ಕ್ರೀಡೆ

ಸೋಲು ತಪ್ಪಿಸಿದ ಹರ್ಮಾನ್‌ಪ್ರೀತ್: ಮೂರನೇ ಸ್ಥಾನದಲ್ಲಿ ಭಾರತ ಹಾಕಿ ತಂಡ

ಪ್ಯಾರಿಸ್: ನಾಯಕ ಹರ್ಮಾನ್‌ಪ್ರೀತ್ ಸಿಂಗ್ (59ನೇ ನಿಮಿಷ) ಕೊನೇಕ್ಷಣದಲ್ಲಿ ಸಿಕ್ಕ ಪೆನಾಲ್ಟಿಯನ್ನು ಗೋಲಾಗಿ ಪರಿವರ್ತಿಸುವುದರೊಂದಿಗೆ ಭಾರತ ಹಾಕಿ ತಂಡ ಒಲಿಂಪಿಕ್ಸ್‌ನಲ್ಲಿ ಸೋಲಿನಿಂದ ಪಾರಾಗಿದೆ. ಟೋಕಿಯೊ ಒಲಿಂಪಿಕ್ಸ್ ಕಂಚು ವಿಜೇತ ಭಾರತ ತಂಡ ಸೋಮವಾರ ನಡೆದ ತನ್ನ ಎರಡನೇ ಲೀಗ್ ಪಂದ್ಯದಲ್ಲಿ 2016ರ ಒಲಿಂಪಿಕ್ಸ್ ಚಾಂಪಿಯನ್ ಅರ್ಜೆಂಟೀನಾ ಎದುರು 1-1 ಗೋಲುಗಳಿಂದ ರೋಚಕ ಡ್ರಾ ಸಾಧಿಸಿದೆ. ಇದರೊಂದಿಗೆ ಬಿ ಗುಂಪಿನಲ್ಲಿ ಮೂರನೇ ಸ್ಥಾನ ಕಾಯ್ದುಕೊಂಡಿದೆ.

ಪಂದ್ಯದಲ್ಲಿ 9 ಪೆನಾಲ್ಟಿ ಕಾರ್ನರ್‌ಗಳಲ್ಲಿ ಗೋಲು ದಾಖಲಿಸಲು ವಿಲವಾದ ಭಾರತ ಸೋಲಿನ ಭೀತಿ ಎದುರಿಸಿತು. ಆದರೆ ನಿರ್ಣಾಯಕ ಅವಕಾಶದಲ್ಲಿ ಪುಟಿದೆದ್ದು ಸಮಬಲ ಸಾಧಿಸಿತು. 22ನೇ ನಿಮಿಷದಲ್ಲಿ ಲೂಕಾಸ್ ಮಾರ್ಟಿನೆಜ್ ಫೀಲ್ಡ್ ಗೋಲು ದಾಖಲಿಸಿ ಅರ್ಜೆಂಟೀನಾಗೆ ಆರಂಭಿಕ ಮುನ್ನಡೆ ಒದಗಿಸಿದರು. ಪಂದ್ಯದಲ್ಲಿ ಹಿಡಿತ ಸಾಧಿಸಿದ ಅರ್ಜೆಂಟಿನಾ 36ನೇ ನಿಮಿಷದಲ್ಲಿ ಪೆನಾಲ್ಟಿ ಅವಕಾಶದಲ್ಲಿ ಗೋಲು ದಾಖಲಿಸುವಲ್ಲಿ ವಿಲವಾಯಿತು. ನ್ಯೂಜಿಲೆಂಡ್ ಎದುರು ರೋಚಕ ಗೆಲುವು ದಾಖಲಿಸಿದ್ದ ಭಾರತ, ಅರ್ಜೆಂಟೀನಾದ ಆಕ್ರಮಣಕಾರಿ ಆಟಕ್ಕೆ ತಕ್ಕ ಪೈಪೋಟಿ ನೀಡಿತು. ಆಸ್ಟ್ರೇಲಿಯಾ ಎದುರು ಮೊದಲ ಪಂದ್ಯದಲ್ಲಿ ಸೋಲುಂಡಿದ್ದ ಅರ್ಜೆಂಟೀನಾ ಡ್ರಾಗೆ ತೃಪ್ತಿಪಟ್ಟಿತು.

ಭಾರತ ತನ್ನ ಮುಂದಿನ ಪಂದ್ಯದಲ್ಲಿ ಮಂಗಳವಾರ ಐರ್ಲೆಂಡ್ ಸವಾಲು ಎದುರಿಸಲಿದೆ. ಇನ್ನೊಂದು ಗೆಲುವು ಕಂಡರೆ ಹರ್ಮಾನ್‌ಪ್ರೀತೆ ಪಡೆ ಕ್ವಾರ್ಟರ್‌ೈನಲ್ ಸ್ಥಾನವನ್ನು ಬಹುತೇಕ ಖಾತ್ರಿಪಡಿಸಿಕೊಳ್ಳಲಿದೆ.