ಮುಂಬೈ ಇಂಡಿಯನ್ಸ್​ ತಂಡದಿಂದ ದೀಪಾವಳಿಯ ಶುಭಾಶಯ ಏಜೆನ್ಸಿ
ಕ್ರೀಡೆ

ಹಾರ್ದಿಕ್ ಪಾಂಡ್ಯ​ ವರ್ಗಾವಣೆ ಸುಳಿವು ಬಿಟ್ಟುಕೊಟ್ಟ ಮುಂಬೈ ಇಂಡಿಯನ್ಸ್​!

ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಮುಂಬೈ ಇಂಡಿಯನ್ಸ್​ ತಂಡ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿರುವ ಶುಭಾಶಯದ ಸಂದೇಶದಿಂದ ಹಾರ್ದಿಕ್​ ಪಾಂಡ್ಯ ಚಿತ್ರವನ್ನು ಕೈಬಿಡಲಾಗಿದೆ

ನವದೆಹಲಿ: ಹಾರ್ದಿಕ್​ ಪಾಂಡ್ಯ ಮುಂಬೈ ಇಂಡಿಯನ್ಸ್​ ತಂಡದಿಂದ ವರ್ಗಾವಣೆ ಆಗುವುದು ಬಹುತೇಕ ಖಚಿತಗೊಂಡಿದೆ. ಭಾನುವಾರ ಸ್ವತಃ ಮುಂಬೈ ಇಂಡಿಯನ್ಸ್​ ಫ್ರಾಂಚೈಸಿ ಕೂಡ ಇದರ ಸ್ಪಷ್ಟ ಸುಳಿವು ಬಿಟ್ಟುಕೊಟ್ಟಿದೆ.

ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಮುಂಬೈ ಇಂಡಿಯನ್ಸ್​ ತಂಡ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿರುವ ಶುಭಾಶಯದ ಸಂದೇಶದಿಂದ ಹಾರ್ದಿಕ್​ ಪಾಂಡ್ಯ ಚಿತ್ರವನ್ನು ಕೈಬಿಡಲಾಗಿದೆ. ಈ ಪೋಸ್ಟ್​ನಲ್ಲಿ ರೋಹಿತ್​ ಶರ್ಮ, ಜಸ್​ಪ್ರೀತ್​ ಬುಮ್ರಾ, ತಿಲಕ್​ ವರ್ಮ, ಸೂರ್ಯಕುಮಾರ್​, ನಮನ್​ ಧೀರ್​ ಜತೆಗೆ ಮಹಿಳಾ ತಂಡದ ನಾಯಕಿ ಹರ್ಮಾನ್​ಪ್ರೀತ್​ ಕೌರ್​ ಮತ್ತಿತರರ ಚಿತ್ರಗಳಿವೆ. ಆದರೆ ಕಳೆದ 2 ಆವೃತ್ತಿಗಳಲ್ಲಿ ತಂಡದ ನಾಯಕರಾಗಿದ್ದ ಹಾರ್ದಿಕ್​ ಪಾಂಡ್ಯ ಅವರನ್ನೇ ಕೈಬಿಡಲಾಗಿದೆ.

ಇದು ಹಾರ್ದಿಕ್​ ವರ್ಗಾವಣೆ ಆಗುತ್ತಿರುವ ಖಚಿತ ಸಂದೇಶ ಎನ್ನಲಾಗಿದೆ. ಮುಂಬೈ-ಪಂಜಾಬ್​ ಕಿಂಗ್ಸ್​ ತಂಡಗಳ ವರ್ಗಾವಣೆ ಒಪ್ಪಂದ ಬಹುತೇಕ ಅಂತಿಮವಾಗಿದ್ದು, ಅಧಿಕೃತ ಪ್ರಕಟಣೆಯಷ್ಟೇ ಬಾಕಿ ಉಳಿದಿದೆ. ಜತೆಗೆ ಹಾರ್ದಿಕ್​ ಮತ್ತು ಅರ್ಷದೀಪ್​ ನಡುವಿನ ವರ್ಗಾವಣೆಯ ಮೊತ್ತದ ಬಗ್ಗೆ ಮಾತ್ರ ಇನ್ನಷ್ಟೇ ಸ್ಪಷ್ಟತೆ ಸಿಗಬೇಕಾಗಿದೆ.