ಕ್ರೀಡೆ

ಗುಜರಾತ್​ ಟೈಟನ್ಸ್​ ಕೈಬಿಟ್ಟ ಹಾರ್ದಿಕ್​!; ಈ ಬಗ್ಗೆ ತಂಡ ಹೇಳುವುದೇನು?

ಮುಂಬೈ: ಕಳೆದ ಹಲವು ದಿನಗಳಿಂದ ಟೀಮ್​ ಇಂಡಿಯಾದ ಆಲ್​ರೌಂಡರ್​ ಹಾರ್ದಿಕ್​ ಪಾಂಡ್ಯ ಮುಂಬರುವ ಐಪಿಎಲ್​ನಲ್ಲಿ ಗುಜರಾತ್​ ಟೈಟನ್ಸ್​ ತಂಡವನ್ನು ಮುನ್ನಡೆಸುದಿಲ್ಲ. ಟೀಮ್​ನ ಕ್ಯಾಪ್ಟನ್​ ಆಗಿ ಕೂಡ ಮುಂದುವರೆಯುವುದಿಲ್ಲ ಎಂಬ ಸುದ್ದಿ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಈ ಬಗ್ಗೆ ಕ್ರಿಕೆಟ್​ ಅಭಿಮಾನಿಗಳು ಆತಂಕ ಮತ್ತು ಅನುಮಾನ ವ್ಯಕ್ತಪಡಿಸಿದ್ದು, ಇನ್ಮುಂದೆ ಗುಜರಾತ್​ ತಂಡದ ಪರ ಪಾಂಡ್ಯ ಆಡುವುದಿಲ್ಲವೇ? ಹಾಗಾದ್ರೆ ಯಾರ ತಂಡದಲ್ಲಿ ಆಡಲಿದ್ದಾರೆ ಎಂಬ ಪ್ರಶ್ನೆಯನ್ನು ಮುಂದಿಟ್ಟಿದ್ದರು.

ಟೀಮ್​ ಇಂಡಿಯಾಗೆ ಉತ್ತಮ ಆಲ್​ರೌಂಡರ್​ ಆಗಿ ಗುರುತಿಸಿಕೊಂಡಿರುವ ಹಾರ್ದಿಕ್​ ಕಳೆದ ಎರಡು ವರ್ಷಗಳಿಂದ ಗುಜರಾತ್​ ಟೈಟನ್ಸ್​ ತಂಡದ ನಾಯಕನಾಗಿ ಐಪಿಎಲ್​ ಆವೃತ್ತಿಯಲ್ಲಿ ಮಿಂಚಿದ್ದಾರೆ. ಈ ಹಿಂದೆ ಮುಂಬೈ ಇಂಡಿಯನ್ಸ್​ ತಂಡದಲ್ಲಿ ಸ್ಪೋಟಕ ಬ್ಯಾಟ್ಸ್​ಮನ್ ಆಗಿ ಮಿಂಚಿದ್ದ ಪಾಂಡ್ಯ ಇದೀಗ ಗುಜರಾತ್​ ಬಿಟ್ಟು ಮತ್ತೆ ಮುಂಬೈ ತಂಡಕ್ಕೆ ಹೋಗಲಿದ್ದಾರೆ ಎಂದು ವದಂತಿ ಹೇಳಿದೆ. ಆದ್ರೆ, ಈ ಬಗ್ಗೆ ಇಲ್ಲಿಯವರೆಗೂ ಯಾವುದೇ ಅಧಿಕೃತ ಮಾಹಿತಿ ಹೊರಬಂದಿರಲಿಲ್ಲ. ಇದೀಗ ಸ್ವತಃ ಗುಜರಾತ್​ ಟೈಟನ್ಸ್​ ತಂಡವೇ ಈಗ ಇದು ವದಂತಿಯೋ ಅಥವಾ ಅಧಿಕೃತವೋ ಎಂಬುದನ್ನು ದೃಢಪಡಿಸಿದೆ.

ಐಪಿಎಲ್‌ನಲ್ಲಿ ಎರಡು ಯಶಸ್ವಿ ಸೀಸನ್‌ಗಳ ನಂತರ ಹಾರ್ದಿಕ್ ಪಾಂಡ್ಯ ಫ್ರಾಂಚೈಸಿಯನ್ನು ತೊರೆಯುತ್ತಿದ್ದಾರೆ ಎಂದು ಗುಜರಾತ್ ಟೈಟಾನ್ಸ್ ಅಧಿಕೃತವಾಗಿ ಘೋಷಿಸಿದೆ. ಕ್ರಿಕೆಟ್ ನಿರ್ದೇಶಕರಾದ ವಿಕ್ರಮ್ ಸೋಲಂಕಿ, "ಗುಜರಾತ್ ಟೈಟಾನ್ಸ್‌ನ ಮೊದಲ ನಾಯಕನಾಗಿ ಹಾರ್ದಿಕ್ ಪಾಂಡ್ಯ ಫ್ರಾಂಚೈಸ್‌ಗೆ ಎರಡು ಅದ್ಭುತ ಸೀಸನ್​ಗಳನ್ನು ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಇದರ ಪರಿಣಾಮವಾಗಿ ಒಂದು ಐಪಿಎಲ್ ಚಾಂಪಿಯನ್‌ಶಿಪ್ ಪಟ್ಟ ಮತ್ತು ಫೈನಲ್‌ನಲ್ಲಿ ರನರ್​ ಅಪ್​ ಆದೆವು" ಎಂದರು.

"ಈಗ ತಮ್ಮ ಮೂಲ ತಂಡವಾದ ಮುಂಬೈ ಇಂಡಿಯನ್ಸ್‌ಗೆ ಮರಳುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ. ನಾವು ಅವರ ನಿರ್ಧಾರವನ್ನು ಗೌರವಿಸುತ್ತೇವೆ ಮತ್ತು ಅವರ ಮುಂದಿನ ಪ್ರಯತ್ನಗಳಲ್ಲಿ ಅವರಿಗೆ ಶುಭ ಹಾರೈಸುತ್ತೇವೆ" ಎಂದು ಗುಜರಾತ್ ಟೈಟಾನ್ಸ್ ತಂಡದ ಪರವಾಗಿ ಹೇಳಿದ್ದಾರೆ,(ಏಜೆನ್ಸೀಸ್).