ಕ್ರೀಡೆ

ಏಷ್ಯಾಕಪ್​ಗೆ ಮುನ್ನ ಹೊಸ ಹೇರ್​ಸ್ಟೈಲ್​ನಿಂದ ಗಮನಸೆಳೆದ ಹಾರ್ದಿಕ್​ ಪಾಂಡ್ಯ!

ನವದೆಹಲಿ: ಟೀಮ್​ ಇಂಡಿಯಾ ಆಲ್ರೌಂಡರ್​ ಹಾರ್ದಿಕ್​ ಪಾಂಡ್ಯ ಹೊಸ ಕೇಶವಿನ್ಯಾಸದೊಂದಿಗೆ ಏಷ್ಯಾಕಪ್​ ಟಿ20 ಟೂರ್ನಿಗಾಗಿ ದುಬೈಗೆ ತೆರಳಿದ್ದು, ಅವರ ಈ ಹೊಸ ಸ್ಲ್ಟೈಲ್​ನ ಚಿತ್ರಗಳು ಶುಕ್ರವಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿವೆ.

ಮರಳು ಹೊಂಬಣ್ಣದ ಅವರ ಶಾರ್ಟ್​ ಹೇರ್​ಕಟ್​ನ ಚಿತ್ರಗಳನ್ನು ಇನ್​ಸ್ಟಾಗ್ರಾಮ್​ನಲ್ಲಿ ಪ್ರಕಟಿಸಿರುವ ಹಾರ್ದಿಕ್​, "ನ್ಯೂ ಮಿ' ಎಂಬ ಅಡಿಬರಹ ಬರೆದಿದ್ದಾರೆ. ಸೆ.9ರಿಂದ ನಡೆಯಲಿರುವ ಏಷ್ಯಾಕಪ್​ಗೆ ಪೂರ್ವಭಾವಿಯಾಗಿ ಗುರುವಾರ ದುಬೈನಲ್ಲಿ ಒಗ್ಗೂಡಿರುವ ಭಾರತ ತಂಡದ ಆಟಗಾರರು ಶುಕ್ರವಾರ ಅಭ್ಯಾಸ ಆರಂಭಿಸಿದರು.

ಹಾರ್ದಿಕ್​ ಪಾಂಡ್ಯ ಈ ಹಿಂದೆ ಹೊಂದಿದ್ದ ವಿವಿಧ ರೀತಿಯ ಹೇರ್​ಸ್ಟೈಲ್​ಗಳ ಚಿತ್ರವೂ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿವೆ. ಏಷ್ಯಾಕಪ್​ನಲ್ಲಿ ಭಾರತ ತಂಡ ಸೆ.10ರಂದು ಯುಎಇ ವಿರುದ್ಧ ತನ್ನ ಮೊದಲ ಪಂದ್ಯ ಆಡಲಿದೆ.