ಕ್ರೀಡೆ

ಗುಜರಾತ್ ಟೈಟಾನ್ಸ್‌ಗೆ ಇಂದು ರಾಜಸ್ಥಾನ ಚಾಲೆಂಜ್: ಗಿಲ್ ಪಡೆಗೆ ಅಗಸ್ಥಾನಕ್ಕೇರುವ ಹಂಬಲ

ಅಹಮದಾಬಾದ್: ಸೋಲಿನ ಆರಂಭದ ಬಳಿಕ ಹ್ಯಾಟ್ರಿಕ್ ಗೆಲುವು ದಾಖಲಿಸಿರುವ ಗುಜರಾತ್ ಟೈಟಾನ್ಸ್ ಹಾಗೂ ಹಿಂದಿನ 2 ಪಂದ್ಯಗಳ ಜಯದ ವಿಶ್ವಾಸದಲ್ಲಿರುವ ರಾಜಸ್ಥಾನ ರಾಯಲ್ಸ್ ತಂಡಗಳು ಐಪಿಎಲ್ 18ನೇ ಆವೃತ್ತಿಯಲ್ಲಿ ಬುಧವಾರ ಮುಖಾಮುಖಿ ಆಗಲಿವೆ. ಬ್ಯಾಟರ್‌ಗಳಿಗೆ ನೆರವು ನೀಡುವ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಬೌಲರ್‌ಗಳಿಗೆ ಪರೀಕ್ಷೆ ಎದುರಾಗುವ ನಿರೀಕ್ಷೆ ಇದೆ.

ಗುಜರಾತ್ ಆಡಿರುವ 4 ಪಂದ್ಯಗಳಲ್ಲಿ 3 ಗೆಲುವು, 1 ಸೋಲಿನೊಂದಿಗೆ 6 ಅಂಕ ಗಳಿಸಿ ಎರಡನೇ ಸ್ಥಾನದಲ್ಲಿದ್ದು, ರಾಜಸ್ಥಾನ ಎದುರು ಗೆದ್ದರೆ ಅಗ್ರಸ್ಥಾನಕ್ಕೇರುವ ಅವಕಾಶ ಹೊಂದಿದೆ. ಸಂಜು ಸ್ಯಾಮ್ಸನ್ ಪಡೆ 4 ಪಂದ್ಯಗಳಲ್ಲಿ 2 ಗೆಲುವು, 2 ಸೋಲಿನೊಂದಿಗೆ 4 ಅಂಕ ಕಲೆಹಾಕಿದೆ. ಬೌಲರ್‌ಗಳ ನಿರ್ವಹಣೆ ಉಭಯ ತಂಡಗಳ ಗೆಲುವಿನಲ್ಲಿ ನಿರ್ಣಾಯಕ ಪಾತ್ರವಹಿಸಿದ್ದು, ಅಹಮದಾಬಾದ್‌ನಲ್ಲಿ ಒಂದು ತಂಡದ ಗೆಲುವಿನ ಓಟಕ್ಕೆ ಬ್ರೇಕ್ ಬೀಳಲಿದೆ. ವೇಗಿ ಮೊಹಮದ್ ಸಿರಾಜ್ ಸತತ 2 ಪಂದ್ಯಗಳಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿಯೊಂದಿಗೆ ಆತ್ಮವಿಶ್ವಾಸ ವೃದ್ಧಿಸಿಕೊಂಡಿದ್ದು, ವೇಗಿ ಕನ್ನಡಿಗ ಪ್ರಸಿದ್ಧ ಕೃಷ್ಣ ಹಾಗೂ ಸಾಯಿ ಕಿಶೋರ್ ಗುಜರಾತ್ ಬೌಲಿಂಗ್ ವಿಭಾಗಕ್ಕೆ ಬಲ ತುಂಬಿದ್ದಾರೆ.

ಇನ್ನು ಆರಂಭಿಕ 2 ಪಂದ್ಯಗಳಲ್ಲಿ ದುಬಾರಿ ಎನಿಸಿದ್ದ ಜ್ರೋಾ ಆರ್ಚರ್ ನಂತರದ 2ರಲ್ಲಿ ಮ್ಯಾಚ್‌ವಿನ್ನಿಂಗ್ ಸ್ಪೆಲ್‌ನೊಂದಿಗೆ ಲಯಕ್ಕೆ ಮರಳಿದ್ದಾರೆ. ಬ್ಯಾಟರ್‌ಗಳ ಆರ್ಭಟದ ಟೂರ್ನಿಯಲ್ಲಿ ಬೌಲರ್‌ಗಳ ಮುಖಾಮುಖಿ ಕುತೂಹಲ ಮೂಡಿಸಿದೆ. ಅನುಭವಿ ಇಶಾಂತ್ ಶರ್ಮ ಹಾಗೂ ಲೆಗ್ ಸ್ಪಿನ್ನರ್ ರಶೀದ್ ಖಾನ್ ದುಬಾರಿಯಾ ಎನಿಸಿರುವುದು ಆತಿಥೇಯ ಗುಜರಾತ್‌ಗೆ ಹಿನ್ನಡೆ ಎನಿಸಿದೆ. ಕಗಿಸೋ ರಬಾಡ ಸ್ಥಾನ ತುಂಬಬಲ್ಲ ಸೂಕ್ತ ಬೌಲರ್‌ಗಳ ಕೊರತೆ ಟೈಟಾನ್ಸ್ ತಂಡಕ್ಕಿದ್ದು, ಗೆರಾಲ್ಟ್ ಕೋಟ್‌ಜೀ ಫಿಟ್ನೆಸ್‌ನ ನಿರೀಕ್ಷೆಯಲ್ಲಿದೆ. ಹಿಂದಿನ ಆವೃತ್ತಿಯಲ್ಲಿ ರಾಜಸ್ಥಾನ ತಂಡ ಪ್ಲೇಆ್ಗೇರುವಲ್ಲಿ ನಿರ್ಣಾಯಕ ಪಾತ್ರವಹಿಸಿದ್ದ ಜೋಸ್ ಬಟ್ಲರ್ ಈ ಬಾರಿ ಗುಜರಾತ್ ಪರ ಮಾಜಿ ತಂಡದ ಎದುರು ಕಣಕ್ಕಿಳಿಯಲಿದ್ದಾರೆ.

ರನ್‌ಮಳೆ ನಿರೀಕ್ಷೆ!

ಅಹಮದಾಬಾದ್ ಪಿಚ್ ಬ್ಯಾಟರ್‌ಗಳಿಗೆ ಹೆಚ್ಚಿನ ನೆರವು ಒದಗಿಸಲಿದ್ದು, ರನ್ ಮಳೆಯ ಸಾಧ್ಯತೆಗಳಿವೆ. ಜತೆಗೆ ವೇಗದ ಬೌಲರ್‌ಗಳಿಗೂ ಸಹಕಾರಿ ಎನಿಸಿದೆ. ಎರಡು ತಂಡಗಳ ಬ್ಯಾಟರ್‌ಗಳು ಸದ್ಯ ಭರ್ಜರಿ ಾರ್ಮ್‌ನಲ್ಲಿದ್ದಾರೆ. ಗಿಲ್‌ನ ನೆಚ್ಚಿನ ಮೈದಾನ ಇದಾಗಿದ್ದು, ಉತ್ತಮ ರನ್ ದಾಖಲೆ ಹೊಂದಿದ್ದಾರೆ. ಸಾಯಿ ಸುದರ್ಶನ್, ಜೋಸ್ ಬಟ್ಲರ್ ಜತೆಗೆ ಹಿಂದಿನ ಪಂದ್ಯದಲ್ಲಿ ಅಮೋಘ ಜತೆಯಾಟ ನೀಡಿರುವ ವಾಷಿಂಗ್ಟನ್ ಸುಂದರ್ ಲಯದಲ್ಲಿದ್ದು, ಗುಜರಾತ್ ಬ್ಯಾಟಿಂಗ್ ವಿಭಾಗವೂ ಬಲಿಷ್ಠ ಎನಿಸಿದೆ. ಇತ್ತ ರಾಜಸ್ಥಾನ ಬ್ಯಾಟರ್‌ಗಳು ಸಹ ಉತ್ತಮ ಾರ್ಮ್‌ನಲ್ಲಿದ್ದಾರೆ. ಯಶಸ್ವಿ ಜೈಸ್ವಾಲ್ ಹಿಂದಿನ ಪಂದ್ಯದಲ್ಲಿ ಾರ್ಮ್‌ಗೆ ಮರಳಿದ್ದು, ಸಂಜು ಸ್ಯಾಮ್ಸನ್ ಆರಂಭವನ್ನು ದೊಡ್ಡ ಮೊತ್ತವನ್ನಾಗಿಸ ಬೇಕಿದೆ. ರಿಯಾನ ಪರಾಗ್, ಧ್ರುವ ಜುರೆಲ್ ಸಹ ಅಪಾಯಕಾರಿ ಎನಿಸಬಲ್ಲರು.

ಮುಖಾಮುಖಿ:6

ಗುಜರಾತ್: 5

ರಾಜಸ್ಥಾನ: 1

ಆರಂಭ: ರಾತ್ರಿ 7.30

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಹಾಟ್‌ಸ್ಟಾರ್.