Virat Kohli: ಪ್ರಸಕ್ತ ಐಪಿಎಲ್ 18ನೇ ಆವೃತ್ತಿಯಲ್ಲಿ ಅದ್ಭುತ ಆಲ್ರೌಂಡ್ ಪ್ರದರ್ಶನ ನೀಡುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಕೇವಲ ಫ್ರಾಂಚೈಸಿ ಅಭಿಮಾನಿಗಳನ್ನು ಮಾತ್ರವಲ್ಲದೇ ಕ್ರಿಕೆಟ್ ಪ್ರಿಯರನ್ನು ರಂಜಿಸುವಲ್ಲಿ ಯಶಸ್ವಿಯಾಗಿದೆ. ಆಡಿದ ಮೊದಲೆರೆಡು ಪಂದ್ಯಗಳಲ್ಲಿ ಭರ್ಜರಿ, ರೋಚಕ ಜಯ ಸಾಧಿಸಿರುವ ಆರ್ಸಿಬಿ, ಹೆಚ್ಚುವರಿ ಅಂಕಗಳೊಂದಿಗೆ ಪ್ರಸ್ತುತ ಐಪಿಎಲ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಇನ್ನು ಆರ್ಸಿಬಿ ತಂಡದ ಬಲಿಷ್ಠ ಆಟಗಾರ, ಕ್ರಿಕೆಟ್ ದಿಗ್ಗಜ ವಿರಾಟ್ ಕೊಹ್ಲಿ ಬಗ್ಗೆ ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಮಾತನಾಡಿದ್ದಾರೆ.
ಇದನ್ನೂ ಓದಿ: ಕಾಯಕ ತತ್ವ ಜಾರಿಗೊಳಿಸಿದ ಮಹಾಯೋಗಿ > ಸದಾನಂದ ಶರಣರ ಆಶೀರ್ವಚನ > ಶ್ರೀ ಶಿವಕುಮಾರ ಸ್ವಾಮೀಜಿ ಜಯಂತಿ ಆಚರಣೆ
ಕಳೆದ ಆವೃತ್ತಿಯಲ್ಲಿ ಚಾಂಪಿಯನ್ಸ್ ಆಗಿ ಮಿಂಚಿದ ಕೋಲ್ಕತ ನೈಟ್ ರೈಡರ್ಸ್ ತಂಡ ಈ ಬಾರಿ ಸೋಲು-ಗೆಲುವಿನ ಮಿಶ್ರಣವನ್ನು ಹೊತ್ತು ಸಾಗಿದೆ. ತಂಡದ ಬಹುತೇಕ ಆಟಗಾರರು ಉತ್ತಮ ಆಲ್ರೌಂಡ್ ಪ್ರದರ್ಶನ ನೀಡುವಲ್ಲಿ ಎಡವಿದ್ದಾರೆ. ಬಹಳ ವರ್ಷಗಳಿಂದ ಕೆಕೆಆರ್ ತಂಡದಲ್ಲೇ ತಮ್ಮ ಸ್ಥಾನವನ್ನು ಭದ್ರ ಪಡಿಸಿಕೊಂಡಿರುವ ಕನ್ನಡಿಗ ಮನೀಶ್ ಪಾಂಡೆಯನ್ನು ಬಜ್ಜಿ, ವಿರಾಟ್ ಕೊಹ್ಲಿಗೆ ಹೋಲಿಕೆ ಮಾಡಿದ್ದಾರೆ.
"ವಿರಾಟ್ ಕೊಹ್ಲಿ ಫಿಟ್ನೆಸ್ ಮ್ಯಾಚ್ ಮಾಡುವ ಆಟಗಾರರು ಯಾರಾದರೂ ಇದ್ದಾರೆ ಎಂದರೆ ಅದು ಮನೀಶ್ ಪಾಂಡೆ ಮಾತ್ರ. 2008ರಿಂದ ಆರಂಭಗೊಂಡ ಐಪಿಎಲ್ ಮೊದಲ ಆವೃತ್ತಿಯಿಂದಲೂ ತಂಡದಲ್ಲಿರುವ ಅವರು, ಈಗಲೂ ಬಹಳ ಫಿಟ್ ಆಗಿದ್ದಾರೆ. ಕೊಹ್ಲಿಯಂತೆ ಗಟ್ಟಿಯಾಗಿ ತಂಡದ ಪರ ಮಿಂಚುತ್ತಿದ್ದಾರೆ" ಎಂದು ಬಜ್ಜಿ ಅಭಿಪ್ರಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಆಕಾಶ್ ಚೋಪ್ರಾ, "ಮಹೇಂದ್ರ ಸಿಂಗ್ ಧೋನಿ, ವಿರಾಟ್ ಕೊಹ್ಲಿ, ರೋಹಿತ್ ಶರ್ಮ ನಂತರ 2008ರಿಂದಲೂ ಐಪಿಎಲ್ ಆಡುತ್ತಿರುವ ನಾಲ್ಕನೇ ಆಟಗಾರ ಮನೀಶ್" ಎಂದು ನೆನಪಿಸಿದರು,(ಏಜೆನ್ಸೀಸ್).