ಕ್ರೀಡೆ

ಬಾಜಾ ಅರಾಗಾನ್ ರ್‍ಯಾಲಿಗೆ ಮರಳಿದ ಹರಿತ್ ನೋಹ್

ಬೆಂಗಳೂರು: ಹರಿತ್ ನೋಹ್ ಜುಲೈ 25ರಿಂದ 27ರವರೆಗೆ ಸ್ಪೇನ್‌ನಲ್ಲಿ ನಡೆಯಲಿರುವ ಐದನೇ ದಶಕದ 41ನೇ ಆವೃತ್ತಿಯ 'ಬಾಜಾ ಅರಾಗಾನ್' ರ್‍ಯಾಲಿಯಲ್ಲಿ ಸ್ಪರ್ಧಿಸಲಿದ್ದಾರೆ.

ನೋಹ್ ಶೆರ್ಕೊ ಟಿವಿಎಸ್ ರ್‍ಯಾಲಿ ಫ್ಯಾಕ್ಟರಿ ತಂಡಕ್ಕಾಗಿ ರ್‍ಯಾಲಿ ಜಿಪಿ ವಿಭಾಗದಲ್ಲಿ ಸ್ಪರ್ಧಿಸುತ್ತಿರುವ ನೋಹ್ ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಎಫ್‌ಐಎ-ಎಫ್‌ಐಎಂ ವರ್ಲ್ಡ್ ರ್‍ಯಾಲಿ-ರೈಡ್ ಚಾಂಪಿಯನ್‌ಷಿಪ್ (ಡಬ್ಲ್ಯು 2 ಆರ್‌ಸಿ) ನ ಅಂತಿಮ ಸುತ್ತುಗಳಿಗೆ ತಯಾರಿ ನಡೆಸುತ್ತಿದ್ದಾರೆ.

ಹರಿತ್ ನೋಹ್ ಗೆ ಈ ಸವಾಲು ಹೊಸದೇನಲ್ಲ. ಅವರು ಹಿಂದೆ ಬಾಜಾ ಅರಾಗಾನ್‌ನಲ್ಲಿ ಸ್ಥಿರ ಪ್ರದರ್ಶನಗಳನ್ನು ನೀಡಿದ್ದಾರೆ – 2023 ರಲ್ಲಿ 5ನೇ ಸ್ಥಾನ ಮತ್ತು 2024 ರಲ್ಲಿ 7ನೇ ಸ್ಥಾನ ಪಡೆದಿದ್ದಾರೆ.

ಈ ಬಗ್ಗೆ ಮಾತನಾಡಿದ ನೋಹ್ 'ಬಾಜಾ ಅರಾಗಾನ್ ಯಾವಾಗಲೂ ನನ್ನ ನೆಚ್ಚಿನ ಈವೆಂಟ್‌ಗಳಲ್ಲಿ ಒಂದಾಗಿದ್ದು, ಇಲ್ಲಿ ಸ್ಪರ್ಧಿಸಲು ಉತ್ಸುಕನಾಗಿದ್ದೇನೆ ಎಂದರು.

2025ರಲ್ಲಿ ಎರಡು ಸತತ ಗಾಯದ ಸಮಸ್ಯೆಗಳಿಂದ ಹೊರಬಂದ ನಂತರ, ನೋಹ್ ಇದೀಗ ಮತ್ತೆ ಸ್ಪರ್ಧಾತ್ಮಕ ಹಂತಕ್ಕೆ ಮರಳುತ್ತಿದ್ದಾರೆ.