ಕ್ರೀಡೆ

ಟೀಮ್ ಇಂಡಿಯಾದ ಮಾಜಿ ಬ್ಯಾಟರ್ ಹಾಗೂ ಸಂಸದ ಗೌತಮ್ ಗಂಭೀರ್​ಗೆ ಬಡ್ತಿ ನೀಡಿದ ಲಖನೌ ಫ್ರಾಂಚೈಸಿ

ಲಖನೌ: ಮುಂದಿನ ವರ್ಷದ ಲೋಕಾಸಭಾ ಚುನಾವಣೆಯತ್ತ ಗಮನಸರಿಯುವ ಸಲುವಾಗಿ ಟೀಮ್ ಇಂಡಿಯಾದ ಮಾಜಿ ಬ್ಯಾಟರ್ ಹಾಗೂ ಸಂಸದ ಗೌತಮ್ ಗಂಭೀರ್ 2024ರ ಐಪಿಎಲ್‌ನಿಂದ ಹೊರಗುಳಿಯಲಿದ್ದಾರೆ ಎಂಬ ವರದಿಗಳ ನಡುವೆ ಅವರೀಗ ಲಖನೌ ಸೂಪರ್‌ಜೈಂಟ್ಸ್ ತಂಡದ ಗ್ಲೋಬಲ್ ಮೆಂಟರ್ ಆಗಿ ಬಡ್ತಿ ಪಡೆದಿದ್ದಾರೆ. ಇದರಿಂದ ಗಂಭೀರ್ ಇನ್ನು ಐಪಿಎಲ್ ಮಾತ್ರವಲ್ಲದೆ ಎಲ್‌ಎಸ್‌ಜಿ ತಂಡ ಇತರ ವಿದೇಶಿ ಟಿ20 ಲೀಗ್‌ಗಳಲ್ಲಿ ಹೊಂದಿರುವ ತಂಡಗಳಿಗೂ ಮಾರ್ಗದರ್ಶನ ನೀಡಲಿದ್ದಾರೆ. ಇದೇ ವೇಳೆ ಮಾಜಿ ಸ್ಪಿನ್ನರ್ ಶ್ರೀಧರನ್ ಶ್ರೀರಾಮ್‌ರನ್ನು ಮುಂದಿನ ಐಪಿಎಲ್‌ಗೆ ಲಖನೌ ತಂಡದ ಸಹಾಯಕ ಕೋಚ್ ಆಗಿ ನೇಮಿಸಲಾಗಿದೆ. ಕನ್ನಡಿಗ ಕೆಎಲ್ ನೇತೃತ್ವದ ತಂಡಕ್ಕೆ ಜಸ್ಟಿನ್ ಲ್ಯಾಂಗರ್ ಈಗಾಗಲೆ ಮುಖ್ಯ ಕೋಚ್ ಆಗಿದ್ದರೆ, ಪ್ರವೀಣ್ ತಾಂಬೆ ಸ್ಪಿನ್ ಬೌಲಿಂಗ್ ಮತ್ತು ಮಾರ್ನ್ ಮಾರ್ಕೆಲ್ ವೇಗದ ಬೌಲಿಂಗ್ ಕೋಚ್ ಆಗಿದ್ದಾರೆ. ಜಾಂಟಿ ರೋಡ್ಸ್ ಫೀಲ್ಡಿಂಗ್ ಕೋಚ್ ಮತ್ತು ಎಂಎಸ್‌ಕೆ ಪ್ರಸಾದ್ ಸ್ಟ್ರಾಟಜಿಕ್ ಸಲಹೆಗಾರ ಆಗಿ ನೇಮಕಗೊಂಡಿದ್ದಾರೆ.
https://twitter.com/LucknowIPL/status/1700384745165848884?s=20

ಶ್ರೀಧರನ್ ಸಹಾಯಕ ಕೋಚ್: ಟೀಮ್ ಇಂಡಿಯಾ ಮಾಜಿ ಸ್ಪಿನ್ನರ್ ಶ್ರೀಧರನ್ ಶ್ರೀರಾಮ್ ಮುಂಬರುವ ಐಪಿಎಲ್ ಆವೃತ್ತಿಯಲ್ಲಿ ಲಖನೌ ಸೂಪರ್ ಜೈಂಟ್ಸ್ ಶನಿವಾರ ಖಚಿತಪಡಿಸಿದೆ. 2016ರಿಂದ ಆರು ವರ್ಷ ಆಸ್ಟ್ರೇಲಿಯಾ ತಂಡದ ಸಹಾಯಕ ಕೋಚ್ ಆಗಿ ಲಖನೌ ಕೋಚ್ ಜಸ್ಟಿನ್ ಲ್ಯಾಂಗರ್ ಅವರೊಂದಿಗೆ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರ್‌ಸಿಬಿ ತಂಡದ ಕೋಚ್ ಆಗಿಯೂ ಸೇವೆ ಸಲ್ಲಿಸಿರುವ ಶ್ರೀಧರನ್, ಭಾರತದ ಪರ 8 ಏಕದಿನ ಪಂದ್ಯವನ್ನಾಡಿದ್ದಾರೆ.