ಕ್ರೀಡೆ

ಪತ್ನಿ ನತಾಶಾ ಈಜುಡುಗೆ ಫೋಟೋಗೆ ಪಾಂಡ್ಯ ನೀಡಿದ ಪ್ರತಿಕ್ರಿಯೆ ಹೇಗಿತ್ತು ಗೊತ್ತೇ?

ಮುಂಬೈ: ಭಾರತ ತಂಡದ ಆಲ್ರೌಂಡರ್​ ಹಾರ್ದಿಕ್ ಪಾಂಡ್ಯ ಹಾಗೂ ಪತ್ನಿ ನತಾಶಾ ಸ್ಟಾನ್ಕೊವಿಕ್​ ಜೋಡಿ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುವ ಜೋಡಿ. ಸದ್ಯ ಕೋವಿಡ್​ನಿಂದ ಲಾಕ್​ಡೌನ್​ ಬಿಸಿ ಎದುರಿಸುತ್ತಿರುವ ಈ ಜೋಡಿ ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರ ಸಕ್ರಿಯವಾಗಿದೆ. ನತಾಶಾ ಇತ್ತೀಚೆಗೆ ಕಪ್ಪುಬಣ್ಣದ ಬಿಕಿನಿ ತೊಟ್ಟು ಕಪ್ಪು ಕನ್ನಡಕ ಹಾಕಿದ್ದ ಹಳೇ ಫೋಟೋವೊಂದನ್ನು ಪೋಸ್ಟ್​ ಮಾಡಿದ್ದರು. ಗುಡ್​ ಟೈಮ್ಸ್​..ಕಂದು ಬಣ್ಣ ಎಂದು ಬರೆದುಕೊಂಡಿದ್ದರು. ಇದಕ್ಕೆ ಸಾವಿರಾರು ಮಂದಿ ಪ್ರತಿಕ್ರಿಯೆ ನೀಡಿದ್ದರು. ಪತಿ ಹಾರ್ದಿಕ್​ ಪಾಂಡ್ಯ ಕೂಡ ಪತ್ನಿ ಫೋಟೋಗೆ ಹಾರ್ಟ್​ ಎಮೊಜಿಯೊಂದಿಗೆ ಹಾಕುವ ಮೂಲಕ ಫಿದಾ ಆಗಿದ್ದಾರೆ.

ಸದ್ಯ ಕ್ರಿಕೆಟ್​ನಲ್ಲಿ ಬಿಡುವಿನಲ್ಲಿ ಹಾರ್ದಿಕ್ ಪಾಂಡ್ಯ ಪತ್ನಿ ಹಾಗೂ ಮಗನೊಂದಿಗೆ ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ. ಹಾರ್ದಿಕ್ ಪಾಂಡ್ಯ ಜತೆಗಿನ ಹಳೇ ಫೋಟೋಗಳನ್ನು ತಮ್ಮ ಇನ್​ಸ್ಟಾಗ್ರಾಂನಲ್ಲಿ ಪ್ರಕಟಿಸುತ್ತಿದ್ದಾರೆ. ವಿಶೇಷ ಉಡುಪುಗಳನ್ನು ತೊಟ್ಟಿರುವ ಫೋಟೋಗಳು ವೈರಲ್​ ಆಗಿವೆ.

ಕೋವಿಡ್​-19 ಪ್ರಕರಣಗಳು ಕಂಡುಬಂದ ಹಿನ್ನೆಲೆಯಲ್ಲಿ 14ನೇ ಐಪಿಎಲ್​ ಅನಿದಿರ್ಷ್ಟಾವಧಿವರೆಗೆ ಮುಂದೂಡಿಕೆಯಾಗಿದೆ. ಟೆಸ್ಟ್​ ತಂಡದ ಹೊರಗುಳಿದಿರುವ ಪಾಂಡ್ಯ ಮುಂಬರುವ ಶ್ರೀಲಂಕಾ ಪ್ರವಾಸದಲ್ಲಿ ಎರಡನೇ ಸ್ಥರದ ಭಾರತ ತಂಡದ ನಾಯಕ ಸ್ಥಾನಕ್ಕೆ ಪ್ರಬಲ ಆಕಾಂಯಾಗಿದ್ದಾರೆ. ಜುಲೈನಲ್ಲಿ ಭಾರತ ಎರಡನೇ ಸ್ಥರದ ತಂಡ ಲಂಕಾ ಪ್ರವಾಸ ಕೈಗೊಳ್ಳಲಿದೆ.