ಪುಣೆ: ಕುತ್ತಿಗೆ ನೋವಿನಿಂದಾಗಿ ಬೆಂಗಳೂರು ಟೆಸ್ಟ್ ತಪ್ಪಿಸಿಕೊಂಡಿದ್ದ ಬ್ಯಾಟರ್ ಶುಭಮಾನ್ ಗಿಲ್ ಮತ್ತು ಬೆಂಗಳೂರಿನಲ್ಲಿ 2ನೇ ದಿನದಾಟ ವೇಳೆ ಮೊಣಕಾಲಿನ ಗಾಯಕ್ಕೊಳಗಾಗಿದ್ದ ವಿಕೆಟ್ ಕೀಪರ್&ಬ್ಯಾಟರ್ ರಿಷಭ್ ಪಂತ್ 2ನೇ ಟೆಸ್ಟ್ ಪಂದ್ಯಕ್ಕೆ ಫಿಟ್ ಆಗುವ ನಿರೀೆ ಇದೆ. ಗಿಲ್ ಬೆಂಗಳೂರಿನಲ್ಲಿ ಈಗಾಗಲೆ ನೆಟ್ಸ್ನಲ್ಲಿ ಅಭ್ಯಾಸ ನಡೆಸಿದ್ದು, ಪಂದ್ಯ ಆಡಬಹುದು ಎಂದು ಡೋಶೆಟ್ ತಿಳಿಸಿದ್ದಾರೆ.
ಪಂತ್ 2022ರ ಡಿಸೆಂಬರ್ನಲ್ಲಿ ಕಾರು ಅಪಘಾತದಲ್ಲಿ ಗಾಯಕ್ಕೊಳಗಾಗಿದ್ದ ಮೊಣಕಾಲಿಗೆ ಚೆಂಡು ಬಡಿದ ಕಾರಣ ಗಾಯಗೊಂಡಿದ್ದರು. ಅವರ ಗೈರಿನಲ್ಲಿ ಧ್ರುವ ಜುರೆಲ್ ಕೀಪಿಂಗ್ ನಿರ್ವಹಿಸಿದ್ದರು. ಮುಂಬರುವ ಮಹತ್ವದ ಆಸ್ಟ್ರೆಲಿಯಾ ಪ್ರವಾಸಕ್ಕೆ ಪಂತ್ ಫಿಟ್ ಆಗಿರುವುದು ಬಹಳ ಮುಖ್ಯವಾಗಿದೆ. ಹೀಗಾಗಿ ಮುನ್ನೆಚ್ಚರಿಕೆಯ ಕ್ರಮವಾಗಿ ಪಂತ್ ಪುಣೆ ಟೆಸ್ಟ್ನಿಂದ ಹೊರಗುಳಿದರೂ ಅಚ್ಚರಿ ಇಲ್ಲ ಎನ್ನಲಾಗುತ್ತಿದೆ.
ಪುಣೆಯಲ್ಲಿ ಮಂಗಳವಾರ ಭಾರತ ತಂಡದ ಅಭ್ಯಾಸ ವೇಳೆ ಜುರೆಲ್ ಕಿಂಪಿಂಗ್ ಡ್ರಿಲ್ಗಳಲ್ಲಿ ಭಾಗವಹಿಸಿರುವುದು ಇದಕ್ಕೆ ಪುಷ್ಠಿ ಎನಿಸಿದೆ.