ಕ್ರೀಡೆ

ಮಹಾರಾಜ ಟ್ರೋಫಿಯಲ್ಲಿ ಗುಲ್ಬರ್ಗಾ ಮಿಸ್ಟಿಕ್ಸ್​ಗೆ ಮಣಿದ ಮಂಗಳೂರು ಡ್ರ್ಯಾಗನ್ಸ್​

ಬೆಂಗಳೂರು: ನಾಯಕ ವೈಶಾಕ್​ ವಿಜಯ್​ ಕುಮಾರ್​ (31ಕ್ಕೆ 2), ಅಭಿಲಾಷ್​ ಶೆಟ್ಟಿ (20ಕ್ಕೆ 2) ಮತ್ತು ಅಮಿತ್​ ವರ್ಮ (13ಕ್ಕೆ 2) ಸಂಟಿತ ಬೌಲಿಂಗ್​ ದಾಳಿಯ ನೆರವಿನಿಂದ ಹಾಲಿ ಚಾಂಪಿಯನ್​ ಗುಲ್ಬರ್ಗಾ ಮಿಸ್ಟಿಕ್ಸ್​ ತಂಡ ಎರಡನೇ ಆವೃತ್ತಿಯ ಮಹಾರಾಜ ಟ್ರೋಫಿ ಕೆಎಸ್​ಸಿಎ ಟಿ20 ಟೂರ್ನಿಯಲ್ಲಿ ನಡೆದ ಭಾನುವಾರದ 2ನೇ ಪಂದ್ಯದಲ್ಲಿ ಮಂಗಳೂರು ಡ್ರಾ$ಗನ್ಸ್​ ವಿರುದ್ಧ 5 ವಿಕೆಟ್​ಗಳಿಂದ ಗೆಲುವು ದಾಖಲಿಸಿತು.

ಟಾಸ್​ ಸೋತು ಮೊದಲು ಬ್ಯಾಟಿಂಗ್​ಗೆ ಇಳಿದ ಮಂಗಳೂರು ತಂಡ 9 ವಿಕೆಟ್​ಗೆ 120 ರನ್​ ಗಳಿಸಲಷ್ಟೇ ಶಕ್ತವಾಯಿತು. ಪ್ರತಿಯಾಗಿ ಗುಲ್ಬರ್ಗಾ ತಂಡ ಆರ್​. ಸ್ಮರಣ್​ (62*) ಅರ್ಧಶತಕದಾಟದಿಂದ 17.1 ಓವರ್​ಗಳಲ್ಲಿ 5 ವಿಕೆಟ್​ಗೆ 121 ರನ್​ ಗಳಿಸಿ ಜಯಿಸಿತು.

ಮಂಗಳೂರು ಡ್ರಾ$ಗನ್ಸ್​: 9 ವಿಕೆಟ್​ಗೆ 120 (ಕೆವಿ ಸಿದ್ಧಾರ್ಥ್​ 8, ಬಿಆರ್​ ಶರತ್​ 7, ಎಂಜಿ ನವೀನ್​ 19, ಗೌರವ್​ ಧಿಮನ್​ 27, ಆದಿತ್ಯಾ 22*, ಅಭಿಲಾಷ್​ ಶೆಟ್ಟಿ 20ಕ್ಕೆ 2, ವೈಶಾಕ್​ 31ಕ್ಕೆ 2, ಅಮಿತ್​ ವರ್ಮ 13ಕ್ಕೆ 2), ಗುಲ್ಬರ್ಗಾ ಮಿಸ್ಟಿಕ್ಸ್​: 17.1 ಓವರ್​ಗಳಲ್ಲಿ 5 ವಿಕೆಟ್​ಗೆ 121 (ಎಲ್​ಆರ್​ ಚೇತನ್​ 8, ಆರ್​. ಸ್ಮರಣ್​ 62, ಎಸ್​. ಶರತ್​ 20, ಸಂಕಲ್ಪ್​ 12ಕ್ಕೆ 1, ಕೆ. ಗೌತಮ್​ 29ಕ್ಕೆ 1, ಅನಿರುದ್ಧ 18ಕ್ಕೆ 1).