಸೇರಿ ಐವರು ಡಕ್, ಕೇವಲ 46 ರನ್ಗೆ ಆಲೌಟ್ | India vs New Zealand
ನ್ಯೂಜಿಲೆಂಡ್ ವಿರುದ್ಧ ಮೊದಲು ಬ್ಯಾಟಿಂಗ್ ಮಾಡಲು ಆಯ್ಕೆ ಮಾಡಿಕೊಂಡ ಹಿನ್ನಲೆ ಟೀಮ್ ಇಂಡಿಯಾದ ಬ್ಯಾಟಿಂಗ್ ಲೈನ್ನಲ್ಲಿ ಕೊಂಚ ಬದಲಾವಣೆಗಳು ಕಂಡುಬಂದಿತು. ರೋಹಿತ್ ಶರ್ಮ ಜತೆ ಓಪನಿಂಗ್ ಬರಬೇಕಿದ್ದ ವಿರಾಟ್ ಕೊಹ್ಲಿ (Virat Kohli), ಶಾಕಿಂಗ್ ರೀತಿ ಮೂರನೇ ಕ್ರಮಾಂಕದಲ್ಲಿ ತಂಡದ ಪರ ಕಣಕ್ಕಿಳಿದರು. ಶೀಘ್ರವೇ ಮೊದಲೆರೆಡು ವಿಕೆಟ್ಗಳು ಉರುಳಿದ ಬೆನ್ನಲ್ಲೇ ಮೈದಾನಕ್ಕೆ ಬಂದ ವಿರಾಟ್, ತಾವು ಕೂಡ ಡಕ್ಔಟ್ ಆಗುವ ಮುಖೇನ ಪೆವಿಲಿಯನ್ನತ್ತ ಸಾಗಿದರು. ಇದು ಅಭಿಮಾನಿಗಳಲ್ಲಿ ತೀವ್ರ ಅಚ್ಚರಿ ಮೂಡಿಸಿತು. ನಿರೀಕ್ಷಿಸಿದ್ದ ಸ್ಟಾರ್ ಬ್ಯಾಟರ್ಗಳೇ ಒಬ್ಬರಂತೆ ಮತ್ತೊಬ್ಬರು ತಮ್ಮ ವಿಕೆಟ್ಗಳನ್ನು ಬಹಳ ವೇಗವಾಗಿ ಕಳೆದುಕೊಂಡಿದ್ದು, ನೋಡುಗರಲ್ಲಿ ಉತ್ಸಾಹವನ್ನು ಮರೆಮಾಚಿತು.
ಇನ್ನು ವಿರಾಟ್ ಪ್ರದರ್ಶನದ ಬಗ್ಗೆ ಮಾತನಾಡದ ಟೀಮ್ ಇಂಡಿಯಾದ ಮಾಜಿ ಹಿರಿಯ ಆಟಗಾರ ಸಂಜಯ್ ಮಂಜ್ರೇಕರ್, "ನ್ಯೂಜಿಲೆಂಡ್ ವಿರುದ್ಧ ಕೊಹ್ಲಿ ಮೂರನೇ ಕ್ರಮಾಂಕದಲ್ಲಿ ಬರಲು ಒಪ್ಪಿಕೊಂಡಿದ್ದು ನನಗೆ ನಿಜಕ್ಕೂ ಸಂತಸ ತಂದಿದೆ. ವಿರಾಟ್ ಅವರ ಈ ನಡೆಗೆ ನಾನು ಸಲಾಂ ಎಂದು ಹೇಳಲು ಬಯಸುತ್ತೇನೆ. ಏಕೆಂದರೆ, ತಂಡಕ್ಕಾಗಿ ತಮ್ಮ ಬ್ಯಾಟಿಂಗ್ ಆರ್ಡರ್ ಅನ್ನೇ ಬದಲಾಯಿಸಿಕೊಂಡಿದ್ದು ಮೆಚ್ಚುವ ಸಂಗತಿ. ಈ ಹಿಂದೆ ಸೌರವ್ ಗಂಗೂಲಿ ಮತ್ತು ಸಚಿನ್ ತೆಂಡೂಲ್ಕರ್ ತಮ್ಮ ಬ್ಯಾಟಿಂಗ್ ಕ್ರಮಾಂಕವನ್ನು ಬದಲಿಸಿಕೊಳ್ಳಬೇಕಿದ್ದ ಸಮಯದಲ್ಲಿ ಆ ನಿರ್ಧಾರವನ್ನು ಒಪ್ಪಲಿಲ್ಲ. ಆದ್ರೆ, ವಿರಾಟ್ ತೆಗೆದುಕೊಂಡ ಈ ನಿಲುವು ನನಗೆ ಸರಿ ಎನಿಸಿತು. ಇದಕ್ಕೆ ಹೇಳೋದು ಅವರನ್ನು ಒಬ್ಬ ಟ್ರೂ ಚಾಂಪಿಯನ್' ಅಂತ" ಎಂದು ಮೆಚ್ಚಿ ಮಾತನಾಡಿದ್ದಾರೆ,(ಏಜೆನ್ಸೀಸ್).