ಕ್ರೀಡೆ

12ರಿಂದ ಬೆಂಗಳೂರು ಓಪನ್ ಟೆನಿಸ್ ಟೂರ್ನಿ : ಡೇವಿಸ್ ಕಪ್ ತಂಡದ ಆಟಗಾರರು ಭಾಗಿ

ಬೆಂಗಳೂರು: ಪಾಕಿಸ್ತಾನದಲ್ಲಿ ನಡೆದ ಡೇವಿಸ್ ಕಪ್ ಪಂದ್ಯದಲ್ಲಿ ಐತಿಹಾಸಿಕ ಗೆಲುವು ದಾಖಲಿಸಿದ ಭಾರತ ತಂಡದ ಭಾಗವಾಗಿದ್ದ ರಾಮ್‌ಕುಮಾರ್ ರಾಮನಾಥನ್, ಎನ್. ಶ್ರೀರಾಮ್ ಬಾಲಾಜಿ ಸೇರಿ ನಾಲ್ವರು ಪ್ರಮುಖ ಆಟಗಾರರು ಬೆಂಗಳೂರು ಓಪನ್ ಟೆನಿಸ್ ಟೂರ್ನಿಯಲ್ಲಿ ಭಾಗವಹಿಸಲಿದ್ದಾರೆ. ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆ ಅಂಗಣದಲ್ಲಿ ೆಬ್ರವರಿ 12ರಿಂದ 18ರವರೆಗೆ ನಡೆಯಲಿರುವ ಟೂರ್ನಿಯ ಸಿಂಗಲ್ಸ್‌ನಲ್ಲಿ ಅಗ್ರ ಆಟಗಾರ ಸುಮಿತ್ ನಗಾಲ್ ಆತಿಥೇಯರ ಸವಾಲು ಮುನ್ನಡೆಸಲಿದ್ದಾರೆ.

ಡಬಲ್ಸ್‌ನಲ್ಲಿ 2022ರ ಚಾಂಪಿಯನ್ ರಾಮ್‌ಕುಮಾರ್ - ಸಾಕೇತ್ ಮೈನೇನಿ ಜೋಡಿಯಾಗಿದ್ದು, ವಿಶ್ವ ನಂ.78 ಬಾಲಾಜಿ ಜರ್ಮನಿಯ ಆಂಡ್ರೆ ಬೆಗೆಮನ್ ಜತೆಯಾಗಿ ಆರನೇ ಶ್ರೇಯಾಂಕಿತ ಜೋಡಿ ಎನಿಸಿದೆ. ್ರಾನ್ಸ್‌ನ ಡಾನ್ ಹಾಗೂ ಕೊರಿಯಾ ಯುನ್ ಸಿಯೊಂಗ್ ಚುಂಗ್ ಜೋಡಿ ಟೂರ್ನಿಯಲ್ಲಿ ಅಗ್ರ ಶ್ರೇಯಾಂಕ ಪಡೆದುಕೊಂಡಿದೆ. ನಿಕಿ ಪೂಣಚ ದೇಶಬಾಂಧವ ರಿತ್ವಿಕ್ ಚೌಧರಿ ಜತೆಯಾಗಿ ಕಣಕ್ಕಿಳಿಯಲಿದ್ದು, 4ನೇ ಶ್ರೇಯಾಂಕಿತ ಜೋಡಿ ಎನಿಸಿದೆ.